Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ನಮ್ಮ ಕಾಲದಲ್ಲೂ ಹಿಂದಿ ಕಡ್ಡಾಯ ಇರ್ಲಿಲ್ಲ.. ಅದಕ್ಕೆ ನಾನು ಕಲಿಯೋದಕ್ಕೆ ಹೋಗಿಲ್ಲ : ಸಿದ್ದರಾಮಯ್ಯ

---Advertisement---

ಮೈಸೂರು: ತೃತೀಯ ಭಾಷೆ ಹಿಂದಿ ಪರೀಕ್ಷೆಯಲ್ಲಿ ಎಸ್ಎಸ್ಎಲ್ಸಿ ಮಕ್ಕಳು ಎಷ್ಟೇ ಅಂಕಗಳನ್ನು ಪಡೆದರು ಅದು ಲೆಕ್ಕಕ್ಕೆ ಇಲ್ಲವೆಂದು ಶಿಕ್ಷಣ ಇಲಾಖೆ ಸೂಚನೆಯನ್ನ ನೀಡಿದೆ. ಈ ಮೊದಲು 625 ಅಂಕಗಳಿಗೆ ಇದ್ದಂತ ಪರೀಕ್ಷೆ ಇನ್ಮುಂದೆ 525 ಅಂಕಗಳನ್ನ ಮಾತ್ರ ಕನ್ಸಿಡರ್ ಮಾಡಲಿದೆ. ಹೀಗಾಗಿ ತೃತೀಯ ಭಾಷೆಯ ಸಾಲಿನಲ್ಲಿ ಬರುವ ಯಾವ ಪರೀಕ್ಷೆಗಳ ಅಂಕಗಳು ಲೆಕ್ಕಕ್ಕೆ ಇಲ್ಲದಂತಾಗಿದೆ.

ಈ ಸಂಬಂಧ ಸಿಎಂ ಸಿದ್ದರಾಮಯ್ಯ ಅವರು ಪ್ರತಿಕ್ರಿಯೆ ನೀಡಿದ್ದಾರೆ. ನಾವೂ ತೀರ್ಮಾನ ತೆಗೆದುಕೊಂಡಿರೋದು ಈಗ. ಹಿಂದಿ ಭಾಷೆ ತೃತೀಯ ಭಾಷೆ ಇದ್ಯಲ್ಲ ಅದನ್ನ ಕಡ್ಡಾಯ ಮಾಡಬಾರದು ಅಂತ ಹೇಳಿದ್ದೇವೆ. 625 ಅಂಕಗಳು ಕಡ್ಡಾಯ ಇತ್ತು. ಅದರಲ್ಲಿ 100 ಮಾರ್ಕ್ಸ್ ಹಿಂದಿ ಇತ್ತು. ಅದನ್ನ ಕಡ್ಡಾಯ ಮಾಡಬಾರದು ಅಂತ ಹೇಳಿದ್ದೇವೆ. ಈ ವರ್ಷದಿಂದಾನೇ ಆ ಆದೇಶ ಜಾರಿಗೆ ಬರಲಿದೆ ಎಂದಿದ್ದಾರೆ.

ಖಾಸಗಿ ಶಿಕ್ಷಣ ಸಂಸ್ಥೆಗಳ ವಿರೋಧದ ಬಗ್ಗೆ ಮಾತನ್ನಾಡಿದ ಸಿಎಂ ಸಿದ್ದರಾಮಯ್ಯ ಅವರು, ಸರ್ಕಾರ ತೀರ್ಮಾನ ಮಾಡಿದೆ. ವಿರೋಧ ಮಾಡುವವರು ಇರ್ತಾರೆ, ಸ್ವಾಗತ ಮಾಡುವವರು ಇರ್ತಾರೆ. ಎಲ್ಲರು 100% ರಿಸೀವ್ ಮಾಡಿಕೊಳ್ಳುವವರು ಯಾರೂ ಇರಲ್ಲ. ನೋಡೋಣಾ ನಾವಂತು ತೀರ್ಮಾನ ಮಾಡಿದ್ದೀವಿ. ಹಿಂದಿ ಹೇರಿಕೆ ಅಂತಲ್ಲ, ಹಿಂದಿ ಕಲಿಯಬಾರದು ಅಂತಾನು ಅಲ್ಲ. ಪರೀಕ್ಷೆ ಕಡ್ಡಾಯ ಅಂತ ಮಾಡಬಾರದು‌. ನಮ್ಮ ಕಾಲದಲ್ಲೂ ಕೂಡ ಹಿಂದಿ ಕಡ್ಡಾಯ ಇರಲಿಲ್ಲ. ನಾವೂ ಓದುತ್ತಾ ಇದ್ದೆವು. ಆದರೆ ಕಡ್ಡಾಯ ಇರಲಿಲ್ಲ. ಕಡ್ಡಾಯ ಇಲ್ಲದೆ ಇದ್ದ ಕಾರಣ ನಾವೂ ಓದುವುದಕ್ಕೇನೆ ಹೋಗಲಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಅವರು ಹೇಳಿದ್ದಾರೆ.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now