Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಈ ಬಿಜೆಪಿ ನಾಯಕನ ಮಗ ಯುಪಿಎಸ್ಸಿಯಲ್ಲಿ 3ನೇ ಟಾಪರ್!

---Advertisement---

 

ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್‌ಸಿ) 2025ರ ನಾಗರಿಕ ಸೇವೆಗಳ ಪರೀಕ್ಷೆಯ ಅಂತಿಮ ಫಲಿತಾಂಶ ಈಗಾಗಲೇ ಹೊರಬಿದ್ದಿದ್ದು ಈ ಬಾರಿ ಈ ಬಿಜೆಪಿ ನಾಯಕನ ಮಗ ಮೂರನೇ ಟಾಪರ್​ ಆಗಿ ಹೊರಹೊಮ್ಮಿದ್ದಾನೆ.ಯುಪಿಎಸ್​​ಸಿ ಫಲಿತಾಂಶದಲ್ಲಿ ಬಿಜೆಪಿ ನಾಯಕ ಕೃಷ್ಣ ಧುಲ್ ಅವರ ಪುತ್ರ ಏಕಾಂಶ್ ಧುಲ್ ದೇಶದಲ್ಲಿ ಮೂರನೇ ಸ್ಥಾನ ಪಡೆದು ಎಲ್ಲರ ಗಮನ ಸೆಳೆದಿದ್ದಾರೆ.

ಯುಪಿಎಸ್‌ಸಿ ಪರೀಕ್ಷೆಯು ದೇಶದ ಅತ್ಯಂತ ಕಠಿಣ ಪರೀಕ್ಷೆಗಳಲ್ಲಿ ಒಂದು. ಇದರಲ್ಲಿ ಸತತ ಮೂರು ಬಾರಿ ಆಯ್ಕೆಯಾಗುವುದು ಅತ್ಯಂತ ಅಪರೂಪ ಮತ್ತು ಪ್ರತಿಭಾವಂತರಿಗೆ ಮಾತ್ರ ಸಾಧ್ಯವಾಗುವ ಸಾಧನೆ. ಏಕಾಂಶ್ ಇದು ಮೂರನೇ ಬಾರಿ ಆಯ್ಕೆಯಾಗಿದ್ದಾರೆ.

ಕೃಷ್ಣ ಧುಲ್ ಹರಿಯಾಣ ಬಿಜೆಪಿಯ ಹಿರಿಯ ನಾಯಕರಾಗಿದ್ದು, ಪ್ರಸ್ತುತ ಪಕ್ಷದ ವಕ್ತಾರರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರು ಹರಿಯಾಣ ರಾಜ್ಯ ಮಕ್ಕಳ ಕಲ್ಯಾಣ ಸಮಿತಿಯ ಮಾಜಿ ಪ್ರಧಾನ ಕಾರ್ಯದರ್ಶಿಯೂ ಆಗಿದ್ದರು. ಏಕಾಂಶ್ ಅವರ ತಾಯಿ ನಿರ್ಮಲ್ ಧುಲ್ ಪಂಚಕುಲದ ಸೆಕ್ಟರ್ 19ರ ಸರ್ಕಾರಿ ಹಿರಿಯ ಮಾಧ್ಯಮಿಕ ಶಾಲೆಯ ಪ್ರಾಂಶುಪಾಲರಾಗಿದ್ದಾರೆ.

ಏಕಾಂಶ್ ದೆಹಲಿಯ ಪ್ರತಿಷ್ಠಿತ ಶ್ರೀ ರಾಮ್ ಕಾಲೇಜ್ ಆಫ್ ಕಾಮರ್ಸ್‌ನಿಂದ ಬಿಎ (ಆನರ್ಸ್) ಪದವಿ ಪಡೆದರು. ದೆಹಲಿಯಲ್ಲೇ ಯುಪಿಎಸ್‌ಸಿ ತರಬೇತಿ ಪಡೆದುಕೊಂಡು ಪರೀಕ್ಷೆಗೆ ತಯಾರಾದರು. ಏಕಾಂಶ್ ಯುಪಿಎಸ್‌ಸಿಯಲ್ಲಿ  ಮೊದಲ ಬಾರಿ ಆಯ್ಕೆಯಾದಾಗ ಉತ್ತಮ ರ್ಯಾಂಕ್ ಪಡೆದರು. 2024ರಲ್ಲಿ 342ನೇ ರ್ಯಾಂಕ್ ಗಳಿಸಿದರು. 2025ರಲ್ಲಿ ಯುಪಿಎಎಸ್‌ಪಿಯಲ್ಲಿ 295ನೇ ರ್ಯಾಂಕ್ ಪಡೆದರು.ಈಗ ಅಂತಿಮ ಫಲಿತಾಂಶದಲ್ಲಿ ದೇಶದ ಮೂರನೇ ಸ್ಥಾನ ಪಡೆದಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now
🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...