ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್, ಚಿತ್ರದುರ್ಗ
2026-27ನೇ ಸಾಲಿನ ದಾಖಲಾತಿಗಳು ಪ್ರಾರಂಭ! (ಪ್ಲೇ ಗ್ರೂಪ್‌ನಿಂದ 12ನೇ ತರಗತಿವರೆಗೆ)
2026-27ನೇ ಸಾಲಿನ ದಾಖಲಾತಿಗಳು ಪ್ರಾರಂಭ! (ಪ್ಲೇ ಗ್ರೂಪ್‌ನಿಂದ 12ನೇ ತರಗತಿವರೆಗೆ)
ಸುದ್ದಿಒನ್, ಚಿತ್ರದುರ್ಗ, ಜೂನ್. 18: ಸುದ್ದಿಬ್ರೇಕ್ ಮಾಡುವ ಅವಸರದಲ್ಲಿ ಜವಾಬ್ದಾರಿಯುತ ಸ್ಥಾನದಲ್ಲಿರುವ ಮಾದ್ಯಮಗಳು ಅವಾಂತರ ಸೃಷ್ಟಿಸಬಾರದು ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್.ಸಿದ್ದರಾಜು ಹೇಳಿದರು.
ನಗರದ ಮಂಗಳವಾರ ವಿದ್ಯಾವಿಕಾಸ ವಿದ್ಯಾಸಂಸ್ಥೆಯಲ್ಲಿ ವಿದ್ಯಾರ್ಥಿಗಳು ಆರಂಭಿಸಿರುವ ಶೈಕ್ಷಣಿಕ ಆಧಾರಿತ ಯೂಟ್ಯೂಬ್ ಚಾನೆಲ್ ಗೆ ಚಾಲನೆ ನೀಡಿ ಮಾತನಾಡಿದ ಅವರು, ಪತ್ರಿಕೋದ್ಯಮ ಹಾಗೂ ಸಮಾಜ ಕುರಿತು ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಿದರು.
ಮಾದ್ಯಮ ಕ್ಷೇತ್ರದಲ್ಲಿ ಎಲೆಕ್ಟ್ರಾನಿಕ್ ಮತ್ತು ಮುದ್ರಣ ಮಾದ್ಯಮ ಎಂಬ ಎರಡು ಹಂತಗಳಿವೆ.ಅವುಗಳಲ್ಲಿ ಎಲೆಕ್ಟ್ರಾನಿಕ್ ಮಾದ್ಯಮ ಕುರಿತು ವಿದ್ಯಾರ್ಥಿಗಳೊಂದಿಗೆ ಮಾತನಾಡಿದ ಅವರು, ಇಂದಿನ ಆಧುನಿಕ ಭರಾಟೆಯಲ್ಲಿ
ಪತ್ರಿಕೋದ್ಯಮ ಅನ್ನೋದು ಇಂದು ದೊಡ್ಡ ಉದ್ಯಮವಾಗಿ ಬೆಳೆದಿದೆ. ಈ ಹಿಂದೆ ಸಾಮಾಜಿಕ ಕಳಕಳಿ ಹಾಗು ಸಮಾಜವನ್ನು ಸರಿದಾರಿಯನ್ನು ಕೊಂಡೊಯ್ಯುವ ಕೆಲಸವನ್ನು ಮಾಡುತಿದ್ದವು.ಆದರೆ ಇಂದಿನ ಸ್ಪರ್ಧಾಯುಗದಲ್ಲಿ
ಕೆಲ ಮಾಧ್ಯಮಗಳು ಟಿಆರ್ ಪಿ ಹಾಗೂ ಹಣದಾಸೆಗೆ ಸುದ್ದಿಯ ಸಾರವನ್ನು ತಿರುಚುತ್ತಿವೆ. ಇದು ಸಮಾಜದ ಮೇಲೆ ಬಾರಿ ದುಷ್ಪರಿಣಾಮ ಬೀರುತ್ತಿದೆ ಎಂದು ಅಸಮಧಾನ ವ್ಯಕ್ತಪಡಿಸಿದರು.
ಇನ್ನು ಎಲೆಕ್ಟ್ರಾನಿಕ್ ಮಾದ್ಯಮದಲ್ಲಿ ಬ್ರೇಕಿಂಗ್ ನ್ಯೂಸ್ ಅನ್ನೋದು ತುಂಬಾ ಮಹತ್ವ ಹೊಂದಿದೆ. ಹೀಗಾಗಿ ಯಾರು ಮೊದಲು ಯಾವ್ದೇ ಒಂದು ಸುದ್ದಿಯನ್ನು ಜನರಿಗೆ ತಲುಪಿಸ್ತಾರೆ. ಅನ್ನೋದೇ ಬ್ರೇಕಿಂಗ್ ಎಂದು ಕರೆಯುತ್ತೇವೆ. ತಡವಾಗಿ ಸುದ್ದಿಬಂದರೆ ಅದನ್ನು ಜನ ಗಮನಿಸುವುದಿಲ್ಲ. ಆದರೆ ಇತ್ತೀಚಿನ ದಿನಗಳಲ್ಲಿ ಸುದ್ದಿ ಬ್ರೇಕ್ ಮಾಡುವ ಅವಸರದಲ್ಲಿ ಕೆಲ ಮಾಧ್ಯಮಗಳು ಅವಾಂತರಸೃಷ್ಟಿಸುತ್ತಿವೆ. ಆ ಕೆಲಸಆಗಬಾರದು. ಜನರಿಗೆ ಪತ್ರಕರ್ತ ನೀಡುವ ಸುದ್ದಿ ನಿಖರತೆ, ಸ್ಪಷ್ಟತೆ ಹಾಗು ಸತ್ಯವಾಗಿರಬೇಕು ಎಂದರು.
ಹಾಗೆಯೇ ವರದಿಗಾರರ ಜೀವನದಲ್ಲಿ ಗುರಿ ಇರಬೇಕು.ಆಗ ಜೀವನವನ್ನೇ ಚಾಲೆಂಜಿಂಗ್ ಆಗಿ ತೆಗೆದುಕೊಂಡು ಸುದ್ದಿ ವಿಚಾರದಲ್ಲಿ ಯಶಸ್ಸು ಕಂಡಾಗ ಸಂತೋಷ ಆಗಲಿದೆ. ಅಂತೆಯೇ ಇಂದಿನ ಮಕ್ಕಳು ಬಹುತೇಕ ಕಾರ್ಟೂನ್, ಚಿಂಟು ಟಿವಿಗೆ ಸೀಮಿತವಾಗಿರುತ್ತಾರೆ. ಹೀಗಿರುವಾಗ ಈ ಸಂಸ್ಥೆಯು ಮಕ್ಕಳಲ್ಲಿ ಮಾದ್ಯಮದ ಪರಿಕಲ್ಪನೆ ಕಣ್ಮುಂದೆ ತರುವ ಕೆಲಸವನ್ನು ಈ ಶಾಲೆ ಮಾಡುತಿದ್ದು, ಮಾದ್ಯಮದ ಬಗ್ಹೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸ್ತಿರುವ ಕಾರ್ಯ ಶ್ಲಾಘನೀಯ ಹಾಗು ಅರ್ಥಪೂರ್ಣ ಎನಿಸಿದೆ. ಹೀಗಾಗಿ ಈ ಸಂಸ್ಥೆಗೆ ನಮ್ಮ ಪತ್ರಕರ್ತರ ಸಂಘದಿಂದ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಜೊತೆಗೆ ಇಂದಿನ ಸಮಾಜದಲ್ಲಿ ಬಹುತೇಕ ಮಕ್ಕಳು ನಾನು ಐಎಎಸ್, ಐಪಿಎಸ್ ಆಗಬೇಕೆಂಬ ಕನಸು ಕಾಣುತ್ತಾರೆ. ಆದರೆ ಓರ್ವ ಪತ್ರಕರ್ತ ಕೂಡ ಎಲ್ಲಾ ಕ್ಷೇತ್ರಗಳಲ್ಲು ಒಬ್ಬನಾಗಿರ್ತಾನೆ. ಕೃಷಿ ಚಟುವಟಿಕೆ ಅಂತ ಬಂದಾಗ ರೈತರಲ್ಲೊಬ್ಬರಾಗುತ್ತಾನೆ. ರೈತರ ಸಂಕಷ್ಟ ತಿಳಿಯಲು ಅವರ ಅಂತರಾಳಕ್ಕೆ ಇಳಿಯುತ್ತಾನೆ.
ಹಾಗೆಯೇ ದೇಶದ ರಕ್ಷಣೆ ವಿಚಾರ ಬಂದಾಗ ಸೈನಿಕರಂತೆ
24 × 7 ಶ್ರಮಿಸ್ತಾರೆ. ಕೋವಿಡ್ ಸೇರುದಂತೆ ಅನೇಕ ಜೀವಹಾನಿ ಸಂಧರ್ಭಗಳಲ್ಲು ಪ್ರಾಣದ ಹಂಗು ತೊರೆದು ಪತ್ರಕರ್ತರು ಕರ್ತವ್ಯ ನಿರ್ವಹಿಸಿದ್ದಾರೆ. ಹೀಗಾಗಿ ಪತ್ರಕರ್ತರಾದರೆ ಎಲ್ಲಾ ಕ್ಷೇತ್ರಗಳನ್ನು ಪರೋಕ್ಷವಾಗಿ ತಲುಪುವ ವ್ಯಕ್ತಿ ಅಂದ್ರೆ ಅವರೇ ಜರ್ನಲಿಸ್ಟ್ ಗಳು ಅಂತ ಹೆಮ್ಮೆಯಿಂದ ಹೇಳಬಯಸುತ್ತೇನೆ.
ಜೊತೆಗೆ ಓರ್ವ ಪತ್ರಕರ್ತ ಆದವನು ಸಂಬಂಧ, ಸ್ನೇಹ ಹಾಗು ಸ್ವಾರ್ಥವನ್ನು ಬದಿಗಿಟ್ಟು ನಿಷ್ಟೂರ ಹಾಗು ನಿಸ್ವಾರ್ಥದಿಂದ ಕೆಲಸ ನಿರ್ವಹಿಸಬೇಕು ಎಂದು ಹೇಳುತ್ತಾ, ನಿತ್ಯ ರಾಜಕೀಯ, ಕೃಷಿ ಹಾಗು ಕಾನೂನು ಅಂತ ಸುದ್ದಿ ಬಿಸಿಯಾಗಿರ್ತಿದ್ದ ನನಗೆ ಇಂದು ಮಕ್ಕಳೊಂದಿಗೆ ಕ್ಷಣಕಾಲ ಕಳೆಯುವ ಅವಕಾಶ ಮಾಡಿಕೊಟ್ಟ ಶಾಲೆಯ ಆಡಳಿತಮಂಡಳಿಗೆ ಧನ್ಯವಾದ ಹೇಳುತ್ತೇನೆ ಎಂದರು.
ಬಳಿಕ ಮಾತನಾಡಿದ ವಿದ್ಯಾವಿಕಾಸಸಂಸ್ಥೆಯ ಮುಖ್ಯಸ್ಥರಾದ ಪೃಥ್ವೀಶ್ ಅವರು, ನಮ್ಮ ಶಾಲೆಯ ವಿದ್ಯಾರ್ಥಿಗಳು ಹಾಗು ಶಿಕ್ಷಕರು ತುಂಬಾ ಆಸಕ್ತಿ ವಹಿಸಿ ಯೂಟ್ಯೂಬ್ ವಾಹಿನಿ ಮಾಡಿದ್ದಾರೆ. ಇದರಿಂದ ನಗರದಲ್ಲಿನ ಪರಿಸರ ಹಾಗು ಶೈಕ್ಷಣಿಕವಾಗಿ ಈ ವಾಹಿನಿಯಲ್ಲಿ ಸುದ್ದಿ ಮಾಡಲು ಉತ್ಸುಕರಾಗಿದ್ದಾರೆ. ಇದು ತುಂಬಾ ಒಳ್ಳೆಯ ಕಾರ್ಯವಾಗಿದ್ದು,ವಿದ್ಯಾರ್ಥಿದೆಸೆಯಿಂದಲೇ ಪತ್ರಿಕೋದ್ಯಮದ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಲು ನಮ್ಮ ಸಂಸ್ಥೆ ಈ ಕಾರ್ಯಕ್ಕೆ ಮುಂದಾಗಿದೆ ಎಂದರು.
ಈ ವೇಳೆ ಮುಖ್ಯೋಪಾದ್ಯಾಯರಾದ ತಿಪ್ಪೇಸ್ವಾಮಿ, ಶಿಕ್ಷಕರಾದ ಕಾವ್ಯ, ಸುಂದರೇಶ್ ಕುಮಾರ್ ಸೇರಿದಂತೆ ಶಿಕ್ಷಕ ವೃಂದ ಹಾಗು ವಿದ್ಯಾರ್ಥಿಗಳು ಇದ್ದರು.

ನಿಮ್ಮ ಊರಿನ ಅದ್ಧೂರಿ ಜಾತ್ರೆ, ವಿಶೇಷ ಆಚರಣೆಗಳು, ಅಥವಾ ನಿಮ್ಮ ಗಮನಕ್ಕೆ ಬಂದ ಸ್ಥಳೀಯ ಸಮಸ್ಯೆಗಳೇ? ಚಿತ್ರದುರ್ಗ ಹಾಗೂ ಸುತ್ತಮುತ್ತಲಿನ ಯಾವುದೇ ಸುದ್ದಿಯಾದರೂ ನಮಗೆ ತಿಳಿಸಿ. ನಿಮ್ಮ ಧ್ವನಿಯಾಗಿ ನಾವು ನಾಡಿಗೆ ತಲುಪಿಸುತ್ತೇವೆ. ಛಾಯಾಚಿತ್ರ ಮತ್ತು ವಿವರಗಳೊಂದಿಗೆ ನಮಗೆ ಇಮೇಲ್ ಮಾಡಿ.
✉️ suddionenews@gmail.com🛡️ ನಿಮ್ಮ ಮಾಹಿತಿಯನ್ನು ಗೌಪ್ಯವಾಗಿಡಲಾಗುವುದು.






ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್