Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

---Advertisement---

ಸರ್ಕಾರದ ಬಳಿ ದುಡ್ಡಿಲ್ಲ ಅಂತ ನಾನೇಳಿದ್ನಾ : ಗರಂ ಆದ್ರೂ ಗೃಹ ಸಚಿವರು..!

ಸಚಿವ ಪರಮೇಶ್ವರ್
---Advertisement---

ಬೆಂಗಳೂರು: ಇತ್ತೀಚೆಗೆ ಗೃಹ ಸಚಿವ ಪರಮೇಶ್ವರ್ ಅವರು ಸರ್ಕಾರದ ಬಳಿ ಹಣವಿಲ್ಲ ಎಂಬ ರೀತಿ ಮಾತನಾಡಿದ್ದರು. ಇದೀಗ ಮಾಧ್ಯಮದವರು ಅದೇ ಪ್ರಶ್ನೆಯನ್ನು ಮುಂದಿಟ್ಟಿದ್ದು, ಆ ಪ್ರಶ್ನೆಗೆ ಗರಂ ಆಗಿ ಉತ್ತರಿಸಿದ್ದಾರೆ ಗೃಹ ಸಚಿವರು. ಹಾಗಾದ್ರೆ ಗೃಹ ಸಚಿವ ಜಿ.ಪರಮೇಶ್ವರ್ ಅವರು ಹೇಳಿದ್ದೇನು ಎಂಬ ಬಗ್ಗೆ ಇಲ್ಲಿದೆ ನೋಡಿ ಮಾಹಿತಿ.

ಬೆಂಗಳೂರಿನಲ್ಲಿ ಮಾತನಾಡಿದ ಪರಮೇಶ್ವರ್ ಅವರು, ನಾನು ಆ ರೀತಿ ಹೇಳಿಲ್ಲ. ನಿನ್ನೆ ಕ್ಲಾರಿಫಿಕೇಷನ್ ಕೊಟ್ಟಿದ್ದೀನಿ. ಬಿಜೆಪಿಯವರು ಹೇಳ್ತಾರೆ. ಅದನ್ನ ಅರ್ಥ ಮಾಡ್ಕೊಬೇಕು ಮೊದಲು. ಬಾದಾಮಿ 1500 ವರ್ಷದ ಇತಿಹಾಸ ಇರುವಂತಹ ಊರು. ಅಲ್ಲಿ ಬಾದಾಮಿ ಗುಹೆಗಳಿರುವುದು ಎಲ್ಲಿಯೂ ಇಲ್ಲ. ಹೀಗಾಗಿ ಅದನ್ನ ರಕ್ಷಣೆ ಮಾಡುವುದಕ್ಕೆ ಒಂದು ದೊಡ್ಡ ಪ್ರಾಜೆಕ್ಟ್ ಮಾಡಿ, ಸಾವಿರ ಕೋಟಿ ಅಥವಾ ಅದಕ್ಕೂ ಹೆಚ್ಚು ತಯಾರು ಮಾಡಿ ಕೇಂದ್ರಕ್ಕೆ ಕಳುಹಿಸಿ ಎನ್ನಲಾಗಿತ್ತು. ಅಷ್ಟೊಂದು ಹಣ ನಾವೂ ಕೊಡುವುದಕ್ಕೆ ಬರಲ್ಲ ಕೇಂದ್ರ ಸರ್ಕಾರವೂ ಕೊಟ್ಟರೆ ಅನುಕೂಲವಾಗುತ್ತೆ ಅಂತ ಹೇಳಿದ್ದು. ಅದಕ್ಕೆ ದುಡ್ಡೇ ಇಲ್ಲ ಅಂತ ಎಲ್ಲಿ ಹೇಳುವುದಕ್ಕೆ ಹೋಗಿದ್ದೆವು. ನಾಲ್ಕು ಲಕ್ಷ ಒಂಭತ್ತು ಸಾವಿರ ಬಜೆಟ್ ಕೊಟ್ಟಿದ್ದಾರೆ ಮುಖ್ಯಮಂತ್ರಿಗಳು. ಅದರ ಹಿಂದಿನ ಬಜೆಟ್ ಮೂರು ಲಕ್ಷ ಎಪ್ಪತ್ತು ಸಾವಿರ ಕೋಟಿ ಇತ್ತು. ಸ್ವಾಭಾವಿಕವಾಗಿ ಹೆಚ್ಚಾಗಿದೆ. ಅದನ್ನ ನಾವೂ ಹಣ ಇಲ್ಲ ಅಂತ ಹೇಗೆ ಹೇಳೋದು.

ನಾನೇ ಹೇಳಿದ್ದೀನಿ ನೀರಾವರಿಗೆಲ್ಲ ಹಣ ಕೊಟ್ಟಿದ್ದದ್ದು. ಅಲಗಲಿ ರಾಯರೆಟ್ಟಿ ಅವರು ಇದ್ರು. ಅಭಿವೃದ್ಧಿಗೂ ಹಣ ಕೊಟ್ಟಿದ್ದೀವಿ. ಗ್ಯಾರಂಟಿ ಒಂದೇ ಅಲ್ಲ. ಗ್ಯಾರಂಟಿ 52 ಸಾವಿರ ಕೋಟಿ ಅಷ್ಟೇನೆ. ಅದನ್ನು ಕೂಡ ಮುಖ್ಯಮಂತ್ರಿಗಳು ಬಜೆಟ್ ನಲ್ಲಿ ಪ್ರವಿಜನ್ ಮಾಡಿದ್ದಾರೆ. ಯಾವುದೋ ಸಾವಿರ ಕೋಟಿ ನಾವೂ ಕೊಡೋದಕ್ಕೆ ಆಗಲ್ಲ, ಕೇಂದ್ರ ಕೊಡಬೇಕು ಎಂದು ಹೇಳಿದಾಗ ಅದನ್ನ ದುಡ್ಡೇ ಇಲ್ಲ ಅಂದ್ರು ಅಂದ್ರೆ. ಅದನ್ನ ನಾನು ಹೇಳಿದ್ದೀನಾ ಎಂದು ಗರಂ ಆಗಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...