ಬೆಂಗಳೂರು: ರಾಜ್ಯ ಆಡಳಿತ ಸುಧಾರಣೆಗಾಗಿ, ಕಾನೂನು ಸುವ್ಯವಸ್ಥೆಯನ್ನು ಮತ್ತಷ್ಟು ಬಲಗೊಳಿಸುವ ಉದ್ದೇಶದಿಂದ ಪೊಲೀಸ್ ಇಲಾಖೆಯಲ್ಲಿ ರಾಜ್ಯ ಸರ್ಕಾರ ವರ್ಗಾವಣೆಯ ಸರ್ಜರಿ ಮಾಡಿದೆ. ರಾಜ್ಯದಲ್ಲಿ 25 ಐಪಿಎಸ್ ಆಫೀಸರ್ ಗಳ ವರ್ಗಾವಣೆಯನ್ನು ಮಾಡಲಾಗಿದೆ. ಪೊಲೀಸ್ ಇಲಾಖೆಯಲ್ಲಿ ಪ್ರಮುಖ ಹುದ್ದೆಯನ್ನು ಅಲಂಕರಿಸಿದವರನ್ನು ಬೇರೆಡೆಗೆ ವರ್ಗಾವಣೆ ಮಾಡಿ ಪೊಲೀಸ್ ಇಲಾಖೆ ಆದೇಶ ಹೊರಡಿಸಿದೆ.
ವರ್ಗಾವಣೆಗೊಂಡ ಪೊಲೀಸ್ ಅಧಿಕಾರಿಗಳು ಒಂದು ವಾರದಲ್ಲಿ ನೂತನ ಜವಾಬ್ದಾರಿಯನ್ನು ಹೊರಲಿದ್ದಾರೆ.
25 ಐಪಿಎಸ್ ಅಧಿಕಾರಿಗಳ ವರ್ಗಾವಣೆ ಪಟ್ಟಿ
* ಎನ್ ಶಶಿಕುಮಾರ್- ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮಿಷನರ್ ಆಗಿ ನೇಮಕ
* ಬಿ.ಆರ್ ರವಿಕಾಂತೇಗೌಡ : ಐಜಿಪಿ ಹೆಡ್ ಕಾರ್ಟರ್ -1 ಬೆಂಗಳೂರು (ಡಿಜಿ ಕಛೇರಿ)
* ಡಾ.ಕೆ ತ್ಯಾಗರಾಜನ್ – ಐಜಿಪಿ, ಐಎಸ್ ಡಿ.
* ಲಾಭೂರಾಮ್- ಐಜಿಪಿ ಕೇಂದ್ರ ವಲಯ.
* ಸಿಕೆ ಬಾಬಾ – ಎಸ್‌ಪಿ ಬೆಂಗಳೂರು ಗ್ರಾಮಾಂತರ.
* ಎನ್ ವಿಷ್ಣುವರ್ಧನ್- ಎಸ್‌ಪಿ ಮೈಸೂರು ಜಿಲ್ಲೆ.
* ಸುಮನ್ ಡಿ ಪೆನ್ನೆಕರ್ – ಎಸ್‌ಪಿ, ಬಿಎಂಟಿಎಫ್
*ಬಿ.ರಮೇಶ್ – ಡಿಐಜಿಪಿ ಈಸ್ಟರ್ನ್ ರೇಂಜ್ ದಾವಣಗೆರೆ .
* ಸೀಮಾ ಲಾಟ್ಕರ್ – ಪೊಲೀಸ್ ಆಯುಕ್ತರು ಮೈಸೂರು ನಗರ
* ರೇಣುಕಾ ಸುಕುಮಾರ್ – ಎಐಜಿಪಿ ( ಡಿಜಿ ಕಛೇರಿ)
* ಸಾರ ಫಾತಿಮಾ – ಡಿಸಿಪಿ ಆಗ್ನೇಯ ವಿಭಾಗ, ಬೆಂಗಳೂರು ನಗರ
*ನಿಖಿಲ್ ಬಿ – ಎಸ್ ಪಿ, ಕೋಲಾರ ಜಿಲ್ಲೆ.
* ಕುಶಾಲ್ ಚೌಕ್ಸಿ – ಎಸ್ ಪಿ ಚಿಕ್ಕಬಳ್ಳಾಪುರ ಜಿಲ್ಲೆ.
* ಮಹಾನಿಂಗ್ ನಂದಗಾವಿ- ಡಿಸಿಪಿ (ಕಾನೂನು ಸುವ್ಯವಸ್ಥೆ) ಹುಬ್ಬಳ್ಳಿ ಧಾರವಾಡ
* ಪ್ರದೀಪ್ ಗುಂಟಿ – ಎಸ್ ಪಿ ಬೀದರ್ ಜಿಲ್ಲೆ.
* ಸಿ.ಬಿ ರಿಷ್ಯಂತ್- ಎಸ್ ಪಿ ವೇರ್ ಲೆಸ್ .
* ಚನ್ನಬಸವಣ್ಣ- ಎಐಜಿಪಿ, (ಆಡಳಿತ ) ಡಿಜಿ ಕಛೇರಿ.
* ನಾರಾಯಣ್ ಎಂ- ಎಸ್ ಪಿ, ಉತ್ತರ ಕನ್ನಡ.
* ಯತೀಶ್ ಎನ್ – ಎಸ್ ಪಿ, ದಕ್ಷಿಣ ಕನ್ನಡ ಜಿಲ್ಲೆ.
*ಮಲ್ಲಿಕಾರ್ಜುನ ಬಾಲದಂಡಿ – ಎಸ್ ಪಿ ಮಂಡ್ಯ ಜಿಲ್ಲೆ.
* ಡಾ ಶೋಭಾ ರಾಣಿ ವಿ.ಜೆ- ಎಸ್ ಪಿ, ಬಳ್ಳಾರಿ ಜಿಲ್ಲೆ.
* ಡಾ ಕವಿತಾ ಟಿ: ಎಸ್ ಪಿ, ಚಾಮರಾಜನಗರ ಜಿಲ್ಲೆಗೆ ವರ್ಗಾವಣೆ ಮಾಡಲಾಗಿದೆ.