Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಸಿಎಂ ಸ್ಥಾನ ನೀಡದೇ ಇದ್ದರು ಡಿಕೆಶಿಗೆ ಅಸ್ಸಾಂ ಚುನಾವಣೆ ಜವಾಬ್ದಾರಿ ನೀಡಿದ ಹೈಕಮಾಂಡ್..!

ಡಿಕೆ ಶಿವಕುಮಾರ್
---Advertisement---

ಬೆಂಗಳೂರು: ಸಿಎಂ ಸ್ಥಾನಕ್ಕಾಗಿ ಡಿಕೆ ಶಿವಕುಮಾರ್ ಸಾಕಷ್ಟು ಪ್ರಯತ್ನ ಮಾಡುತ್ತಾ ಇದ್ದಾರೆ. ಆದರೆ ಅದು ಅಷ್ಟು ಸುಲಭವಾಗಿ ಸಿಗುವಂತೆ ಕಾಣಿಸ್ತಿಲ್ಲ. ಸದ್ಯಕ್ಕೆ ಸಿದ್ದರಾಮಯ್ಯ ಅವರು ದಾಖಲೆಯನ್ನು ಬರೆದಿದ್ದಾರೆ. ಮುಂದಿನ ದಿನಗಳಲ್ಲಿ ಡಿಕೆ ಶಿವಕುಮಾರ್ ಅವರಿಗೆ ಸಿಎಂ ಸ್ಥಾನ ಸಿಗುವ ಭರವಸೆ ಅವರ ಬೆಂಬಲಿಗರಿಗೆ ಮೂಡಿದೆ. ಇದರ ನಡುವೆ ಹೈಕಮಾಂಡ್, ಡಿಕೆ ಶಿವಕುಮಾರ್ ಅವರಿಗೆ ಅಸ್ಸಾಂ ಚುನಾವಣೆಯ ಜವಾಬ್ದಾರಿ ನೀಡಿದೆ. ಅಸ್ಸಾಂ ಪರಿವೀಕ್ಷಕರಾಗಿ ಡಿಕೆಶಿಯನ್ನ ನೇಮಕ ಮಾಡಿದೆ.

ಅಸ್ಸಾಂ ಸಿಎಂ ಹಿಮಂತ್ ಬಿಸ್ವಾ ಅತಿ ಹೆಚ್ಚು ರಾಹುಲ್ ಗಾಂಧಿ ಅವರನ್ನ ಟೀಕಿಸಿದವರು. ಅದರಲ್ಲೂ ಬಿಸ್ವಾ, ಈ ಮೊದಲು ಕಾಂಗ್ರೆಸ್ ನಲ್ಲಿಯೇ ಇದ್ದು, ಬಿಜೆಪಿಗೆ ಹೋದವರು. ಆದರೆ ಯಾವಾಗಲೂ ರಾಹುಲ್ ಗಾಂಧಿಯನ್ನ ಟೀಕೆ ಮಾಡ್ತಾ ಇರ್ತಾರೆ. ಕಾರ್ಟೂನ್, ಜೋಕರ್, ಭವಿಷ್ಯವಿಲ್ಲದ ನಾಯಕ ಹೀಗೆ ಸಾಕಷ್ಟು ಟೀಕೆ ಮಾಡ್ತಾ ಇರ್ತಾರೆ. ಅವರನ್ನ ಕಟ್ಟಿ ಹಾಕುವುದಕ್ಕೆ ಹೈಕಮಾಂಡ್ ಡಿಕೆಶಿಯನ್ನೇ ಸರಿಯಾದ ನಾಯಕ ಎಂದು ಹಾರಿಸಿದೆ.

ಈ ಬಗ್ಗೆ ಡಿಸಿಎಂ ಡಿಕೆ ಶಿವಕುಮಾರ್ ಅವರು ಪ್ರತಿಕ್ರಿಯೆ ನೀಡಿದ್ದು, ನನಗೆ ಬೇರೆ ಆಯ್ಕೆ ಇಲ್ಲ, ಪಕ್ಷ ಏನು ಹೇಳುತ್ತದೋ ಅದನ್ನ ನಾನು ಮಾಡಬೇಕಾಗುತ್ತದೆ. ಎಐಸಿಸಿ ಯಿಂದ ಪ್ರೆಸ್ ರಿಲೀಸ್ ಮಾಡಿದ್ದಾರೆ. ನಮಗೆ ಪಕ್ಷದ ಜವಾಬ್ದಾರಿ ಕೊಟ್ಟಿದ್ದಾರೆ. ಈ ಹಿಂದೆಯೂ ಕೂಡ ನನಗೆ ಜವಾಬ್ದಾರಿ ಕೊಟ್ಟಿದ್ದರು. ಈಗಲೂ ಪಕ್ಷದ ಜವಾಬ್ದಾರಿ ಕೊಟ್ಟಿದ್ದಾರೆ. ನಾನು ಅಲ್ಲಿಗೆ ಹೋಗುತ್ತೇನೆ ಎಂದು ಡಿಕೆಶಿ ಹೇಳಿದ್ದಾರೆ. ಈ ಹಿಂದೆಯೂ ಬೇರೆ ಬೇರೆ ರಾಜ್ಯಗಳ ಚುನಾವಣೆಗೂ ಮುಖ್ಯ ಜವಾಬ್ದಾರಿಯನ್ನ ಡಿಕೆ ಶಿವಕುಮಾರ್ ಹೆಗಲಿಗೆ ಹಾಕಿತ್ತು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now
🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...