Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಎರಡೂವರೆ ವರ್ಷದ ಬಳಿಕ ನನಗೂ ಸಚಿವ ಸ್ಥಾನ ಕೊಡ್ತೀವಿ ಅಂದಿದ್ರು : ತನ್ವೀರ್ ಸೇಠ್

---Advertisement---

ಬೆಂಗಳೂರು: ಕಾಂಗ್ರೆಸ್ ಸರ್ಕಾರಕ್ಕೆ ಮೂರು ವರ್ಷಗಳಾಗ್ತಾ ಇದೆ. ಆದರೆ ಸಚಿವ ಸ್ಥಾನದ ಆಕಾಂಕ್ಷಿಗಳಿಗೆ ನಿರಾಸೆಯಾಗ್ತಿದೆ, ಸಿಎಂ ಸ್ಥಾನದ ಆಕಾಂಕ್ಷಿಗೆ ನಿರಾಸೆಯಾಗ್ತಿದೆ. ಈ ಎರಡು ದೊಡ್ಡ ಬೆಳವಣಿಗೆಗಾಗಿ ಕಾಂಗ್ರೆಸ್ ನಲ್ಲಿರುವವರೇ ಕಾಯ್ತಾ ಇದ್ದಾರೆ. ಇದರ ನಡುವೆ ತನ್ವೀರ್ ಸೇಠ್ ಅವರು ಸಚಿವ ಸ್ಥಾನದ ಬಗ್ಗೆ ಮಾತನ್ನಾಡಿದ್ದಾರೆ.

ಪ್ರಥಮ ಹಂತದಲ್ಲಿ ಸಚಿವ ಸ್ಥಾನ ಸಿಕ್ಕಿರಲಿಲ್ಲ. ಆ ಸಂದರ್ಭದಲ್ಲಿ ನನಗೆ ವರಿಷ್ಠರೆ ಫೋನ್ ಮಾಡಿ,‌ನಿನಗೆ ಯಾವ ನಿಗಮ ಮಂಡಳಿ ಬೇಕು ಕೊಡ್ತೀನಿ ಅಂದ್ರು. ನಾನು ನಿಗಮ ಮಂಡಳಿ ಒಪ್ಪಲ್ಲ. ಯಾರ ಕೈಯಡಿ ಕೆಲಸ ಮಾಡೋದಕ್ಕೆ ಸಾಧ್ಯವಿಲ್ಲ. ಪಕ್ಷದ ಮೇಲೆ ನಂಬಿಕೆ ಇಟ್ಟಿದ್ದೀನಿ. ಬರುವ ತನಕ ಕಾಯ್ತೀನಿ ಅಂತ ಹೇಳಿದ್ದೆ. ಇಲ್ಲ ನಾವೂ ತೀರ್ಮಾನ ತೆಗೆದುಕೊಂಡಿದ್ದೀವಿ. ಎರಡೂವರೆ ವರ್ಷಕ್ಕೆ ನಾವೂ ಮಾಡ್ತೀವಿ ಅಂತ ಕೂಡ ಹೇಳಿದರು ಎಂದಿದ್ದಾರೆ.

ಈಗ ಎರಡೂವರೆ ವರ್ಷ ಮೀರಿ ಹೋಗಿದೆ. ಈಗ ತೀರ್ಮಾನ ತೆಗೆದುಕೊಳ್ಳಬೇಕಾಗಿರುವುದು ವರಿಷ್ಠರು. ಅಂಗಳದಲ್ಲಿ ಈಗ ಆ ಜವಾಬ್ದಾರಿ ಇದೆ. ಅದನ್ನ ಮಾಡ್ತಾರೆ ಎಂಬ ನಂಬಿಕೆಯೂ ನನಗಿದೆ. ಜನ ನಮ್ಮನ್ನ ಆಯ್ಕೆ ಮಾಡಿರುವುದು ರಾಜ್ಯದ ಉದ್ಧಗಲಕ್ಕು ಇರುವಂತ ಸಮಸ್ಯೆಯನ್ನ ಬಗೆಹರಿಸುವುದಕ್ಕೆ. ಅಧಿಕಾರ ಯಾರ ಕೈನಲ್ಲಿ ಇರಬೇಕು ಅಂತ ಯಾರೂ ಆಯ್ಕೆ ಮಾಡಿಲ್ಲ. ಆ ತೀರ್ಮಾನ ಪಕ್ಷದ್ದು, ಶಾಸಕರದ್ದು. ಹಾಗಾಗಿ ಯಾರಿಗೆ ಜವಬ್ದಾರಿ ಕೊಟ್ಟಿದ್ದಾರೆ, ಅವರಿಗೆ ಮುಕ್ತವಾಗಿ ಕೆಲಸ ಮಾಡುವುದಕ್ಕೆ ಅವಕಾಶ ಮಾಡಿಕೊಡಿ. ಎಲ್ಲರು ಎಲ್ಲದಕ್ಕೂ ಕೈ ಹಾಕೋದು ಅಲ್ಲ. ವಿನಾಕಾರಣ ಮುಗಿದು ಹೋಗುವ ಅಧ್ಯಾಯಕ್ಕೆ ಕೆಲವು ಹೇಳಿಕೆಗಳು ಗೊಂದಲ ಮಾಡ್ತಿದೆ. ಅದನ್ನ ನಾವೂ ವರಿಷ್ಠರ ಗಮನಕ್ಕೆ‌ ತಂದಿದ್ದೇವೆ ಎಂದಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now
🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...