ಮೈಸೂರು: ಜಿಲ್ಲೆಯ ವಿಚಾರದಲ್ಲಿ ದೊಡ್ಡ ದೊಡ್ಡ ಮಟ್ಟದ ಅವ್ಯವಹಾರಗಳ ಬಗ್ಗೆಯೇ ದೂರು ಸಲ್ಲಿಕೆಯಾಗುತ್ತಿವೆ. ಈಚೆಗಷ್ಟೇ ಮೂಡಾ ಹಗರಣವಾಯ್ತು ಈಗ ತಾಯಿ ಚಾಮುಂಡಿ ವಿಚಾರಕ್ಕೆ ದೂರು ಸಲ್ಲಿಕೆಯಾಗಿದೆ. ಮೂಡಾ ಹಗರಣದಲ್ಲಿ ಸದ್ದು ಮಾಡಿದ್ದ ಸ್ನೇಹಮಯಿ ಕೃಷ್ಣ ಅವರೇ ಈ ವಿಚಾರಕ್ಕೂ ದೂರು ಸಲ್ಲಿಕೆ ಮಾಡಿದ್ದಾರೆ.
ಚಾಮುಂಡಿ ತಾಯಿಗೆ ಭಕ್ತರ ಸಂಖ್ಯೆ ಏನು ಕಡಿಮೆ ಇಲ್ಲ. ನಮ್ಮ ರಾಜ್ಯದಲ್ಲಿ ಮಾತ್ರವಲ್ಲ ಬೇರೆ ಬೇರೆ ರಾಜ್ಯಗಳಿಂದಾನೂ ಅಷ್ಟೇ ಯಾಕೆ ಫಾರಿನರ್ಸ್ ಕೂಡ ತಾಯಿಗೆ ಭಕ್ತರೇ. ಬಂದವರಿಗೆ, ಬೇಡಿದವರಿಗೆ ತಾಯಿ ಬರಿಗೈನಲ್ಲಿ ಕಳುಹಿಸಲ್ಲ ಎಂಬ ನಂಬಿಕೆ ಇದೆ. ಭಕ್ತರಿಗೆ ಅದು ಅನುಭವ ಕೂಡ ಆಗಿದೆ. ಹೀಗಾಗಿ ಹರಕೆ ಹೊತ್ತು ತಾಯಿ ಸನ್ನಿಧಾನಕ್ಕೆ ಬರುವವರೇ ಹೆಚ್ಚು, ಹರಕೆ ತೀರುಸವವರು ಹೆಚ್ಚು. ಸಾಮಾನ್ಯವಾಗಿ ಹೆಣ್ಣು ದೇವರಿಗೆ ಮಡಿಲಕ್ಕಿ ಕೊಡುವ ಹರಕೆಯನ್ನೇ ಹೆಚ್ಚು ಹೊರುತ್ತಾರೆ. ಅದೇ ರೀತಿ ತಯಿ ಚಾಮುಂಡಿಗೂ ಮಡಿಲಕ್ಕಿ ಜೊತೆಗೆ ಸೀರೆಯನ್ನು ಭಕ್ತರು ನೀಡುತ್ತಾರೆ. ಈ ಸೀರೆಯನ್ನು ಒಮ್ಮೆ ದೇವರ ಮೈಮೇಲೆ ಹಾಕಿ, ಸಂಗ್ರಹಣಾ ಜಾಗಕ್ಕೆ ನೀಡುತ್ತಾರೆ. ತಾಯಿ ಮೈಮೇಲಿನ ಸೀರೆ ಸಿಕ್ಕರೆ ಭಕ್ತರು ಖುಷಿ ಪಡುತ್ತಾರೆ. ಆದರೆ ಈಗ ಇದನ್ನ ಸಂತೆಯಲ್ಲಿ ಮಾರಾಟ ಮಾಡುತ್ತಿದ್ದಾರೆ ಎಂದು ದೂರು ನೀಡಲಾಗಿದೆ. ಚಾಮುಂಡೇಶ್ವರಿ ಬೆಟ್ಟದ ಕಾರ್ಯದರ್ಶಿ ರೂಪಾ ಅವರು ದೇವಿಗೆ ಉಡಿಸುವ ಸೀರೆಗಳನ್ನು ಕದ್ದೊಯ್ಯುತ್ತಿದ್ದಾರೆ ಅಂತ ಸಾಮಾಜಿಕ ಹೋರಾಟಗಾರ ಸ್ನೇಹಮಯಿ ಕೃಷ್ಣ, ಮೈಸೂರಿನ ಕೆ.ಆರ್.ಠಾಣೆಯಲ್ಲಿ ದೂರು ನೀಡಿದ್ದಾರೆ.
ಆದರೆ ಈ ಬಗ್ಗೆ ರೂಪಾ ಪ್ರತಿಕ್ರಿಯೆ ನೀಡಿದ್ದು, ಎಲ್ಲಾ ಕಡೆಯಲ್ಲೂ ಸಿಸಿಟಿವಿ ಇದೆ. ಯಾವುದೇ ರೀತಿಯ ಕಳ್ಳತನ ನಡೆದಿಲ್ಲ. ಅದರಲ್ಲಿ ಇದ್ದದ್ದು ಫೈಲ್ ಗಳು ಮಾತ್ರ. ಅದಕ್ಕೆ ಸಂಬಂಧಿಸಿದಂತೆ ಒಬ್ಬ ಸಿಬ್ಬಂದಿಯನ್ನು ನಾನೇ ಅಮಾನತು ಮಾಡಿದ್ದೀನಿ ಎಂದು ಹೇಳಿದ್ದಾರೆ. ಆದರೆ ಹಸಿರು ಮೂಟೆಯಲ್ಲಿ ಟ್ರಾಫಿಕ್ ನಲ್ಲಿ ಸೀರೆ ಮಾರಾಟದ ದೃಶ್ಯಗಳು ವೈರಲ್ ಆಗಿವೆ.