Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ದೊಡ್ಡ ಗರಡಿಯನ್ನು ಸಾಂಸ್ಕೃತಿಕ ಕೇಂದ್ರವಾಗಿ ಬೆಳೆಸಿದ ಕೀರ್ತಿ ತಿಪ್ಪಾನಾಯಕರದ್ದು : ಡಾ.ಬಿ.ರಾಜಶೇಖರಪ್ಪ

Facebook
Twitter
Telegram
WhatsApp

 

ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552

ಚಿತ್ರದುರ್ಗ, (ಫೆ.06): ಸುಧೀರ್ಘ ಅವಧಿ ಬದುಕಿದ ಹಿರಿಯ ರಂಗ ಕಲಾವಿದ ತಿಪ್ಪನಾಯಕರವರನ್ನು ಎಲ್ಲರೂ ಸ್ಮರಿಸಿಕೊಳ್ಳಲೇಬೇಕು ಎಂದು ಇತಿಹಾಸ ಸಂಶೋಧಕ ಡಾ.ಬಿ.ರಾಜಶೇಖರಪ್ಪ ತಿಳಿಸಿದರು.

ಬಸವಮಂಟಪದಲ್ಲಿ ತಿಪ್ಪಾನಾಯಕರವರಿಗೆ ಸೋಮವಾರ ಏರ್ಪಡಿಸಲಾಗಿದ್ದ ಭಾವಪೂರ್ಣ ಶ್ರದ್ದಾಂಜಲಿ, ನುಡಿನಮನದಲ್ಲಿ ಭಾಗವಹಿಸಿ ಮಾತನಾಡಿದರು.

ಹಿರಿಯ ಸಾಂಸ್ಕೃತಿಕ ಚೇತನರಾಗಿದ್ದ ತಿಪ್ಪಾನಾಯಕರವರು ಜೀವಂತವಾಗಿದ್ದಿದ್ದರೆ ಈ ತಿಂಗಳ ಅಂತ್ಯಕ್ಕೆ 99 ವರ್ಷಗಳನ್ನು ಪೂರೈಸಿ ನೂರನೆ ವರ್ಷಕ್ಕೆ ಕಾಲಿಡುತ್ತಿದ್ದರು. ಆ ಸಂತೋಷವನ್ನು ಕಣ್ತುಂಬಿಕೊಳ್ಳುವ ಅವಕಾಶವನ್ನು ನಾವುಗಳೆಲ್ಲಾ ಕಳೆದುಕೊಂಡಿರುವುದು ನಿಜಕ್ಕೂ ದುಃಖದ ಸಂಗತಿ ಎಂದು ಕಳವಳ ವ್ಯಕ್ತಪಡಿಸಿದರು.

ತಿಪ್ಪಾನಾಯಕರವರು ಮದಕರಿನಾಯಕನ ಪಾತ್ರದಲ್ಲಿ ಅಭಿನಯಿಸುತ್ತಿದ್ದುದು ಎಲ್ಲರ ಮನಸೆಳೆಯುವಂತಿತ್ತು. ಸುಬ್ಬಯ್ಯನಾಯ್ಡು, ಬಿ.ಸರೋಜದೇವಿಯಂತಹವರ ಜೊತೆ ಅಭಿನಯಿಸುವ ಅವಕಾಶ ಅವರಿಗೆ ಸಿಕ್ಕಿತ್ತು. ಬರೀ ಫೈಲ್ವಾನರಿಗಷ್ಟೆ ಮೀಸಲಾಗಿದ್ದ ದೊಡ್ಡಗರಡಿಯನ್ನು ಸಾಂಸ್ಕೃತಿಕ ಕೇಂದ್ರವಾಗಿ ಬೆಳೆಸಿದ ಕೀರ್ತಿ ತಿಪ್ಪಾನಾಯಕರವರಿಗೆ ಸಲ್ಲುತ್ತದೆ ಎಂದು ಗುಣಗಾನ ಮಾಡಿದರು.

ಸಾಹಿತಿ ಡಾ.ಲೋಕೇಶ್ ಅಗಸನಕಟ್ಟೆ ಮಾತನಾಡುತ್ತ ಪ್ರಜ್ಞಾಪೂರ್ವಕವಾಗಿ ಬದುಕುವ ವ್ಯಕ್ತಿತ್ವ ತಿಪ್ಪಾನಾಯಕರವರದಾಗಿತ್ತು. ಮದಕರಿನಾಯಕನ ಪಾತ್ರದಲ್ಲಿ ಅಭಿನಯಿಸಿದಾಗ ಸಿಕ್ಕಷ್ಟು ಖುಷಿ ನನಗೆ ಬೇರೆ ಯಾವುದೂ ಇಲ್ಲ ಎಂದು ಹೇಳುತ್ತಿದ್ದರು.

ಎಲ್ಲರೊಡನೆ ಒಡನಾಟ, ಅವಿನಾಭಾವ ಸಂಬಂಧವಿರಿಸಿಕೊಂಡಿದ್ದರು. ನಾಟಕಗಳಲ್ಲಿ ಅವರು ಬಳಸುತ್ತಿದ್ದ ಭಾಷೆ ಅಮೋಘವಾಗಿತ್ತು ಎಂದರು.

ಸಾಹಿತಿ ಡಾ.ಬಿ.ಎಲ್.ವೇಣು ಮಾತನಾಡಿ ರಾಜವೀರ ಮದಕರಿನಾಯಕನ ಮೀಸೆ, ಕಟ್ಟುಮಸ್ತಾದ ಮೈಕಟ್ಟು ಈ ರೀತಿ ಇರುತ್ತಿತ್ತೇನೋ ಎನ್ನುವ ಕಲ್ಪನೆಯನ್ನು ಮೊದಲು ಜನತೆಯ ಮನದಲ್ಲಿ ಮೂಡಿಸಿದ್ದು ಹಿರಿಯ ರಂಗ ಕಲಾವಿದ ತಿಪ್ಪಾನಾಯಕರವರು.

99 ವರ್ಷಗಳ ಕಾಲ ಬದುಕಿದ ಅವರ ಮಾತು ಸದಾ ಗತ್ತು ಗಾಂಭೀರ್ಯದಿಂದ ಕೂಡಿರುತ್ತಿತ್ತು. ಮೈಸೂರು ಮಹಾರಾಜರು ಅವರನ್ನು ಕರೆಸಿಕೊಂಡು ಮದಕರಿನಾಯಕನ ಪಾತ್ರದಲ್ಲಿ ನಾಟಕ ಆಡಿಸಿ ನೋಡಿ ಮೆಚ್ಚಿಕೊಂಡಿದ್ದರೆಂದರೆ ಇದಕ್ಕಿಂತ ಸೌಭಾಗ್ಯ ಇನ್ನೇನು ಬೇಕು ಎಂದು ಪ್ರಶಂಶಿಸಿದರು.
ಹಿರಿಯ ಪತ್ರಕರ್ತ ಜಿ.ಎಸ್.ಉಜ್ಜಿನಪ್ಪ ಮಾತನಾಡುತ್ತ ತಿಪ್ಪಾನಾಯಕರವರು ವೀರಾವೇಷದಿಂದ ರಂಗ ಪ್ರವೇಶ ಮಾಡುತ್ತಿದ್ದರು.

ರಾಜಾವೀರಮದಕರಿನಾಯಕ ಹೀಗಿದ್ದಿರಬಹುದು ಎನ್ನುವ ಕಲ್ಪನೆಯನ್ನು ಜನರಲ್ಲಿ ಮೂಡಿಸಿದ ಮೊಟ್ಟ ಮೊದಲ ರಂಗ ಕಲಾವಿದ. ದೊಡ್ಡ ವ್ಯಕ್ತಿತ್ವ ಅವರದು. ಎಲ್ಲರೊಡನೆ ಆತ್ಮೀಯತೆ ಇತ್ತು ಎಂದು ಸ್ಮರಿಸಿ ದಿವಂಗತ ಎ.ಭೀಮಪ್ಪನಾಯಕರಂತವರನ್ನು ದುರ್ಗದ ಜನ ಮರೆತಿರುವುದು ನೋವಿನ ಸಂಗತಿ ಎಂದರು.

ಕರ್ನಾಟಕ ನಾಟಕ ಅಕಾಡೆಮಿ ಮಾಜಿ ಸದಸ್ಯ ಕೆ.ನಾಗರಾಜ್ ಮಾತನಾಡಿ ಮಹಾನ್ ಕಲಾವಿದ ತಿಪ್ಪಾನಾಯಕರವರು ಇನ್ನು ಕೆಲವು ದಿನಗಳು ನಮ್ಮೊಂದಿಗಿದ್ದಿದ್ದರೆ ನೂರು ವರ್ಷಗಳ ಸಂಭ್ರಮಾಚರಣೆಯನ್ನು ಆಚರಿಸಿ ಖುಷಿ ಪಡಬಹುದಿತ್ತು. ಆದರೆ ಸಾವು ಯಾರನ್ನು ಬಿಡುವುದಿಲ್ಲ. ಮಾನವನ ಸಹಜ ಧರ್ಮ.

1950-55 ರಲ್ಲಿ ದೊಡ್ಡಗರಡಿಯಲ್ಲಿ ನಾಟಕ ಸ್ಥಾಪನೆಯಾಯಿತು. ರಕ್ತರಾತ್ರಿ, ಮದಕರಿನಾಯಕ, ವಿಜಯನಗರ ಸಾಮ್ರಾಜ್ಯ ಇನ್ನು ಅನೇಕ ಮೈನವಿರೇಳಿಸುವ ಪಾತ್ರದ ನಾಟಕಗಳು ಹೆಚ್ಚು ಜನಪ್ರಿಯತೆ ಪಡೆಯಿತು. ಮೈಸೂರಿನ ಮಹಾರಾಜರು ತಿಪ್ಪಾನಾಯಕರನ್ನು ಕರೆಸಿಕೊಂಡು ಮದಕರಿನಾಯಕ ನಾಟಕ ಆಡಿಸಿ ಮೆಚ್ಚಿಕೊಂಡಿದ್ದರು.

ಕರ್ನಾಟಕ ಸರ್ಕಾರ 2008 ರಲ್ಲಿ ನಾಟಕ ಅಕಾಡೆಮಿ ಸ್ಥಾಪಿಸಿದಾಗ ಮೊದಲು ತಿಪ್ಪಾನಾಯಕರ ಹೆಸರನ್ನು ನಾನು ಸೂಚಿಸಿದೆ. ಆಗ ಶಿವಮೊಗ್ಗದಲ್ಲಿ ಅದ್ದೂರಿ ಮೆರವಣಿಗೆ ನಡೆಸಿ ಕುವೆಂಪು ರಂಗಮಂದಿರದಲ್ಲಿ ಪ್ರಶಸ್ತಿ ನೀಡಿತು ಎಂದು ನೆನಪಿಸಿಕೊಂಡರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಡಾ.ದೊಡ್ಡಮಲ್ಲಯ್ಯ ತಿಪ್ಪಾನಾಯಕರ ಕುರಿತು ಮಾತನಾಡಿದರು.

ತ.ರಾ.ಸು.ರಂಗಮಂದಿರದಲ್ಲಿ ಕಳೆದ ತಿಂಗಳು ನಡೆದ ಸಾಹಿತಿ ಡಾ.ಬಿ.ಎಲ್.ವೇಣುರವರ ಬದುಕು ಬರಹ ಕುರಿತ ಒಂದು ದಿನದ ವಿಚಾರ ಸಂಕಿರಣದಲ್ಲಿ ತಿಪ್ಪಾನಾಯಕರವರನ್ನು ಸನ್ಮಾನಿಸಬೇಕಿತ್ತು. ಕಾರ್ಯಕ್ರಮಕ್ಕೂ ಮುನ್ನ ಅವರು ಇಹಲೋಕ ತ್ಯಜಿಸಿದ್ದರಿಂದ ಭಾವಪೂರ್ಣ ಶ್ರದ್ದಾಂಜಲಿಯಲ್ಲಿ ಅವರ ಕೊನೆಯ ಪುತ್ರಿ ಚಿನ್ನಬೋರಮ್ಮನನ್ನು ಡಾ.ದೊಡ್ಡಮಲ್ಲಯ್ಯನವರು ಸನ್ಮಾನಿಸಿದರು.

ತಿಪ್ಪಾನಾಯಕರವರ ಮಕ್ಕಳು, ಕುಟುಂಬ ವರ್ಗದವರು, ಬಂಧು-ಮಿತ್ರರು ಹಾಗೂ ಅಪಾರ ಅಭಿಮಾನಿಗಳು ನುಡಿನಮನದಲ್ಲಿ ಭಾಗವಹಿಸಿದ್ದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಸಿಇಎನ್ ಪೊಲೀಸರ ದಾಳಿ : ಅಂತರ್ ರಾಜ್ಯ ಗಾಂಜಾ ಪೆಡ್ಲರ್ ಬಂಧನ

ಸುದ್ದಿಒನ್, ಚಿತ್ರದುರ್ಗ, ನವೆಂಬರ್. 22 : ಆಂದ್ರಪ್ರದೇಶದ ವಿಶಾಖಪಟ್ಟಣಂ ನಿಂದ ಗಾಂಜಾವನ್ನು ತಂದು ಚಿತ್ರದುರ್ಗ ನಗರಕ್ಕೆ ಬಂದು ಗಾಂಜಾ ಮಾರಾಟ ಮಾಡುತ್ತಿದ್ದ ಡ್ರಗ್ಸ್‌ ಪೆಡ್ಲರ್‌ನನ್ನು ಸಿಇಎನ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಿಹಾರದ ಹರಿ ಓಂಕುಮಾರ್(24

ಪೆಟ್ರೋಲ್ ಬಂಕಿನಲ್ಲಿ ವಂಚನೆ ಆರೋಪ : ಗ್ರಾಹಕರು ಹಾಗೂ ಸಿಬ್ಬಂದಿಗಳ ನಡುವೆ ಮಾತಿನ ಚಕಮಕಿ

  ವರದಿ ಮತ್ತು ಫೋಟೋ ಕೃಪೆ ಸುರೇಶ್ ಬೆಳಗೆರೆ ಮೊ : 97398 75729 ಸುದ್ದಿಒನ್, ಚಳ್ಳಕೆರೆ, ನವೆಂಬರ್. 22 : ಬೈಕ್ ಗಳಿಗೆ ಪೆಟ್ರೋಲ್ ಹಾಕುವ ವೇಳೆ ಗ್ರಾಹಕರಿಗೆ ಇಲ್ಲಿನ ಸಿಬ್ಬಂದಿ ವಂಚನೆ

ಅಕ್ರಮ ಕಸಾಯಿ ಖಾನೆ ಬಂದ್ ಮಾಡಿ : ದಾದಾ ಪೀರ್ ಆಗ್ರಹ : ವಿಡಿಯೋ ವೈರಲ್..!

ಸುದ್ದಿಒನ್, ಹಿರಿಯೂರು : ಅಕ್ರಮವಾಗಿ ಕಸಾಯಿ ಖಾನೆ ನಡೆಸುತ್ತಿರುವವರ ವಿರುದ್ಧ ದಾದಾ ಪೀರ್ ಎಂಬುವವರು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ದಾದಾ ಪೀರ್ 6ನೇ ವಾರ್ಡ್ ನಲ್ಲಿ ವಾಸಿಸುವವ ವ್ಯಕ್ತಿಯಾಗಿದ್ದಾರೆ. ಕಸಾಯಿ ಖಾನೆಯಿಂದ ಮಕ್ಕಳು ಅನಾರೋಗ್ಯಕ್ಕೆ

error: Content is protected !!