ಸುದ್ದಿಒನ್, ವಿಜಯನಗರ, ಫೆಬ್ರವರಿ. 02 : ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಹರಪನಹಳ್ಳಿಯಲ್ಲಿರುವ ಪ್ರಸಿದ್ಧ ದೊಡ್ಡ ಮೈಲಾರದ ಮೈಲಾರಲಿಂಗೇಶ್ವರ ದೇವಾಲಯದಲ್ಲಿ ಭರತ ಹುಣ್ಣಿಮೆಯ ದಿನದಂದು ಈ ವರ್ಷದ ಕಾರ್ಣಿಕ ನುಡಿದಿದ್ದಾರೆ. ಈ ಮೈಲಾರಲಿಂಗಶ್ವರ ಜಾತ್ರೆಯಲ್ಲಿ ನುಡಿಯುವ ಭವಿಷ್ಯವಾಣಿಗಳು ನಿಜವಾಗುತ್ತವೆ ಎನ್ನುವ ನಂಬಿಕೆಯಿದೆ. ಇದೀಗ ಗೊರವಪ್ಪ ಭವಷ್ಯವಾಣಿ ನುಡಿದಿದ್ದಾರೆ.
ಈ ಬಾರಿ ‘ಅಂಬಲಿ ರಾಶಿಗೆ ಮುತ್ತಿನ ಗಿಣಿ, ಸಮೃದ್ಧಿಯಾಯ್ತಲೇ ಪರಾಕ್’ ಎಂಬ ಕಾರ್ಣಿಕ ನುಡಿಸಿದ್ದಾರೆ. ಇದರ ಅರ್ಥ ವರ್ಷಪೂರ್ತಿ ಉತ್ತಮ ಮಳೆಯಾಗಲಿದೆ, ಕೃಷಿ ಬೆಳೆಯು ಸಮೃದ್ಧಿಯಾಗಲಿದೆ ಹಾಗೂ ರಾಜ್ಯದ ಜನತೆ ಸಮೃದ್ಧಿಯಿಂದ ಬದುಕುವರು ಎಂದು ಭಕ್ತರು ಅಭಿಪಯ ಪಟ್ಟಿದ್ದಾರೆ. ಪ್ರತಿ ವರ್ಷ ಭರತ ಹುಣ್ಣಿಮೆಯಂದು ನುಡಿಯುವ ಈ ವಾಕ್ಯವನ್ನು ರಾಜ್ಯದ ರೈತರು, ಜ್ಯೋತಿಷಿಗಳು ಹಾಗೂ ಜನಸಾಮಾನ್ಯರು ವಿವಿಧ ಅರ್ಥಗಳಲ್ಲಿ ವಿಶ್ಲೇಷಿಸುತ್ತಾರೆ.
ಭರತ ಹುಣ್ಣಿಮೆಯಂದು ಬೆಳಗಿನ ಜಾವದಿಂದಲೇ ಸಾವಿರಾರು ಭಕ್ತರು ದೇವಾಲಯದ ಆವರಣದಲ್ಲಿ ಜಮಾಯಿಸಿದ್ದರು. ಸಂಪ್ರದಾಯದಂತೆ ಗೊರವಯ್ಯ ಬಿಲ್ಲನ್ನೇರಿ ದೇವಾಲಯದ ಗೋಪುರದತ್ತ ದೃಷ್ಟಿ ನೆಟ್ಟುಗೊಂಡು, ಭಕ್ತರ ಜಯಘೋಷದ ನಡುವೆ ಈ ವರ್ಷದ ಕಾರಣಿಕವನ್ನು ಘೋಷಿಸಿದರು.ಹಲವು ವರ್ಷಗಳಿಂದ ಭರತ ಹುಣ್ಣಿಮೆಯಂದು ಕಾರಣಿಕ ನುಡಿಯುವ ಸಂಪ್ರದಾಯ ಇಲ್ಲಿದೆ. ಇಲ್ಲಿಯ ಕಾರಣಿಕದ ನಂತರ ಮೈಲಾರದಲ್ಲಿ ಕಾರಣಿಕವಾಗುತ್ತದೆ.






