ಬೀದರ್: ಕೊರೊನಾ ಕಂಟ್ರೋಲ್ ಗೆಂದು ಸರ್ಕಾರ ಜಾರಿ ಮಾಡಲಾಗಿದ್ದ ಕೊರೊನಾ ಕರ್ಫ್ಯೂ ನಿಯಮವನ್ನ ರದ್ದು ಮಾಡಲಾಗಿದೆ. ಈ ಬಗ್ಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಆಕ್ರೋಶ ಹೊರಹಾಕಿದ್ದಾರೆ.

ಕಾಂಗ್ರೆಸ್ ನಾಯಕರ ಮೇಕೆದಾಟು ಯೋಜನೆಯನ್ನ ಮೊಟಕುಗೊಳಿಸಲು ರಾಜ್ಯ ಸರ್ಕಾರ ವೀಕೆಂಡ್ ಕರ್ಫ್ಯೂ ಜಾರಿಗೆ ತಂದಿತ್ತು. ನಿನ್ನೆ ವೀಕೆಂಡ್ ಕರ್ಫ್ಯೂ ರದ್ದು ಮಾಡುವ ಮೂಲಕ ಅದನ್ನ ಬಿಜೆಪಿ ಸರ್ಕಾರವೇ ಸಾಬೀತು ಪಡಿಸಿದೆ. ರಾಜಕೀಯ ಉದ್ದೇಶದಿಂದಲೇ ನಾವೂ ವೀಕೆಂಡ್ ಕರ್ಫ್ಯೂ ಜಾರಿ ಮಾಡಿದ್ದು ಎಂದು ಸಾಬೀತು ಮಾಡಿದೆ.
ಮೇಕೆದಾಟು ಪಾದಯಾತ್ರೆ ವಿಚಾರ ನನ್ನ ಮತ್ತು ಡಿಕೆಶಿ, ಸಿದ್ದರಾಮಯ್ಯ ಅವರ ಮೇಲೆ ಮೂರು ಕೇಸ್ ಗಳನ್ನ ದಾಖಲಿಸಿದ್ದಾರೆ. ಆದ್ರೆ ಸಾವಿರಾರು ಜನರನ್ನ ಸೇರಿಸಿ ಕೇಂದ್ರ ಸಚಿವ ಭಗವಂತ್ ಖೂಬಾ ಜನಾಶೀರ್ವಾದ ಯಾತ್ರೆ ಮಾಡಿದ್ರು. ಅಕ್ರಮ ಬಂದೂಕಿನಿಂದ ಅವರನ್ನ ಸ್ವಾಗತಿಸಿದ್ರು ಕೂಡ, ಅವರ ಮೇಲೆ ಯಾವುದೇ ಕೇಸ್ ದಾಖಲಿಸಿಲ್ಲ ಎಂದು ಕಿಡಿಕಾರಿದ್ದಾರೆ.
