Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ನಮ್ಮಲ್ಲಿ ಯಾವುದೇ ಗೊಂದಲವಿಲ್ಲ : ಡಿಕೆಶಿ ಪರ ಬ್ಯಾಟ್ ಬೀಸಿದ್ದ ಇಕ್ಬಾಲ್ ಅವರಿಂದ ಸ್ಪಷ್ಟನೆ

---Advertisement---

ರಾಮನಗರ: ಕಳೆದ ಕೆಲವು ತಿಂಗಳ ಹಿಂದೆ ನಮ್ಮ ಮಂತ್ರುಗಳು ಅಂದ್ರೆ ಡಿಸಿಎಂ ಡಿಕೆ ಶಿವಕುಮಾರ್ ಅವರು ಮುಖ್ಯಮಂತ್ರಿ ಆಗಿಯೇ ಆಗ್ತಾರೆ ಎಂಬ ಮಾತನ್ನ ಹೇಳಿದ್ದರು. ಇದೀಗ ರಾಮನಗರ ಶಾಸಕ ಇಕ್ಬಾಲ್ ಅವರು, ನಮ್ಮಲ್ಲಿ ಯಾವುದೇ ಗೊಂದಲವಿಲ್ಲ ಎಂಬುದನ್ನ ಒಪ್ಪಿಕೊಂಡಿದ್ದಾರೆ.

ಹೈಕಮಾಂಟ್ ಸೂಚನೆ ಮೇರೆಗೆ ಈಗಾಗಲೇ ಸಿಎಂ ಮನೆಯಲ್ಲಿ ಡಿಕೆಶಿ, ಡಿಕೆಶಿ ಮನೆಯಲ್ಲಿ ಸಿದ್ದು ಬ್ರೇಕ್ ಫಾಸ್ಟ್ ಮೀಟಿಂಗ್ ಮಾಡಿ ಆಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಇಕ್ಬಾಲ್, ವೆಜ್ ಆಯ್ತು, ನಾನ್ ವೆಜ್ ಕೂಡ ಆಯ್ತು ಎಲ್ಲರು ಸಮಾಧಾನವಾಗಿ ಇದ್ದಾರೆ ಎಂಬುದು ಕೂಡ ಅರ್ಥವಾಯ್ತು. ನಮ್ಮಲ್ಲಿ ಯಾವುದೇ ಗೊಂದಲಗಳು ಇಲ್ಲ. ಹೈಕಮಾಂಡ್ ಏನೇ ತೀರ್ಮಾನ ಇದ್ದರೂ ಅದನ್ನ ನಾವೇ ಮಾಡಿತ್ತೇವೆ ಎಂದು ಹೇಳಿದೆ. ಇದೆಲ್ಲಿ ಇನ್ನೂ ಯಾವುದೇ ಗೊಂದಲ ಉಳಿದಿಲ್ಲ. ಇಡ್ಕಿ, ನಾಟಿಕೋಳಿ ಎಲ್ಲರೂ ಸಮಾನರು ಇದನ್ನ ಅರ್ಥ ಮಾಡಿಸಿದೆ ಎಂದಿದ್ದಾರೆ.

ಇದೆ ವೇಳೆ ಸಿದ್ದರಾಮಯ್ಯ ಅವರು ಅಧಿಕಾರ ಶಾಶ್ವತ ಅಲ್ಲ ಎಂದು ಹೇಳಿದ್ದ ಮಾತಿನ ಬಗ್ಗೆ ಪ್ರತಿಕ್ರಿಯೆ ನೀಡಿ, ಇದರಲ್ಲಿ ಯಾವುದೇ ವೈರಾಗ್ಯ ಇಲ್ಲ. ಇದು ಸಹಜ ಅಲ್ವಾ..? ಅಧಿಕಾರ ಯಾರಿಗೂ ಶಾಶ್ವತ ಅಲ್ಲ. ನನಗೂ ಅಧಿಕಾರ ಶಾಶ್ವತ ಅಲ್ಲ. ಹಿಂದೆ ಇದ್ದ ಕುಮಾರಸ್ವಾಮಿಗೆ ಅಧಿಕಾರ ಶಾಶ್ವತ ಇತ್ತಾ..? ಕೇವಲ ಅಧಿಕಾರ ಮಾತ್ರವಲ್ಲ, ಪ್ರಪಂಚವೇ ಯಾರಿಗೂ ಶಾಶ್ವತ ಅಲ್ಲ. ಎಲ್ಲದಕ್ಕೂ ಒಂದು ಕೊನೆ ಇರುತ್ತದೆ. ನಮ್ಮ ಸಿಎಂ ಅರ್ಥಬದ್ಧವಾದ ಮಾತನ್ನೇ ಹೇಳಿದ್ದಾರೆ ಎಂದಿದ್ದಾರೆ. ಈ ಮೂಲಕ ಸದ್ಯ ತಮ್ಮ ಪಕ್ಷದಲ್ಲಿ ಯಾವುದೇ ಗೊಂದಲವಿಲ್ಲ‌ ಎಂಬ ಮಾತನ್ನು ಸ್ಪಷ್ಟಪಡಿಸಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now