ಹಾಸನಾಂಬೆ ದರ್ಶನ ಇದೆ ಕೊನೆ : ಬ್ರಹ್ಮಾಂಡ ಗುರೂಜಿಯ ಭವಿಷ್ಯ

1 Min Read

ಹಾಸನ: ಹಾಸನಾಂಬೆಯ ದರ್ಶನಕ್ಕೆ ಭಕ್ತರು ಮುಗಿಬಿದ್ದಿದ್ದಾರೆ. ವರ್ಷಕ್ಕೊಮ್ಮೆ ದರ್ಶನ ಕೊಡುವ ದೇವಿಯ ಕೃಪೆಗೆ ಪಾತ್ರರಾಗಲು ಪ್ರತಿದಿನ ಭಕ್ತರು ಹಾಸನಕ್ಕೆ ಆಗಮಿಸುತ್ತಿದ್ದಾರೆ. ಪ್ರತಿ ವರ್ಷದಂತೆ ಈ ವರ್ಷವೂ ಬ್ರಹ್ಮಾಂಡ ಗುರೂಜಿ ತಾಯಿಯ ದರ್ಶನಕ್ಕೆ ಆಗಮಿಸಿ, ಶಾಕಿಂಗ್ ಭವಿಷ್ಯ ನುಡಿದಿದ್ದಾರೆ.

ಹಾಸನಾಂಬೆ ದರ್ಶನ ಇದೇ ಕೊನೆ ವರ್ಷ. ಮುಂದಿನ ವರ್ಷದಿಂದ ಅಮ್ಮನವರ ಸಾನಿಧ್ಯ ಇಲ್ಲಿ ಇರುವುದಿಲ್ಲ. ಯಾಕಂದ್ರೆ ಹಾಸನಾಂಬೆಯನ್ನು ಮತ್ತೆ ತೆಗೆಯುತ್ತಾರೋ ಇಲ್ವೋ, ಮತ್ತೆ ಬರುತ್ತೋ ಇಲ್ವೋ, ಎನ್ನುವ ಮಟ್ಟಿಗೆ ಸಿದ್ದೇಶ್ವರನ ಕೃಪಾಶೀರ್ವಾದ, ಅಂದ್ರೆ ಎಲ್ಲೆಲ್ಲಿ ಸಿದ್ದೇಶ್ವರ ಇದಾನೆ ಎಲ್ಲರು ಒಂದು ಕಡೆ ಸೇರುತ್ತಾರೆ ಎಂಬುದು ಇದೆ 2025 ರಿಂದ 2030ರ ಒಳಗೆ. ಆ ಸಿದ್ದೇಶ್ವರ ಸ್ವಾಮಿಗಳ ಏಳು ಜನ ಅಕ್ಕಂತಂಗಿಯರು ಸೇರ್ತಾರೆ. ಅಂಥ ಘಟ್ಟ ತಲುಪಿದಾಗ ಪರಿಣಾಮ ಆಗಿಯೇ ಆಗುತ್ತದೆ.

ಈ ವರ್ಷದಿಂದ ಹೆಣ್ಣು ಮಕ್ಕಳು ಖರ್ಚು ವೆಚ್ಚ ಕಡಿಮೆ ಮಾಡಿ. ಮುಂದಿನ ದಿನಗಳಲ್ಲಿ ಖರ್ಚುಗಳು ಹೆಚ್ಚಾಗುತ್ತದೆ. ಮಾಧ್ಯಮದಲ್ಲೂ ವಿಶೇಷ ಬೆಳವಣಿಗೆ ಆಗುತ್ತೆ. ಮುಂದಿನ ಅವಕಾಶ ನಮಗೆ ಮಾತ್ರವಲ್ಲ, ಎಲ್ಲರಿಗೂ ಸಮಸ್ಯೆಗಳು ಎದುರಾಗುತ್ತವೆ. ಉತ್ತರ ಭಾರತ, ಉತ್ತರ ಕರ್ನಾಟಕ ಮುಳುಗಡೆಯಾಗುವ ಸೂಚನೆ. ಕರ್ನಾಟಕ ಮೂರು ಭಾಗವಾಗುವ ಸೂಚನೆ, ಭಾರತ ದೇಶ ಎರಡು ಭಾಗವಾಗುವ ಸೂಚನೆ ಎಲ್ಲವನ್ನು ಮುನ್ಸೂಚನೆಯಾಗಿ, ಇದೇ ಕೊನೆ ವಿಶೇಷವಾದ ಸಂದರ್ಭ. ಆಮೆ ಜರುಗುತ್ತಾ ಹೋಗುತ್ತಾ ಇದೆ. ಅತ್ತೆ – ಸೊಸೆ ಕಥೆ ಹಾಸನ ಭಾಗದಲ್ಲಿ ಎಲ್ಲರಿಗೂ ಗೊತ್ತಿರುವಂತದ್ದು. ಈ ವರ್ಷ ಮಾತ್ರ ವಿಶೇಷ ಸೂಚನೆಯನ್ನ ಕೊಟ್ಟಿದ್ದಾಳೆ ಎಂದು ಬ್ರಹ್ಮಾಂಡ ಗುರೂಜಿ ತಿಳಿಸಿದ್ದಾರೆ. ಬ್ರಹ್ಮಾಂಡ ಗುರೂಜಿಯ ಭವಿಷ್ಯ ಕೇಳಿ ಭಕ್ತರು ಶಾಕ್ ಆಗಿದ್ದಾರೆ.

Share This Article