Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಕೊನೆಯ ಆಸೆ ಈಡೇರಿತು, ಕೊನೆಯ ಕನಸು ಮಾತ್ರ ಅಪೂರ್ಣ; ಎಸ್. ಜಾನಕಿ ಬದುಕಿನ ಭಾವುಕ ಕಥೆ

---Advertisement---

ಭಾರತೀಯ ಚಿತ್ರರಂಗದ ದಿಗ್ಗಜ ಹಿನ್ನೆಲೆ ಗಾಯಕಿ, ಗಾನಕೋಗಿಲೆ ಎಸ್. ಜಾನಕಿ ಅವರ ನಿಧನದಿಂದ ಸಂಗೀತ ಲೋಕ ದುಃಖದಲ್ಲಿ ಮುಳುಗಿದೆ. ಜೀವನದ ಕೊನೆಯ ದಿನಗಳನ್ನು ಮೈಸೂರಿನಲ್ಲಿ ಕಳೆದಿದ್ದ ಜಾನಕಿ ಅವರ ಒಂದು ಅಪೂರ್ಣ ಆಸೆ ಇದೀಗ ಅಭಿಮಾನಿಗಳ ಮನಕಲಕುವಂತಾಗಿದೆ.ಎಸ್. ಜಾನಕಿ ಅವರ ಆಪ್ತ ಸಹಾಯಕ (ಕೇರ್‌ಟೇಕರ್) ನವೀನ್ ಅವರ ಪ್ರಕಾರ, ಜಾನಕಿ ಅವರಿಗೆ ತಮ್ಮ ಜೀವನದ ಕೊನೆಯ ದಿನಗಳನ್ನು ಮೈಸೂರಿನಲ್ಲೇ ಕಳೆಯಬೇಕು ಎಂಬ ಅಪಾರ ಆಸೆ ಇತ್ತು. ಅವರ ಏಕೈಕ ಪುತ್ರ ಮುರಳಿ ಕೃಷ್ಣ ಕೂಡ ಮೈಸೂರಿನಲ್ಲೇ ತನ್ನ ಕೊನೆಯ ದಿನಗಳನ್ನು ಕಳೆದಿದ್ದರು. ಮಗನ ಅಗಲಿಕೆಯ ಬಳಿಕ ಜಾನಕಿ ಅವರು ಮೈಸೂರಿನಲ್ಲೇ ನೆಮ್ಮದಿಯ ಜೀವನ ನಡೆಸುತ್ತಿದ್ದರು.

ಪುತ್ರ ಮುರಳಿ ಕೃಷ್ಣ ಅವರ ನಿಧನದಿಂದ ತೀವ್ರವಾಗಿ ಮನನೊಂದಿದ್ದ ಜಾನಕಿ ಅವರು, ಅವರ ನೆನಪಿಗಾಗಿ ಈ ವರ್ಷದ ಡಿಸೆಂಬರ್‌ನಲ್ಲಿ ವಿಶೇಷ ಸಂಗೀತ ಕಾರ್ಯಕ್ರಮ ಆಯೋಜಿಸಲು ಯೋಜನೆ ರೂಪಿಸಿದ್ದರು. ಈ ಕಾರ್ಯಕ್ರಮದಲ್ಲಿ ಖ್ಯಾತ ಗಾಯಕಿ ಕೆ.ಎಸ್. ಚಿತ್ರಾ, ಚರಣ್ ಸೇರಿದಂತೆ ಹಲವು ಹೆಸರಾಂತ ಗಾಯಕರನ್ನು ಆಹ್ವಾನಿಸುವ ಉದ್ದೇಶದಿಂದ ಈಗಾಗಲೇ ಅವರ ದಿನಾಂಕಗಳನ್ನೂ ಕೇಳಿಕೊಂಡಿದ್ದರು ಎನ್ನಲಾಗಿದೆ.ಆದರೆ ವಿಧಿಯಾಟಕ್ಕೆ ಆ ಕನಸು ನನಸಾಗಲೇ ಇಲ್ಲ. ಕಾರ್ಯಕ್ರಮ ನಡೆಯುವ ಮೊದಲೇ ಜಾನಕಿ ಅವರು ಇಹಲೋಕ ತ್ಯಜಿಸಿದ್ದು, ಅವರ ಕೊನೆಯ ಆಸೆ ಅಪೂರ್ಣವಾಗಿಯೇ ಉಳಿದಿದೆ.

ಜಾನಕಿ ಅವರ ಮತ್ತೊಂದು ಇಚ್ಛೆಯೂ ಈಗ ನೆರವೇರುತ್ತಿದೆ. ಮೈಸೂರು ಜಿಲ್ಲೆ ಹೆಚ್.ಡಿ.ಕೋಟೆ ತಾಲೂಕಿನ ಕಣಿಯನಹುಂಡಿಯಲ್ಲಿರುವ ತಮ್ಮ ತೋಟದಲ್ಲೇ ಅಂತ್ಯಸಂಸ್ಕಾರ ಮಾಡಬೇಕು ಎಂದು ಅವರು ತಮ್ಮ ಆಪ್ತರಿಗೆ ಮೊದಲೇ ತಿಳಿಸಿದ್ದರು.ನವೀನ್ ಹಾಗೂ ಪವನ್ ಅವರು ಖರೀದಿಸಿದ್ದ ಎರಡು ಎಕರೆ ತೋಟವನ್ನು ಜಾನಕಿ ಅವರು ಬಹಳ ಇಷ್ಟಪಟ್ಟಿದ್ದರು. ಪ್ರತಿದಿನ ಬೆಳಗ್ಗೆಯಿಂದ ಸಂಜೆವರೆಗೂ ಅಲ್ಲಿಯೇ ಸಮಯ ಕಳೆಯುತ್ತಿದ್ದರು. ಜಾಗ ಖರೀದಿಸುವ ಸಂದರ್ಭದಲ್ಲೂ ವಿಡಿಯೊ ಕರೆ ಮೂಲಕ ತೋಟವನ್ನು ವೀಕ್ಷಿಸಿದ್ದ ಅವರು, “ನನ್ನ ಅಂತಿಮ ಸಂಸ್ಕಾರ ಇದೇ ತೋಟದಲ್ಲಿ ನಡೆಯಬೇಕು” ಎಂದು ತಮ್ಮ ಇಚ್ಛೆಯನ್ನು ವ್ಯಕ್ತಪಡಿಸಿದ್ದರೆಂದು ನವೀನ್ ತಿಳಿಸಿದ್ದಾರೆ.

ಜಾನಕಿ ಅವರ ಇಚ್ಛೆಯಂತೆ ಮೈಸೂರು ಜಿಲ್ಲೆಯ ಕಣಿಯನಹುಂಡಿಯ ತೋಟದಲ್ಲೇ ಅವರ ಅಂತ್ಯಕ್ರಿಯೆ ನೆರವೇರಲಿದ್ದು, ಆಂಧ್ರ ಬ್ರಾಹ್ಮಣ ಸಂಪ್ರದಾಯದಂತೆ ಅಂತಿಮ ವಿಧಿವಿಧಾನಗಳನ್ನು ನಡೆಸಲು ಕುಟುಂಬಸ್ಥರು ನಿರ್ಧರಿಸಿದ್ದಾರೆ.ಸಂಗೀತ ಲೋಕಕ್ಕೆ ಅಳಿಸಲಾಗದ ಕೊಡುಗೆ ನೀಡಿದ ಎಸ್. ಜಾನಕಿ ಅವರ ಅಗಲಿಕೆಯೊಂದಿಗೆ ಒಂದು ಯುಗ ಅಂತ್ಯಗೊಂಡಿದ್ದರೂ, ಅವರ ಧ್ವನಿ ಮತ್ತು ಗೀತೆಗಳು ಸದಾ ಸಂಗೀತ ಪ್ರೇಮಿಗಳ ಹೃದಯದಲ್ಲಿ ಜೀವಂತವಾಗಿರಲಿವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now