Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ರಾಜ್ಯದಲ್ಲಿ ಔಷಧ ನಿಯಂತ್ರಣಕ್ಕೆ ದೇಶದಲ್ಲೇ ಮೊದಲ ಆನ್ಲೈನ್ ನಿಗಾ ವ್ಯವಸ್ಥೆ : ಆರೋಗ್ಯ ಸಚಿವ ದಿನೇಶ್ ಗುಂಡೂರಾವ್

---Advertisement---

ಸುದ್ದಿಒನ್,ಬೆಂಗಳೂರು,ಮೇ.16: ರಾಜ್ಯದಲ್ಲಿ ಸರಬರಾಜಾಗುವ ಔಷಧಗಳ ಮೇಲೆ ಕಟ್ಟುನಿಟ್ಟಿನ ನಿಗಾ ಇರಿಸಲು ಮತ್ತು ಅವುಗಳ ಗುಣಮಟ್ಟವನ್ನು ಖಚಿತಪಡಿಸಿಕೊಳ್ಳಲು ದೇಶದಲ್ಲೇ ಮೊದಲ ಬಾರಿಗೆ ಆನ್ಲೈನ್ ಆಧಾರಿತ ನಿಗಾ ವ್ಯವಸ್ಥೆ (Online Monitoring System) ಜಾರಿಗೆ ತರಲಾಗಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ತಿಳಿಸಿದ್ದಾರೆ.

ಈ ನೂತನ ತಂತ್ರಜ್ಞಾನವು ಔಷಧ ಕ್ಷೇತ್ರದ ಮೇಲೆ ಸರ್ಕಾರಿ ನಿಯಂತ್ರಣವನ್ನು ಮತ್ತಷ್ಟು ಬಲಪಡಿಸಲಿದ್ದು, ರೋಗಿಗಳಿಗೆ ಸುರಕ್ಷಿತ ಚಿಕಿತ್ಸೆ ನೀಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿದೆ.ಮಾರುಕಟ್ಟೆಯಲ್ಲಿ ಗುಣಮಟ್ಟವಿಲ್ಲದ (Not of Standard Quality) ಔಷಧಗಳು ಪತ್ತೆಯಾದಲ್ಲಿ, ಅವುಗಳ ನಿಗದಿತ ಬ್ಯಾಚ್ಗಳನ್ನು ತಕ್ಷಣವೇ ಗುರುತಿಸಿ ಹಿಂಪಡೆಯಲು ಈ ವ್ಯವಸ್ಥೆ ಸಹಕಾರಿಯಾಗಲಿದೆ.ಔಷಧಗಳ ಉತ್ಪಾದನೆಯಿಂದ ಹಿಡಿದು ವಿತರಣೆಯವರೆಗೆ ಪ್ರತಿ ಹಂತದಲ್ಲೂ ಪಾರದರ್ಶಕತೆ ಕಾಯ್ದುಕೊಳ್ಳಲು ಈ ಡಿಜಿಟಲ್ ವೇದಿಕೆ ನೆರವಾಗಲಿದೆ.

ಕಳಪೆ ಗುಣಮಟ್ಟದ ಔಷಧಗಳು ರೋಗಿಗಳಿಗೆ ತಲುಪದಂತೆ ತಡೆಯುವುದು ಈ ವ್ಯವಸ್ಥೆಯ ಮುಖ್ಯ ಗುರಿಯಾಗಿದೆ.ದೇಶದಲ್ಲೇ ಇಂತಹದೊಂದು ಆನ್ಲೈನ್ ವ್ಯವಸ್ಥೆಯನ್ನು ಜಾರಿಗೆ ತರುತ್ತಿರುವ ಮೊದಲ ರಾಜ್ಯ ಕರ್ನಾಟಕವಾಗಿದೆ. ಇದರಿಂದ ಔಷಧಗಳ ಗುಣಮಟ್ಟದಲ್ಲಿ ಯಾವುದೇ ರಾಜಿ ಇಲ್ಲದೆ, ಜನಸಾಮಾನ್ಯರಿಗೆ ಸುರಕ್ಷಿತ ಆರೋಗ್ಯ ಸೇವೆ ಒದಗಿಸಲು ಸಾಧ್ಯವಾಗುತ್ತದೆ ಎಂದು ಸಚಿವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Join WhatsApp

Join Now

Join Telegram

Join Now