ಬೆಂಗಳೂರು : ಕೆಲವೊಂದು ಘಟನೆಗಳು ಆಗಾಗ ಕಣ್ಣೆದುರಿಗೆ ನಡೆಯುತ್ತಲೇ ಇರುತ್ತವೆ. ಅದರಲ್ಲೂ ತಾನೇ ಹೆತ್ತು ಹೊತ್ತ ಆಗ ತಾನೇ ಜನಿಸಿದ ಕಂದಮ್ಮಗಳನ್ನ ಇನ್ನೆಲ್ಲಿಯೋ ಬಿಟ್ಟು ಹೋಗುವ ಘಟನೆ ಆಗಾಗ ಕಾಣಸಿಗುತ್ತವೆ. ಇಂದು ಅಂತದ್ದೇ ಘಟನೆ ಬೆಳಕಿಗೆ ಬಂದಿದೆ.
ದೇವನಹಳ್ಳಿ ತಾಲೂಕಿನ ವಿಜಯಪುರ ಹಾಗೂ ಚಿಕ್ಕಬಳ್ಳಾಪುರ ರಸ್ತೆಯ ಬಳಿ ದೇವಸ್ಥಾನವೊಂದಿದೆ. ದುರ್ಗಮ್ಮ ದೇವಾಲಯ. ಆ ದೇವಾಲಯದ ಪಕ್ಕದಲ್ಲೇ ಕೆರೆಯೂ ಇತರ. ಆ ದೇವಾಲಯದಲ್ಲಿ ಮಗುವೊಂದು ಅಳುವ ಶಬ್ಧ ಕೇಳಿಸಿತ್ತು. ಆ ಶಬ್ದ ಕೇಳಿ ಹೋದಾಗ ಘಟನೆ ಬೆಳಕಿಗೆ ಬಂದಿದೆ.
ನಿನ್ನೆ ರಾತ್ರಿ ತಾನೇ ಆ ಮಗು ಜನಿಸಿದೆ ಎಂದು ಹೇಳಲಾಗ್ತಿದೆ. ದೇವಾಸ್ಥಾನದ ಕಡೆ ಹೋದಾಗ ಮಗುವಿನ ಅಳುವಿನ ಶಬ್ಧ ಕೇಳಿ ಕೃಷ್ಣಮೂರ್ತಿ ಎಂಬುವವರು ಅಲ್ಲಿಗೆ ಹೋಗಿದ್ದಾರೆ. ತಕ್ಷಣ ಆ ಮಗುವನ್ನ ವಿಜಯಪುರ ಜಿಲ್ಲಾಸ್ಪತ್ರೆಗೆ ಸೇರಿಸಿ, ಚಿಕಿತ್ಸೆ ನೀಡಲಾಗಿದೆ. ಸದ್ಯ ಮಗು ಆರೋಗ್ಯವಾಗಿದೆ. ಈ ಘಟನೆ ಸಂಬಂಧ ವಿಜಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಗುವನ್ನ ಯಾವ ಕಾರಣಕ್ಕೆ ಆ ಜಾಗದಲ್ಲಿ ಬಿಟ್ಟು ಹೋದರೆಂಬುದಾಗಲಿ, ಆ ಮಗು ಯಾರದ್ದು ಎಂಬುದಾಗಲಿ ಇನ್ನು ತಿಳಿದು ಬಂದಿಲ್ಲ. ಅದೆಲ್ಲ ಏನೆ ಇರಲಿ. ಒಂದಿನ ಅಲ್ಲ ಎರಡು ದಿನ ಅಲ್ಲ. ಬರೋಬ್ಬರಿ ಒಂಭತ್ತು ತಿಂಗಳೇ ಆ ಮಗುವನ್ನ ಹೊಟ್ಟೆಯಲ್ಲಿ ಕಾಪಾಡಿಕೊಂಡಿರುತ್ತಾರೆ. ಆದ್ರೆ ಹುಟ್ಟಿದ ಒಂದಷ್ಟು ಗಂಟೆಗಳಲ್ಲೆ ಮಗು ಬೇಡವಾಯ್ತಾ ಅನ್ನೋದೆ ಎಲ್ಲರ ಪ್ರಶ್ನೆ.