Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ವರ್ಷದ ಭವಿಷ್ಯ ನುಡಿದ ಮೈಲಾರಲಿಂಗ ಕಾರಣೀಕ! ಅರ್ಥವೇನು ಗೊತ್ತೆ ? 

---Advertisement---

ಸುದ್ದಿಒನ್, ವಿಜಯನಗರ, ಫೆಬ್ರವರಿ. 02 :  ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಹರಪನಹಳ್ಳಿಯಲ್ಲಿರುವ ಪ್ರಸಿದ್ಧ ದೊಡ್ಡ ಮೈಲಾರದ ಮೈಲಾರಲಿಂಗೇಶ್ವರ ದೇವಾಲಯದಲ್ಲಿ ಭರತ ಹುಣ್ಣಿಮೆಯ ದಿನದಂದು ಈ ವರ್ಷದ ಕಾರ್ಣಿಕ ನುಡಿದಿದ್ದಾರೆ. ಈ ಮೈಲಾರಲಿಂಗಶ್ವರ ಜಾತ್ರೆಯಲ್ಲಿ ನುಡಿಯುವ ಭವಿಷ್ಯವಾಣಿಗಳು ನಿಜವಾಗುತ್ತವೆ ಎನ್ನುವ ನಂಬಿಕೆಯಿದೆ. ಇದೀಗ ಗೊರವಪ್ಪ ಭವಷ್ಯವಾಣಿ ನುಡಿದಿದ್ದಾರೆ.

ಈ ಬಾರಿ ‘ಅಂಬಲಿ ರಾಶಿಗೆ ಮುತ್ತಿನ ಗಿಣಿ, ಸಮೃದ್ಧಿಯಾಯ್ತಲೇ ಪರಾಕ್’ ಎಂಬ ಕಾರ್ಣಿಕ ನುಡಿಸಿದ್ದಾರೆ. ಇದರ ಅರ್ಥ ವರ್ಷಪೂರ್ತಿ ಉತ್ತಮ ಮಳೆಯಾಗಲಿದೆ, ಕೃಷಿ ಬೆಳೆಯು ಸಮೃದ್ಧಿಯಾಗಲಿದೆ ಹಾಗೂ ರಾಜ್ಯದ ಜನತೆ ಸಮೃದ್ಧಿಯಿಂದ ಬದುಕುವರು ಎಂದು ಭಕ್ತರು ಅಭಿಪಯ ಪಟ್ಟಿದ್ದಾರೆ. ಪ್ರತಿ ವರ್ಷ ಭರತ ಹುಣ್ಣಿಮೆಯಂದು ನುಡಿಯುವ ಈ ವಾಕ್ಯವನ್ನು ರಾಜ್ಯದ ರೈತರು, ಜ್ಯೋತಿಷಿಗಳು ಹಾಗೂ ಜನಸಾಮಾನ್ಯರು ವಿವಿಧ ಅರ್ಥಗಳಲ್ಲಿ ವಿಶ್ಲೇಷಿಸುತ್ತಾರೆ.

ಭರತ ಹುಣ್ಣಿಮೆಯಂದು ಬೆಳಗಿನ ಜಾವದಿಂದಲೇ ಸಾವಿರಾರು ಭಕ್ತರು ದೇವಾಲಯದ ಆವರಣದಲ್ಲಿ ಜಮಾಯಿಸಿದ್ದರು. ಸಂಪ್ರದಾಯದಂತೆ ಗೊರವಯ್ಯ ಬಿಲ್ಲನ್ನೇರಿ ದೇವಾಲಯದ ಗೋಪುರದತ್ತ ದೃಷ್ಟಿ ನೆಟ್ಟುಗೊಂಡು, ಭಕ್ತರ ಜಯಘೋಷದ ನಡುವೆ ಈ ವರ್ಷದ ಕಾರಣಿಕವನ್ನು ಘೋಷಿಸಿದರು.ಹಲವು ವರ್ಷಗಳಿಂದ ಭರತ ಹುಣ್ಣಿಮೆಯಂದು ಕಾರಣಿಕ ನುಡಿಯುವ ಸಂಪ್ರದಾಯ ಇಲ್ಲಿದೆ. ಇಲ್ಲಿಯ ಕಾರಣಿಕದ ನಂತರ ಮೈಲಾರದಲ್ಲಿ ಕಾರಣಿಕವಾಗುತ್ತದೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now
🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...