ಚೆನ್ನೈ: ಬಹು ನಿರೀಕ್ಷೆಯಿಂದ ಕಾಯುತ್ತಿದ್ದಂತ ಐಪಿಎಲ್ ಗೆ ಕ್ಷಣಗಣನೆ ಶುರುವಾಗಿದೆ. ಮೊದಲ ಪಂದ್ಯದಲ್ಲಿ ಆರ್ಸಿಬಿ ಹಾಗೂ ಸಿಎಸ್ಕೆ ಮುಖಾಮುಖಿಯಾಗಲಿವೆ. ಈ ಬಾರಿ ಹೆಣ್ಣು ಮಕ್ಜಳು ಕಪ್ ಗೆದ್ದಾಗಿದೆ, ಗಂಡು ಮಕ್ಕಳು ಕಪ್ ಗೆಲ್ಲಲಿ ಎಂದು ಅಭಿಮಾನಿಗಳು ಈಗಾಗಲೇ ದೇವರಿಗೆ ಪೂಜೆ ಪುನಸ್ಕಾರಗಳನ್ನು ಶುರು ಮಾಡಿದ್ದಾರೆ. ಆದ್ರೆ ಇದೀಗ ಐಪಿಎಲ್ ಟ್ರೋಫಿ ಕಡೆಗೆ ಎಲ್ಲರ ಚಿತ್ತ ಗಮನ ಸೆಳೆದಿದೆ.
ಈ ಟ್ರೋಫಿಯಲ್ಲಿ ಸಂಸ್ಕೃತ ಶ್ಲೋಕವೊಂದಿದೆ. ‘ಯಾತ್ರಾ ಅವಸರ ಪ್ರಾಪ್ನೋತಿಹಿ’ ಎಂಬ ಶ್ಲೋಕವನ್ನು ಬರೆಯಲಾಗಿದೆ. ಇದರ ಅರ್ಥ ಏನಂದ್ರೆ ಎಲ್ಲಿ ಪ್ರತಿಭೆಗಳು ಇರುತ್ತವೋ ಅಲ್ಲಿ ಅವಕಾಶವೂ ಇರುತ್ತವೆ ಎಂಬುದಾಗಿದೆ. ಈ ಶ್ಲೋಕವನ್ನು ಸ್ಪೂರ್ತಿಯಾಗಿಯೇ ತೆಗೆದುಕೊಳ್ಳಲಾಗಿದೆ. ಹೀಗಾಗಿ ಐಪಿಎಲ್ ಟ್ರೋಫಿ ಮೇಲೆ ಬರೆಯಲಾಗಿದೆ.
ಕಪ್ ಮೇಲೆ ಶ್ಲೋಕ ಬರೆದಿರುವುದು ನಿನ್ನೆ ಮೊನ್ನೆಯಲ್ಲ. ಅದರ ಹಿಂದೆ ಕಾರಣವೂ ಇದೆ. 1983ರಲ್ಲಿ ಕಪಿಲ್ ದೇವ್ ಸಾರಥ್ಯದ ಭಾರತದ ತಂಡ ವಿಶ್ವಕಪ್ ಆಡಲು ಲಂಡನ್ ಗೆ ತೆರಳಿತ್ತು. ಅಲ್ಲಿ ಭಾರತ ತಂಡವನ್ನು ಅತ್ಯಂತ ಕೀಳಾಗಿ ಕಾಣಲಾಗಿತ್ತು. ಅಂದು ಕಪಿಲ್ ದೇವ್ ತಂಡ ವಿಶ್ವ ಕಪ್ ಗೆದ್ದಿತ್ತು. ಇತಿಹಾಸವನ್ನು ನಿರ್ಮಿಸಿತ್ತು. ಅಂದು ಆ ಕಪ್ ಮೇಲೆ ಈ ಶ್ಲೋಕವನ್ನು ಬರೆಸಲಾಗಿತ್ತು. ಇದನ್ನೇ ಪ್ರಸಿದ್ಧ ಐಪಿಎಲ್ ಟ್ರೋಫಿ ಮೇಲೆ ಬರೆಸಲಾಗುತ್ತದೆ.
ಐಪಿಎಲ್ 2024 ನಾಳೆಯಿಂದ ಅದ್ದೂರಿ ಚಾಲನೆ ಪಡೆಯಲಿದೆ. ಉದ್ಘಾಟನಾ ಸಮಾರಂಭಕ್ಕೂ ವೇದಿಕೆ ಸಿದ್ಧವಾಗಿದೆ. ಸೆಲೆಬ್ರೆಟಿಗಳು ಕೂಡ ಈ ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ. ಈ ಬಾರಿ ನಮ್ಮ ಆರ್ಸಿಬಿ ಕಪ್ ಯಾವುದೇ ಕಾರಣಕ್ಕೂ ಮಿಸ್ ಮಾಡುವುದೇ ಇಲ್ಲ ಎಂಬ ಭರವಸೆ ನಮ್ಮ ಕನ್ನಡಿಗರಲ್ಲಿದೆ. ನೋಡೋಣಾ ಕಾದು.