ರೀಲ್ಸ್ ಮಾಡಲು ಹೋಗಿ ನೀರಿನಲ್ಲಿ ಮುಳುಗಿ ನಾಪತ್ತೆಯಾದ ಯುವಕರು…!

0 Min Read

ದಾವಣಗೆರೆ : ರೀಲ್ಸ್ ಮಾಡಲು ಹೋಗಿ ಯುವಕರು ನೀರಿನಲ್ಲಿ ಮುಳುಗಿ ನಾಪತ್ತೆಯಾದ ಘಟನೆ ಹರಿಹರ ಸಮೀಪದ ಹರಗನಹಳ್ಳಿ ಚೆಕ್ ಡ್ಯಾಂ ನಲ್ಲಿ ನಡೆದಿದೆ.

ಹರಿಹರ ಆಶ್ರಯ ಬಡಾವಣೆಯ ಪವನ್ (25), ಪ್ರಕಾಶ್ (24) ಕಳೆದ ಮೂರು ದಿನಗಳ ಹಿಂದೆ ನೀರಲ್ಲಿ ಮುಳುಗಿ ಕಣ್ಮರೆಯಾಗಿದ್ದರು.

ರೀಲ್ಸ್ ಮಾಡುವ ಸಮಯದಲ್ಲಿ ನೀರಲ್ಲಿ ಬಿದ್ದ  ಪ್ರಕಾಶ್ ನನ್ನು ರಕ್ಷಿಸಲು ಹೋಗಿ ಪವನ್ ಸಹ ನೀರಲ್ಲಿ ಮುಳುಗಿ ಕಣ್ಮರೆಯಾಗಿದ್ದ. ಇದೀಗ ಹರಿಹರದ ರಾಘವೇಂದ್ರ ಮಠದ ಬಳಿ ಓರ್ವನ ಶವ ಪತ್ತೆಯಾಗಿದ್ದು, ಮತ್ತೋರ್ವನಿಗಾಗಿ ಅಗ್ನಿಶಾಮಕ ದಳ ಹಾಗು ಪೊಲೀಸರು ಶೋಧ ನಡೆಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *