Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಸದೃಢ ಭಾರತಕ್ಕೆ ಭಾವೈಕ್ಯತೆಯ ಮಂತ್ರ ನಮ್ಮೆಲ್ಲರ ಘೋಷವಾಕ್ಯವಾಗಬೇಕು: ಎಸ್.ಕೆ.ಮಲ್ಲಿಕಾರ್ಜುನ್

---Advertisement---

ಸುದ್ದಿಒನ್, ಚಿತ್ರದುರ್ಗ, ಜೂನ್‌. 09 : ವಿವಿಧತೆಯಲ್ಲಿ ಏಕತೆ ಸಾಧಿಸುವ ದೇಶ ಭಾರತ. ಜಾತಿ ಮತ ಪಂಥಗಳೆನ್ನದೆ ಭಾವೈಕ್ಯತೆಯ ಮಂತ್ರ ನಮ್ಮೆಲ್ಲರ ಘೋಷವಾಕ್ಯವಾಗಬೇಕು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಪೂರೈಕೆ ನಿಗಮದ ಜಿಲ್ಲಾ ವ್ಯವಸ್ಥಾಪಕ ಎಸ್.ಕೆ.ಮಲ್ಲಿಕಾರ್ಜುನ್ ಅಭಿಪ್ರಾಯಪಟ್ಟರು.

ನಗರ ಸಮೀಪವಿರುವ ಇಂಗಳದಾಳ್ ಗ್ರಾಮದ ತಳವಾರ ಸಂಚಲಪ್ಪ ನಾಯಕರ ಪ್ರೌಢಶಾಲಾ ಆವರಣದಲ್ಲಿ ರಂಗಸೌರಭ ಕಲಾ ಸಂಘ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಬೆಂಗಳೂರು ಸಂಯುಕ್ತ ಆಶ್ರಯದಲ್ಲಿ ಜೂನ್ 09 ರಂದು ಮಂಗಳವಾರ ಬೆಳಿಗ್ಗೆ 10-30ಕ್ಕೆ ಏರ್ಪಡಿಸಿದ್ದ ರಾಷ್ಟ್ರೀಯ ಭಾವೈಕ್ಯತಾ ಕಾರ್ಯಾಗಾರ 2026-27 ಪ್ರಯುಕ್ತ ವಿದ್ಯಾರ್ಥಿಗಳಿಗೆ ನಾಡಗೀತೆ, ರೈತಗೀತೆ, ರಾಷ್ಟ್ರಗೀತೆ ಮತ್ತು ರಾಷ್ಟ್ರೀಯಗೀತೆ ವಂದೇ ಮಾತರಂ ಮತ್ತು ವಿವಿಧ ದೇಶಭಕ್ತಿಗೀತೆಗಳ ಗಾಯನ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

 

ದೇಶದ ಪರಂಪರೆಯ ಭಾಷೆ ಮತ್ತು ಸಂಸ್ಕøತಿಯನ್ನು ತಿಳಿಸಿದರೆ ಮಕ್ಕಳಲ್ಲಿ ನಾವೆಲ್ಲಾ ಭಾರತೀಯರು ಎಂಬ ಧನ್ಯತಾಭಾವನೆ ಮೂಡುತ್ತದೆ. ದಾರ್ಶನಿಕರ ಮತ್ತು ಸಂತರ ಸಾಹಿತ್ಯ ಕ್ಷೇತ್ರವನ್ನು ಪ್ರಾಯೋಗಿಕವಾಗಿ ವಿದ್ಯಾರ್ಥಿಗಳಿಗೆ ಪರಿಚಯಿಸಿದರೆ ಮಾತ್ರ ಸದೃಢ ಭಾರತದ ಪರಿಕಲ್ಪನೆ ಅಚ್ಛಳಿಯದೇ ಉಳಿಯುತ್ತದೆ. ಸತ್ವಯುತ ಆಚಾರ, ಸಂಸ್ಕøತಿ ಮತ್ತು ಸಂಪ್ರದಾಯಗಳು ಗಟ್ಟಿಯಾಗಿ ನೆಲೆಯೂರುತ್ತದೆ ಎಂದರು.

ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಬಿ.ಎಂ.ಗುರುನಾಥ್ ಅಧ್ಯಕ್ಷತೆ ವಹಿಸಿ ಮಾತನಾಡಿ ಧರ್ಮಗಳ ನಡುವಿನ ಕೋಮುವಾದ ಮತ್ತು ಸಂಘರ್ಷ ಆತಂಕವನ್ನು ಉಂಟುಮಾಡಿದೆ. ಗ್ರಾಮೀಣ ಪ್ರದೇಶದ ಮಕ್ಕಳಿಗೆ ಭಾವೈಕ್ಯತೆ, ರಾಷ್ಟ್ರೀಯತೆಯ ವಿಶಾಲಾರ್ಥವನ್ನು ತಿಳಿಸಿ ಕೋಮುವಾದವನ್ನು ತೊಡೆದು ಹಾಕುವಲ್ಲಿ ರಂಗಸೌರಭ ಕಲಾ ಸಂಘವು ನಡೆಸುತ್ತಿರುವ ಕಾರ್ಯಾಗಾರದ ಕಾರ್ಯಕ್ರಮ ಹೆಚ್ಚು ಮಹತ್ವದ್ದಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಮುಖ್ಯಶಿಕ್ಷಕ ಜಿ.ಪಿ.ಆನಂದಕುಮಾರ್ ಮುಖ್ಯಅತಿಥಿಯಾಗಿ ಉಪಸ್ಥಿತರಿದ್ದು ಕವಿಋಷಿ ಸಂತರ ಗದ್ಯಕೃತಿಗಳನ್ನು ಓದುವುದರಿಂದ ಮತ್ತು ಪದ್ಯದ ಸಾಲುಗಳ ಮೂಲಕ ಭಾವೈಕ್ಯತೆಯನ್ನು ಎಲ್ಲರ ಮನೆಮನಗಳಲ್ಲಿ ಮೂಡಿಸಬೇಕು. ಆಗ ಮಾತ್ರ ನನ್ನದೇಶ ನನ್ನಜನ ಎಂಬ ಆತ್ಮಾಭಿಮಾನ ಮೂಡುತ್ತದೆ ಎಂದರು. ಸಹಶಿಕ್ಷಕರಾದ ಎಂ.ರಂಗನಾಥ್, ಹೆಚ್.ಧನಂಜಯಪ್ಪ, ಎಸ್.ಮಂಜುನಾಥ್, ಚಿನ್ಮಯ ಯೋಗ ಕ್ರೀಡಾ ಸಾಂಸ್ಕøತಿಕ ಸಂಸ್ಥೆಯ ಸಂಪನ್ಮೂಲವ್ಯಕ್ತಿ ಎಂ.ಬಿ.ಮುರುಳಿ, ಸಂಘದ ಅಧ್ಯಕ್ಷ ಮೋಹನ್‍ಕುಮಾರ್ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.

ನೀನಾಸಂ ಪದವೀಧರ ಹಾಗೂ ರಂಗನಿರ್ದೇಶಕ ಕೆ.ಪಿ.ಎಂ.ಗಣೇಶಯ್ಯ ರಾಷ್ಟ್ರೀಯ ಭಾವೈಕ್ಯತಾ ಕಾರ್ಯಾಗಾರ ತರಬೇತಿಯ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ತಳವಾರ ಸಂಚಲಪ್ಪ ನಾಯಕರ ಪ್ರೌಢಶಾಲಾ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಸರ್ಕಾರ ನಿಗಧಿಪಡಿಸಿದ ರಾಷ್ಟ್ರಕವಿ ಕುವೆಂಪು ವಿರಚಿತ ನಾಡಗೀತೆ ಮತ್ತು ರೈತಗೀತೆ, ರವೀಂದ್ರನಾಥ ಠ್ಯಾಗೋರ್ ರಚಿಸಿದ ರಾಷ್ಟ್ರಗೀತೆ ಮತ್ತು ಬಂಕಿಮಚಂದ್ರ ಚಟರ್ಜಿ ವಿರಚಿತ ರಾಷ್ಟ್ರೀಯಗೀತೆ ವಂದೇಮಾತರಂ ಮತ್ತು ವರಕವಿ ದ.ರಾ.ಬೇಂದ್ರೆ ವಿರಚಿತ ಬಟ್ಟಯಲ್ಲ ಬಣ್ಣವಲ್ಲ ಬೆಳಕಿನ ಈಟಿ ಮುಂತಾದ ದೇಶಭಕ್ತಿಗೀತೆಗಳ ಸಂಗೀತ ಸಂಯೋಜನೆಯ ಧ್ವನಿಮುದ್ರಿತ ಗೀತೆಗಳನ್ನು ಪ್ರಾಯೋಗಿಕ ತರಬೇತಿ ನೀಡಿದರು.

ಇದೇ ಸಂದರ್ಭದಲ್ಲಿ ಕೆಎಫ್‍ಸಿಎಸ್‍ಸಿ ನಿಗಮಕ್ಕೆ ಬಡ್ತಿ ಹೊಂದಿದ ಆಹಾರ ಇಲಾಖೆ ಮತ್ತು ಈ ಹಿಂದೆ ಕನ್ನಡ ಮತ್ತು ಸಂಸ್ಕøತಿ ಇಲಾಖೆಯಲ್ಲಿ ಸಹಾಯಕ ನಿರ್ದೇಶಕರಾಗಿ ಸೇವೆ ಸಲ್ಲಿಸಿದ ಎಸ್.ಕೆ.ಮಲ್ಲಿಕಾರ್ಜುನ್ ಇವರನ್ನು ರಂಗಸೌರಭ ಕಲಾ ಸಂಘದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಸಹಶಿಕ್ಷಕ ಆರ್.ರುದ್ರಸ್ವಾಮಿ ಸ್ವಾಗತಿಸಿದರು. ಕನ್ನಡ ಶಿಕ್ಷಕ ಜಿ.ವಿ.ತೇಜಸ್ವಿ ನಿರೂಪಿಸಿದರು. ವಿದ್ಯಾರ್ಥಿನಿಯರಾದ ತನುಶ್ರೀ, ಅಪರ್ಣ ಮತ್ತು ಆಶ್ರಿತ ಪ್ರಾರ್ಥಿಸಿದರು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now