ಹುಬ್ಬಳ್ಳಿ: ಕಳೆದ ಭಾನುವಾರತಡರಾತ್ರಿ ಅಚ್ಚವ್ವನ ಕಾಲೋನಿಯ ಈಶ್ವರ ದೇವಸ್ಥಾನದಲ್ಲಿ ಸಿಲಿಂಡರ್ ಸ್ಪೋಟವಾಗಿತ್ತು. ಇದರಿಂದ ಅಯ್ಯಪ್ಪ ಮಾಲಾಧಾರಿಗಳು ಗಾಯಗೊಂಡಿದ್ದರು. ಒಂಭತ್ತು ಜನರಲ್ಲಿ ಒಬ್ಬೊಬ್ಬರೇ ಮೃತರಾಗುತ್ತಿದ್ದಾರೆ. ಇಂದು ಕೂಡ ಅಯ್ಯಪ್ಪ ಮಾಲಾಧಾರಿ ಮೃತರಾಗಿದ್ದು, ಒಟ್ಟು ಆರು ಜನ ಮೃತರಾಗಿದ್ದಾರೆ. ಇನ್ನು ಮೂವರು ಮಾಲಾಧಾರಿಗಳು ಆಸ್ಪತ್ರೆಯಲ್ಲಿಯೇ ಕ್ರಿಟಿಕಲ್ ಕಂಡೀಷನ್ ನಲ್ಲಿದ್ದಾರೆ.
ಆದರೆ ಮೃತ ಮಾಲಾಧಾರಿಗಳ ಮನೆಯಲ್ಲಿ ಇವರನ್ನೇ ನಂಬಿಕೊಂಡು ಜೀವನ ನಡೆಯುತ್ತಿತ್ತು ಎಂಬುದೇ ಬೇಸರದ ಸಂಗತಿ. ಈಗ ಮನೆಯ ಜವಾಬ್ದಾರಿ ಇನ್ಯಾರದ್ದು ಎಂಬ ಚಿಂತೆಯಾಗಿದೆ. ಆರು ಜನ ಮೃತ ಮಲಾಧಾರಿಗಳ ಪೈಕಿ ಸಂಜಯ್ ಸವದತ್ತಿ, ರಾಜು ಮೂಗೇರಿ, ಲಿಂಗರಾಜ ಬೀರನೂರ ಇವರೆಲ್ಲ ಮನೆಗೆ ಒಬ್ಬರೇ ಮಕ್ಕಳಿದ್ದವರು.
ಲಿಂಗರಾಜು ಪ್ರತಿಷ್ಠಿತ ಕೆಎಲ್ಇ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದರು. ಬರುತ್ತಿದ್ದ ವೇತನದಲ್ಲಿಯೇ ತಮ್ಮ ಸಂಸಾರ ನೋಡಿಕೊಳ್ಳುತ್ತಿದ್ದ. ಇನ್ನು ಮೃತ ರಾಜು ತರಕಾರಿ ಮಾರಿ ಬಂದ ಹಣದಿಂದ ಮನೆ ನಿಭಾಯಿಸುತ್ತಿದ್ದ. ಇನ್ನು ಇಂದು ಮಧ್ಯರಾತ್ರಿ ಶಂಕರ್ ಎಂಬ ಮಾಲಾಧಾರಿಯೂ ಮೃತರಾಗಿದ್ದಾರೆ. ಕಿಮ್ಸ್ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದರು.
ಮೃತ ಮಾಲಾಧಾರಿಗಳ ಮನೆಯಬರು ಕಣ್ಣೀರಲ್ಲಿ ಕೈತೊಳೆಯುತ್ತಿದ್ದಾರೆ. ಶಂಕರ್ ಅವರಿಗೆ ತಂದೆ ತಾಯಿ ಇಬ್ಬರು ಇರಲಿಲ್ಲ. ಮಗುವಾಗಿದ್ದಾಗಿನಿಂದ ಅವರ ದೊಡ್ಡಮ್ಮ ಮಂಜುಳಾ ಅವರ ಜೊತೆಗೆ ಬೆಳೆದಿದ್ದರು. ಕಿಮ್ಸ್ ನಲ್ಲಿಯೇ ಕೆಲಸ ಮಾಡುತ್ತಿದ್ದ ಶಂಕರ್ ಅಲ್ಲಿಯೇ ಸಾವಾಗಿದೆ. ಒಳ್ಳೆಯ ಹುಡುಗ. ಇನ್ನೊಂದೆರಡು ತಿಂಗಳು ಬಿಟ್ಟು ಹುಡುಗಿ ಹುಡುಕಿ ಮದುವೆ ಮಾಡಬೇಕು ಎಂದುಕೊಂಡಿದ್ದೋ. ಆದರೆ ಈಗ ಅಯ್ಯಪ್ಪ ಸ್ವಾಮಿ ಶಂಕರ್ ನ ಕರೆದುಕೊಂಡು ಬಿಟ್ಟಿದೆ ಎಂದು ಮಂಜುಳಾ ಕಣ್ಣೀರು ಹಾಕಿದ್ದಾರೆ.