ವಿಪಕ್ಷದವರು ಹುಳಿ ಹಿಂಡುವ ಅಗತ್ಯವಿಲ್ಲ : ಸಿದ್ದರಾಮಯ್ಯ ಗರಂ

1 Min Read

ಬೆಳಗಾವಿ: ಇಂದು ಅಧಿವೇಶನದಲ್ಲಿ ಸಿದ್ದರಾಮಯ್ಯ ಹಾಗೂ ವಿಪಕ್ಷದವರ ನಡುವೆ ಜೋರು ಗದ್ದಲವಾಗಿದ್ದೆ ಹೆಚ್ಚು. ಇದೇ ಸಂದರ್ಭದಲ್ಲಿ ಬಿಜೆಪಿಯವರಿಗೆ ಸಿದ್ದರಾಮಯ್ಯ ಅವರು ಎಚ್ಚರಿಕೆಯನ್ನು ನೀಡಿದ್ದಾರೆ. ನೀವೂ ಸದಾ ವಿರೋಧ ಪಕ್ಷದ ಸ್ಥಾನದಲ್ಲಿಯೆ ಇರಲಿದ್ದೀರಿ ಎಂದಿದ್ದಾರೆ.

ವಿಧಾನಸಭಾ ಕಲಾಪದಲ್ಲಿ ವಿರೋಧ ಪಕ್ಷದವರ ಪ್ರಶ್ನೆಗಳಿಗೆ ಉತ್ತರಿಸುತ್ತಾ ಮಾತನಾಡಿದ ಸಿದ್ದರಾಮಯ್ಯ ಅವರು, 140 ಶಾಸಕರು ನಮ್ಮೊಂದಿಗೆ ಇದ್ದಾರೆ. ವಿಕ್ಷದವರು ಹುಳಿ ಹಿಂಡುವ ಅಗತ್ಯವಿಲ್ಲ. 2023ರಂತೆ 2028ರಲ್ಲಿಯೂ ಜನಾಶೀರ್ವಾದದೊಂದಿಗೆ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಲಿದೆ. ಬಿಜೆಪಿಯವರು ಸದಾ ವಿರೋಧ ಪಕ್ಷದ ಸ್ಥಾನದಲ್ಲಿಯೇ ಇರಲಿದ್ದಾರೆ. ಉರಿಯುವುದರ ಮೇಲೆ ಉಪ್ಪು ಹಾಕಬಾರದು ಎಂಬ ಗಾದೆ ಮಾತಿದೆ. ವಿರೋಧ ಪಕ್ಷದವರು ಉರಿಯುವುದರ ಮೇಲೆ ಉಪಗಪು ಸುರಿಯುತ್ತಿದ್ದಾರೆ.

ವಿರೋಧ ಪಕ್ಷದವರು ಏನೇ ಪ್ರಚೋದನೆ ಮಾಡಿದರು ನಮ್ಮ ಶಾಸಕರು ಯಾರೂ ಪ್ರಚೋದಿತರಾಗುವುದಿಲ್ಲ. 2023ರಲ್ಲಿ ಜನರು ಆಶೀರ್ವಾದ ಮಾಡಿದ್ದಾರೆ. 2028ರಲ್ಲಿಯೂ ಮಾಡ್ತಾರೆ. ಕರ್ನಾಟಕದ ಜನ ಬಿಜೆಪಿಯನ್ನು ಎಂದಿಗೂ ಅಧಿಕಾರಕ್ಕೆ ತರುವುದಿಲ್ಲ. ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಎರಡೂ ಬಾರಿ ಅಧಿಕಾರ ನಡೆಸಿದರೂ ಒಂದು ಬಾರಿಯೂ ಜನರ ಆಶೀರ್ವಾದದಿಂದ ಅಧಿಕಾರಕ್ಕೆ ಬಂದಿಲ್ಲ. 2008, 2017ರಲ್ಲಿ ಆಪರೇಷನ್ ಕಮಲ ಮಾಡಿ, ಹಿಂಬಾಗಿಲಿನಿಂದ ಅಧಿಕಾರಕ್ಕೆ ಬಂದಿದ್ದಾರೆ. ರಾಜ್ಯದ ಜನ ಬಿಜೆಪಿಗೆ ಆಶೀರ್ವಾದ ಮಾಡುವುದಿಲ ಎಂಬುದು ಸ್ಪಷ್ಟವಾಗಿದೆ. 2019ರಲ್ಲಿ ಬಿಜೆಪಿ ಅಧಿಕಾರಕ್ಕೆ ಬರಬಾರದೆಂಬ ಉದ್ದೇಶದಿಂದ ಜೆಡಿಎಸ್ ನೊಂದಿಗೆ ಸರ್ಕಾರ ರಚಿಸಲಾಗಿತ್ತು. ಆದರೆ ಬಿಜೆಪಿಯವರು ಜೆಡಿಎಸ್ ನೊಂದಿಗೆ ಮೈತ್ರಿ‌ ಮಾಡಿಕೊಂಡಿರುವ ಉದ್ದೇಶದ ಬಗ್ಗೆ ಪ್ರಶಚನಿಸಿದರಹ. ಬಿಜೆಪಿಯವರಿಗೆ ಅಸೂಯೆ ಕಾಡುತ್ತಿದೆ. ಇದು ನನ್ನ ಸರ್ಕಾರವಲ್ಲ ನಮ್ಮ ಸರ್ಕಾರ ಎಂದು ಸಿದ್ದರಾಮಯ್ಯ ಅವರು ವಿಪಕ್ಷಕ್ಕೆ ತಿರುಗೇಟು ನೀಡಿದರು.

Share This Article