ಬೆಂಗಳೂರು: ಇತ್ತೀಚೆಗಷ್ಟೇ ಪ್ರಧಾನಿ ಮೋದಿ ಅವರು ಬೆಂಗಳೂರಿಗೆ ಬಂದಿದ್ದರು. ಈ ವೇಳೆ ಡಿಸಿಎಂ ಡಿಕೆ ಶಿವಕುಮಾರ್ ಅವರು ಒಂದು ಬ್ಯೂಟಿಫುಲ್ ಗಣೇಶನ ವಿಗ್ರಹವನ್ನು ಉಡುಗೊರೆಯಾಗಿ ನೀಡಿದ್ದರು. ಅದು ಬೆಳ್ಳಿ ಗಣೇಶ. ಈ ಉಡುಗೊರೆಯ ಬಗ್ಗೆ ಸಾಕಷ್ಟು ಚರ್ಚೆಯಾಗ್ತಾ ಇದೆ. ಬೇರೆಯವರು ತಂದ ಗಣೇಶನ ವಿಗ್ರಹವನ್ನು ಡಿಕೆ ಶಿವಕುಮಾರ್ ಅವರು ತಮ್ಮದು ಅಂತ ನೀಡಿದ್ದಾರೆ ಅಂತ. ಈ ಬಗ್ಗೆ ಡಿಸಿಎಂ ಡಿಕೆ ಶಿವಕುಮಾರ್ ಸ್ಪಷ್ಟನೆ ನೀಡಿದ್ದಾರೆ.
ಯೆಲ್ಲೋ ಮೆಟ್ರೋ ಉದ್ಘಾಟನೆ ಮಾಡಿದ್ದಕ್ಕೆ ಬಂದಿದ್ದ ಮೋದಿಯವರಿಗೆ ನೀಡಿದ ಗಣೇಶನ ವಿಗ್ರಹ ತನ್ನ ಸ್ವಂತ ಹಣದಲ್ಲಿ ತಂದಿದ್ದು ಎಂದು ಸ್ಪಷ್ಟಪಡಿಸಿದ್ದಾರೆ. ಅಂದಿನ ಸಮಾರಂಭದಲ್ಲಿ ನಾನು ಪ್ರಧಾನಿ ಅವರಿಗೆ ನೀಡಿದ ಬೆಳ್ಳಿ ಗಣೇಶ ಶಾಸಕ ಎಂ ಕೃಷ್ಣಪ್ಪ ಅವರು ತಂದದ್ದು ಎಂದು ಸಾಮಾಜಿಕ ಮಾಧ್ಯಮದಲ್ಲೆಲ್ಲಾ ಸಾಕಷ್ಟು ಓಡಾಡ್ತಾ ಇದೆ. ಆದರೆ ಇದು ಸತ್ಯಕ್ಕೆ ದೂರವಾದ ಮಾತು. ಹಾಗೂ ಸಂಪೂರ್ಣ ಸುಳ್ಳು ಎಂದಿದ್ದಾರೆ.
ಹಾಗೇ ಆ ಗಣೇಶನನ್ನು ನನ್ನ ಸಂಪೂರ್ಣ ಹಣದಿಂದ ತಂದದ್ದು. ಇದಕ್ಕೆ ಯಾವುದೇ ರೀತಿಯ ಇಲಾಖೆಯ ಹಣವನ್ನು ನಾನು ಬಳಸಿಲ್ಲ. ಮನೆಯಿಂದಾನೇ ಹಣವನ್ನು ತೆಗೆದುಕೊಂಡು ಹೋಗಿ, ಕಚೇರಿ ಸಿಬ್ಬಂದಿ ಬಳಿ ಎಸ್ಪಿಜಿ ತಪಾಸಣೆಯನ್ನು ಮಾಡಿಸಿ, ಪ್ರಧಾನಿಯವರಿಗೆ ನೀಡಲಾಗಿದೆ. ಬೇರೆಯವರ ಉಡುಗೊರೆಯನ್ನು ನಮ್ಮ ಉಡುಗೊರೆ ಎಂದು ಕೊಡುವ ದುಸ್ಥಿತಿ ನಮಗಿನ್ನು ಬಂದಿಲ್ಲ ಎಂದು ಡಿಸಿಎಂ ಡಿಕೆ ಶಿವಕುಮಾರ್ ಸ್ಪಷ್ಟನೆ ನೀಡಿದ್ದಾರೆ. ಅಂದು ಮೋದಿ ಅವರಿಗೆ ನೀಡಿದ ಉಡುಗೊರೆ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಅದಕ್ಕೆ ಉತ್ತರ ನೀಡಿದ್ದಾರೆ.
