ಜಮೀನಿನಲ್ಲಿ ವಿದ್ಯುತ್ ತಂತಿಗಳನ್ನು ಬಿಡದ ಕಳ್ಳರು : ಧಾರವಾಡ ರೈತರಿಗೆ ಆತಂಕ

1 Min Read

 

ಧಾರವಾಡ: ಮಳೆ ಇಲ್ಲದೆ ಬೆಳೆ ನೆಲಕಚ್ಚಿದೆ. ಭೂಮಿಯಲ್ಲಿರುವ ಸಸಿ ಸೀದು ಹೋಗುತ್ತಿದೆ. ಇದರ ಜೊತೆಗೆ ಧಾರವಾಡದ ರೈತರಿಗೆ ಕಳ್ಳರ ಕಾಟ ಬೇರೆ ಜಾಸ್ತಿಯಾಗಿದೆ. ರೈತರ ಜಮೀನುಗಳಲ್ಲಿರುವ ವಿದ್ಯುತ್ ತಂತಿಯನ್ನು ಬಿಡುತ್ತಿಲ್ಲ.

 

ಈ ಮೊದಲು ರೈತರ ಪಂಪ್ ಸೆಟ್ ಹಾಗೂ ಜಮೀನಿನಲ್ಲಿದ್ದ ಹಲವು ಪರಿಕರಗಳನ್ನು ಕದಿಯುತ್ತಿದ್ದರು. ಈಗ ರೈತರ ಜಮೀನುಗಳಿಗೆ ಹಾದು ಹೋಗಿರುವ ವಿದ್ಯುತ್ ತಂತಿಗಳನ್ನು ಕದಿಯುತ್ತಿದ್ದಾರೆ. ಈ ಸಂಬಂಧ ಈಗಾಗಲೇ ಪೊಲೀಸರ ಮೊರೆ ಹೋಗಿದ್ದರು, ಕಳ್ಳರು ಮಾತ್ರ ಸಿಕ್ಕಿಲ್ಲ.

 

ಇನ್ನು ನವಲಗುಂದ ತಾಲೂಕಿನ ತಲೆ ಮೊರಬ ಗ್ರಾಮದಲ್ಲಿ ರೈತರ ಜಮೀನುಗಳಿರುವ ವಿದ್ಯುತ್ ಕಂಬದಿಂದಾನೇ ತಂತಿಗಳನ್ನು ಕಳ್ಳತನ ಮಾಡುತ್ತಿದ್ದಾರೆ. 20ಕ್ಕೂ ಹೆಚ್ಚು ವಿದ್ಯುತ್ ಕಂಬಗಳನ್ನು ಹೆಸ್ಕಾಂ ರೈತರ ಜಮೀನುಗಳಿಗೆ ಅಳವಡಿಕೆ ಮಾಡಿದ್ದರು. 14 ಕಂಬಗಳಿಗೆ ನಾಲ್ಕು ವಿದ್ಯುತ್ ತಂತಿ ಅಳವಡಿಸಿದ್ದರು. ಆದರೆ ಮಾರನೇ ದಿನ ಬಂದು ನೋಡಿದರೆ ಆ ಕಂಬಗಳಲ್ಲಿ ವಿದ್ಯುತ್ ಅಳವಡಿಕೆಯ ತಂತಿಗಳೇ ಇಲ್ಲ. ಟ್ರಾನ್ಸ್ ಫಾರ್ಮರ್ ನಿಂದ ವಿದ್ಯುತ್ ಕಲ್ಪಿಸುವ ಮುನ್ನವೇ ಕದ್ದು ಪರಾರಿಯಾಗಿದ್ದಾರೆ.

ಈ ವಿಚಾರ ತಿಳಿದ ನವಲಗುಂದ ಶಾಸಕ ಎನ್ ಎಚ್ ಕೋನರೆಡ್ಡಿ, ಇದು ನನ್ನ ಗಮನಕ್ಕೆ ಬಂದಿಲ್ಲ. ಮಾಹಿತಿ‌ ಪಡೆದು ಸೂಕ್ತ ಕ್ರಮ ಜರುಗಿಸುವಂತೆ ಸೂಚಿಸುತ್ತೇನೆ ಎಂದು ಹೇಳಿದ್ದಾರೆ. ಬೆಳೆಯನ್ನ ಪ್ರಾಣಿಗಳು ಹಾಳು ಮಾಡುತ್ತವೆ ಎಂಬ ಭಯಕ್ಕೆ ಹೊಲದಲ್ಲಿ ಗೊಂಬೆಗಳನ್ನ ನೆಡುತ್ತಾರೆ. ಆದರೆ ಹೀಗೆ ಮನುಷ್ಯರೇ ಬೆಳೆಗೆ ನೀರಿಲ್ಲದಂತೆ ಮಾಡುವ ಕೆಲಸಕ್ಕೆ ಕೈ ಹಾಕಿದರೆ, ರೈತ ತಾನೇ ಇನ್ನೆಷ್ಟು ಕಾವಲಿಗೆ ಇರುತ್ತಾನೆ. ಶಾಸಕರ ಸೂಕ್ತ ಕ್ರಮದಿಂದಾದ್ರೂ ಈ ಕಳ್ಳತನ ತಪ್ಪಬಹುದಾ ಎಂಬ ನಿರೀಕ್ಷಯಿಂದಾನೇ ರೈತ ಮುಂದೆ ನಡೆದಿದ್ದಾನೆ.

Share This Article
Leave a Comment

Leave a Reply

Your email address will not be published. Required fields are marked *