Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

🔴 ಅಡ್ಮಿಷನ್ ಓಪನ್

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್, ಚಿತ್ರದುರ್ಗ

2026-27ನೇ ಸಾಲಿನ ದಾಖಲಾತಿಗಳು ಪ್ರಾರಂಭ! (ಪ್ಲೇ ಗ್ರೂಪ್‌ನಿಂದ 12ನೇ ತರಗತಿವರೆಗೆ)

ಸಂಪೂರ್ಣ ಮಾಹಿತಿ & ದಾಖಲಾತಿಗಾಗಿ ಕ್ಲಿಕ್ ಮಾಡಿ ➔
---Advertisement---

ಬಸ್ ನಲ್ಲಿ ತಲೆ ಹೊರಗಿಟ್ಟಿದ್ದ ಮಹಿಳೆ : ಕತ್ತರಿಸಿದ ಲಾರಿ : ಚಾಮರಾಜನಗರದಲ್ಲಿ ಘೋರ ದುರಂತ..!

---Advertisement---

ಚಾಮರಾಜನಗರ: ಜಿಲ್ಲೆಯಲ್ಲಿ ಒಂದು ದುರಂತ ಅಂತ್ಯವಾಗಿದೆ. ದೃಶ್ಯ ನೋಡಿದರೆ ಎದೆ ಝಲ್ ಎನ್ನುತ್ತೆ, ಭಯವಾಗುತ್ತದೆ. ಬಸ್ ನಲ್ಲಿ ಓಡಾಡುವವರು ಎಷ್ಟು ಎಚ್ಚರದಿಂದ ಇರಬೇಕು ಎಂಬ ಗಾಬರಿಯಾಗುತ್ತದೆ. ಎಷ್ಟೋ ಸಲ ಬಸ್ ನಲ್ಲಿ ಓಡಾಡುವವರಲ್ಲಿ ಕಿಟಕಿಯಿಂದ ಆಚೆ ತಲೆ ಇಟ್ಟು ನೋಡುವುದು, ಕೈ ಇಟ್ಟು ಕೂರುವುದು ಅಭ್ಯಾಸ ಮಾಡಿಕೊಂಡಿರುತ್ತಾರೆ. ಡ್ರೈವರ್ ಗಳು, ಕಂಡಕ್ಟರ್ ಅದನ್ನ ನೋಡಿದರೆ ಎಚ್ಚರಿಕೆ ನೀಡುತ್ತಾರೆ. ಆದರೆ ಬಸ್ ನಲ್ಲಿ ಓಡಾಡುವವರು ಕೂಡ ಎಚ್ಚರದಿಂದ ಇರಬೇಕಾಗಿರುತ್ತದೆ. ಇವತ್ತು ಚಾಮರಾಜನಗರದಲ್ಲಿ ಘೋರ ದುರಂತ ನಡೆದಿದೆ.

ಕೆಎಸ್ಆರ್ಟಿಸಿ ಬಸ್ ನಲ್ಲಿ ಪರ್ಯಾಣಿಸುತ್ತಿದ್ದ ಮಹಿಳೆ ತನ್ನ ತಲೆಯನ್ನ ಕಿಟಕಿಯಿಂದ ಹೊರಗೆ ಇಟ್ಟು ಕೂತಿದ್ದರು. ಆ ಸಮಯದಲ್ಲಿ ಬಂದ ಲಾರಿಯೊಂದು ಮಹಿಳೆಯ ತಲೆಯನ್ನೇ ಕತ್ತರಿಸಿ ಹೋಗಿದೆ. ಆ ಮಹಿಳೆಯ ದೇಹ ಬಸ್ ನಲ್ಲಿ ತಲೆ ರೋಡ್ ನಲ್ಲಿ ಬಿದ್ದಿದೆ. ಪ್ರಾಣ ಹೋಗುವುದಕ್ಕೂ ಆ ಮಹಿಳೆಯ ದೇಹ ವಿಲವಿಲ ಅಂತ ಒದ್ದಾಡಿದೆ. ಎಲ್ಲಿಗೋ ಹೋಗಲು ಬಂದಿದ್ದ ಮಹಿಳೆ ಭಯಂಕರವಾಗಿ ಸಾವನ್ನಪ್ಪಿದ್ದಾರೆ.

ಈ ಘಟನೆ ನಡೆದಿರೋದು ಚಾಮರಾಜನಗರದ ಗುಂಡ್ಲುಪೇಟೆಯಲ್ಲಿ. ಗುಂಡ್ಲುಪೇಟೆಯಿಂದ ಬಸ್ ನಂಜನಗೂಡು ಕಡೆಗೆ ಹೊರಟಿತ್ತು. ರಭಸವಾಗಿ ಬಂದ ಲಾರಿಯಿಂದ ಮಹಿಳೆಯ ಪ್ರಾಣ ಹಾರಿ ಹೋಗಿದೆ. ಆಕ್ಸಿಡೆಂಟ್ ಮಾಡಿ, ಸಾವಿಗೆ ಕಾರಣವಾದ ಆ ಲಾರಿಯ ಡ್ರೈವರ್ ತಿರುಗಿಯೂ ನೋಡದೆ ಹೋಗಿದ್ದಾನೆ. ಸ್ಥಳಕ್ಕೆ ಬಂದ ಪೊಲೀಸರು ಮೃತ ಮಹಿಳೆಯ ದೇಹವನ್ನು ಆಸ್ಪತ್ರೆಗೆ ರವಾನಿಸಿ, ಸ್ಥಳವನ್ನ ಪರಿಶೀಲನೆ ಮಾಡಿದ್ದಾರೆ. ಸದ್ಯ ಗುಂಡ್ಲುಪೇಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಲಾರಿ ಡ್ರೈವರ್ ಗಾಗು ಹುಡುಕಾಟ ನಡೆಸಿದ್ದಾರೆ.

ನಿಮ್ಮೂರಿನ ಸುದ್ದಿ, ಈಗ 'ಸುದ್ದಿ ಒನ್' ನಲ್ಲಿ!

ನಿಮ್ಮ ಊರಿನ ಅದ್ಧೂರಿ ಜಾತ್ರೆ, ವಿಶೇಷ ಆಚರಣೆಗಳು, ಅಥವಾ ನಿಮ್ಮ ಗಮನಕ್ಕೆ ಬಂದ ಸ್ಥಳೀಯ ಸಮಸ್ಯೆಗಳೇ? ಚಿತ್ರದುರ್ಗ ಹಾಗೂ ಸುತ್ತಮುತ್ತಲಿನ ಯಾವುದೇ ಸುದ್ದಿಯಾದರೂ ನಮಗೆ ತಿಳಿಸಿ. ನಿಮ್ಮ ಧ್ವನಿಯಾಗಿ ನಾವು ನಾಡಿಗೆ ತಲುಪಿಸುತ್ತೇವೆ. ಛಾಯಾಚಿತ್ರ ಮತ್ತು ವಿವರಗಳೊಂದಿಗೆ ನಮಗೆ ಇಮೇಲ್ ಮಾಡಿ.

✉️ suddionenews@gmail.com

🛡️ ನಿಮ್ಮ ಮಾಹಿತಿಯನ್ನು ಗೌಪ್ಯವಾಗಿಡಲಾಗುವುದು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...