ವಿಶೇಷ ಲೇಖನ :
ಜೆ. ಪರಶುರಾಮ
ನಿವೃತ್ತ ಹಿರಿಯ ಭೂವಿಜ್ಞಾನಿ
ಕಾರ್ಯದರ್ಶಿ, ಚಿತ್ರದುರ್ಗ ಜಿಲ್ಲಾ ರೆಡ್ಡಿಜನಸಂಘ
ಸದಸ್ಯರು, ಬೆಂಗಳೂರು ಸೌತ್ ಸೆಂಟರ್ (ಒ.)
ಮೊ : 94483 38821
ಭೂಮಿಯಲ್ಲಿ ಚಿನ್ನವು ನಕ್ಷತ್ರಗಳ ಸ್ಪೋಟಗಳಿಂದ ರೂಪುಗೊಂಡಿದೆ. ಮತ್ತು ಬಾಹ್ಯಾಕಾಶದಿಂದ ಉಲ್ಕೆಗಳ ಮೂಲಕಭೂಮಿಗೆ ತಲುಪಿದೆ. ಭೂಮಿಯು ರೂಪುಗೊಂಡಾಗ ಈ ಅಂಶಗಳು ಭೂಮಿಯ ಒಳಭಾಗವನ್ನು ಮತ್ತು ಭೂಗರ್ಭದ ಪ್ರಕ್ರಿಯೆಗಳಿಂದ ಮೇಲೈಗೆ ತರಲ್ಪಟ್ಟವು. ಬಾಃಯಕಾಶದಿಂದ ಭೂಮಿಗೆ ಸ್ಪೋಟಗಳಿಂದಾಗಿ ದೊಡ್ಡ ಪ್ರಮಾಣದ ಚಿನ್ನದಂತ ಭಾರವಾದ ಅಂಶಗಳು ಬಾಹ್ಯಾಕಾಶದಲ್ಲಿ ಹರಡಿತು. ನಂತರ ಈ ಧೂಳು ಮತ್ತು ಅನಿಲಗಳು ಒಟ್ಟು ಗೂಡಿ ಗ್ರಹಗಳು, ಉಲ್ಕೆಗಳು ಮತ್ತು ಇತರೆ ಖಗೋಳ ವಸ್ತುಗಳನ್ನು ರೂಪಿಸಿದವು. ಭೂಮಿಯು ಸುಮಾರು 4.5 ಶತಕೋಟಿ ವರ್ಷಗಳ ಹಿಂದೆ ರೂಪುಗೊಂಡಾಗ, ಈ ಚಿನ್ನದ ಅಂಶಗಳು ಭೂಮಿಯ ಕಾವುದೊಳಗೆ ಸೇರಿಕೊಂಡವು.
ಭೂಮಿಯ ಒಳಗೆ ಆರಂಭದಲ್ಲಿ ಚಿನ್ನದಂತಹ ಬಾರವಾದ ಲೋಹಗಳು ಭೂಮಿಯ ಒಳಭಾಗಕ್ಕೆ ಮುಳಗಿದವು. ಆದರೆ ಜ್ವಾಲಾಮುಖಿ ಸ್ಪೋಟಗಳು ಮತ್ತು ಇತರೆ ಭೂಗರ್ಭದ ಪ್ರಕ್ರಿಯೆಗಳು ಅವುಗಳನ್ನು ಭೂಮಿಯ ಮೇಲೈಗೆ ತಂದವು.
ಭೂಮಿಯ ಮೇಲೆ ಚಿನ್ನದ ಲಭ್ಯತೆ ಪ್ರಮಾಣವು ತುಂಬಾ ಕಡಿಮೆಯಾಗಿದೆ. ಹೆಚ್ಚಿನ ಚಿನ್ನವು ಭೂಮಿಯ ಒಳಭಾಗದಲ್ಲಿ ಕೇಂದ್ರೀಕೃತವಾಗಿದೆ. ಭೂಮಿಯ ಮೇಲೈಯಲ್ಲಿ ಸಿಗುವ ಚಿನ್ನವು ಬಹಳ ಹಿಂದೆಯೇ ಬಾಹ್ಯಾಕಾಶದಿಂದ ಬಂದ ಉಲ್ಕೆಗಳ ಮೂಲಕ ಇಲ್ಲಿ ತಲುಪಿದೆ ಎಂದು ಇತ್ತೀಚಿನ ಅಧ್ಯಯನಗಳು ಭೂವೈಜ್ಞಾನಿಕವಾಗಿ ದೃಢಪಡಿಸಿವೆ.
ಚಿನ್ನ (Au) ಎಂಬುದು ಚಿನ್ನದ ಪರಮಾಣುವಿನ ಸಂಕೇತವಾಗಿದೆ ಮತ್ತು ಇದರ ಪರಮಾಣು ಸಂಖ್ಯೆ 79 ಆಗಿದೆ. ಚಿನ್ನದ ಕರಗುವ ಬಿಂದು (1064 ° C) ಡಿಗ್ರಿ ಸೆಲ್ಸಿಯಸ್ ಆಗಿದೆ. ಕರ್ನಾಟಕವು ಭಾರತದಲ್ಲಿ ಅತಿಹೆಚ್ಚು ಚಿನ್ನದ ನಿಕ್ಷೇಪ ಹೊಂದಿರುವ ರಾಜ್ಯವಾಗಿದೆ. ಮತ್ತು ದೇಶದ ಒಟ್ಟು ಚಿನ್ನದ ಉತ್ಪಾದನೆಯಲ್ಲಿ ಸುಮಾರು 80% ರಷ್ಟು ಕೊಡುಗೆ ನೀಡಿದೆ.
ಕರ್ನಾಟಕದಲ್ಲಿ ಚಿನ್ನದ ಗಣಿಗಾರಿಕೆಯು ಪ್ರಸ್ತುತ ದೇಶದ ಅತಿದೊಡ್ಡ ಕಾರ್ಯನಿರ್ವಹಿಸುತ್ತಿರುವ ಚಿನ್ನದಗಣಿ ಹಟ್ಟಿಚಿನ್ನದಗಣಿ. ಕೋಲಾರದ ಚಿನ್ನದಗಣಿಯನ್ನು 2000ನೇ ಇಸವಿಯಿಂದ ಉತ್ಪಾದನೆ ಕಡಿಮೆ ಪ್ರಮಾಣವಾದ್ದರಿಂದ ಮುಚ್ಚಲ್ಪಪಟ್ಟಿರುತ್ತದೆ.
ಇನ್ನು ಇತರೆ ಸ್ಥಳಗಳಲ್ಲಿ ಅಂದರೆ ಚಿತ್ರದುರ್ಗ, ಧಾರವಾಡ, ಕಲಬುರಗಿ, ಹಾಸನ, ಹಾವೇರಿ ಮತ್ತು ತುಮಕೂರು ಜಿಲ್ಲೆಗಳಲ್ಲಿಯೂ ಕಂಡುಬಂದಿದೆ. ಕರ್ನಾಟಕವು ಭಾರತದಲ್ಲಿ ಅತಿಹೆಚ್ಚು ಚಿನ್ನದ ನಿಕ್ಷೇಪಗಳನ್ನು ಹೊಂದಿದ ರಾಜ್ಯವಾಗಿದೆ. ಮತ್ತು ದೇಶದ ಒಟ್ಟು ಚಿನ್ನದ ಉತ್ಪಾದನೆಯನ್ನು ಶೇಕಡ 80% ರಷ್ಟು ಪಾಲನ್ನು ಹೊಂದಿದೆ. ರಾಜ್ಯದಲ್ಲಿ ಒಟ್ಟು 103 ಮಿಲಿಯನ್ ಟನ್‌ಗಳಷ್ಟು ಚಿನ್ನದ ನಿಕ್ಷೇಪಗಳು ಇವೆ ಎಂದು ಅಂದಾಜು ಮಾಡಲಾಗಿದೆ. ಕರ್ನಾಟಕದಲ್ಲಿ ಇದುವರೆಗೆ ಗಣಿಗಾರಿಕೆ ಮೂಲಕ ಹೊರತೆಗೆಯಲಾದ ಒಟ್ಟು ಚಿನ್ನದ ಪ್ರಮಾಣವು ಸುಮಾರು 833 ರಿಂದ 933 ಟನ್‌ಗಳಷ್ಟಿದೆ ಎಂದು ಅಂದಾಜಿಸಲಾಗಿದೆ. ಚಿನ್ನದ ಉಪಯೋಗಗಳು ವೈವಿದ್ಯಮಯವಾಗಿದ್ದು, ಅವುಗಳನ್ನು ಸಾಂಪ್ರದಾಯಿಕ ವೈಜ್ಞಾನಿಕ ಮತ್ತು ಆಧ್ಯಾತ್ಮಿಕ ಕ್ಷೇತ್ರಗಳಲ್ಲಿ ಕಾಣಬಹುದು. ಚಿನ್ನವನ್ನು ಕೇವಲ ಐಷಾರಾಮಿ ಲೋಹವಲ್ಲದೇ ದೈನಂದಿನ ಜೀವನದ ಹಲವು ಕ್ಷೇತ್ರಗಳಲ್ಲಿ ಅತ್ಯಗತ್ಯವಾಗಿದೆ.
ಶುದ್ಧ ಚಿನ್ನವು ಪ್ರಕಾಶಮಾನವಾದ ಹಳದಿ ಬಣ್ಣವನ್ನು ಹೊಂದಿರುತ್ತದೆ. ಚಿನ್ನಕ್ಕೆ ತಾಮ್ರವನ್ನು ಬೆರೆಸಿದಾಗ ಗುಲಾಬಿ ಬಣ್ಣಬರುತ್ತದೆ. ಚಿನ್ನಕ್ಕೆ ಪಲಾಡಿಯಮ್ ಅಥವಾ ಬೆಳ್ಳಿಯಂತಹ ಬಿಳಿ ಲೋಹಗಳನ್ನು ಬೆರೆಸುವುದರಿಂದ ಬಿಳಿ ಚಿನ್ನ ಬಣ್ಣ ಬರುತ್ತದೆ. ಕೋಬಾಲ್ಟ್ ಆಕ್ಸೈಡ್‌ನಂತಹ ವಸ್ತುಗಳನ್ನು ಸೇರಿಸಿವುದರಿಂದ ಕಪ್ಪು ಚಿನ್ನದಂತಹ ವಿಭಿನ್ನ ಬಣ್ಣವನ್ನು ಪಡೆಯಬಹುದು.

ನಿಮ್ಮೂರಿನ ಸುದ್ದಿ, ಈಗ 'ಸುದ್ದಿ ಒನ್' ನಲ್ಲಿ!
ನಿಮ್ಮ ಊರಿನ ಅದ್ಧೂರಿ ಜಾತ್ರೆ, ವಿಶೇಷ ಆಚರಣೆಗಳು, ಅಥವಾ ನಿಮ್ಮ ಗಮನಕ್ಕೆ ಬಂದ ಸ್ಥಳೀಯ ಸಮಸ್ಯೆಗಳೇ? ಚಿತ್ರದುರ್ಗ ಹಾಗೂ ಸುತ್ತಮುತ್ತಲಿನ ಯಾವುದೇ ಸುದ್ದಿಯಾದರೂ ನಮಗೆ ತಿಳಿಸಿ. ನಿಮ್ಮ ಧ್ವನಿಯಾಗಿ ನಾವು ನಾಡಿಗೆ ತಲುಪಿಸುತ್ತೇವೆ. ಛಾಯಾಚಿತ್ರ ಮತ್ತು ವಿವರಗಳೊಂದಿಗೆ ನಮಗೆ ಇಮೇಲ್ ಮಾಡಿ.
✉️ suddionenews@gmail.com🛡️ ನಿಮ್ಮ ಮಾಹಿತಿಯನ್ನು ಗೌಪ್ಯವಾಗಿಡಲಾಗುವುದು.















