ವಿಜಯಪುರ: ಇತ್ತೀಚೆಗೆ ಶಾಸಕ ವಿಜಯಾನಂದ ಕಾಶಪ್ಪನವರ್, ಬಸವ ಮೃತ್ಯುಂಜಯ ಶ್ರೀಗಳ ವಿರುದ್ಧ ರೊಚ್ಚಿಗೆದ್ದಿದ್ದರು. ಶ್ರೀಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಇದೀಗ ಕಾಶಪ್ಪನವರ್ ವಿರುದ್ಧ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆಕ್ರೋಶ ಹೊರ ಹಾಕಿದ್ದಾರೆ. ಜಯ ಮೃತ್ಯುಂಜಯ ಶ್ರೀಗಳ ಪರವಾಗಿ ಬ್ಯಾಟ್ ಬೀಸಿದ್ದಾರೆ. ಕಾಶಪ್ಪನವರ ಅಂತ್ಯ ಕಾಲ ಬಂದಿದೆ ಎಂದಿದ್ದಾರೆ.
ಮಾಧ್ಯಮದವರ ಜೊತೆಗೆ ಮಾತನಾಡುತ್ತಾ, ಯಾವಾಗಲೂ ದೀಪ ಮುಗಿಯುವಾಗ ಜೋರಾಗಿ ಉರಿಯುತ್ತಲ್ವಾ, ಆತನು ಹಾಗೇ. ಇಡೀ ಸಮಾಜವೇ ಆತನ ಜೊತೆಗೆ ನಿಲ್ಲಲು. ತಲೆಕೆಡಿಸಿಕೊಳ್ಳಲ್ಲ ಎಂಬ ಮಾತನ್ನ ಹೇಳಿದ್ದಾರೆ. ಹಾಗೇ ಸ್ವಾಮೀಜಿ ನಮ್ಮ ಸಮಾಜಕ್ಕೋಸ್ಕರ ಕೆಲಸ ಮಾಡ್ತಾ ಇದಾರೆ ಎಂದು ಹೊಗಳಿದ್ದಾರೆ. ಅವರೇನು ಯಾವುದೇ ಪಕ್ಷದವರಲ್ಲ. ಆದರೆ ನಮ್ಮ ಸಮುದಾಯಕ್ಕೋಸ್ಕರ ಹೋರಾಟ ಮಾಡ್ತಾ ಇದಾರೆ. ಈ ಸಮಾಜದವರು ಹಿಂದೆ ಇರುವಂತೆ ನಾವೂ ಹಿಂದೆ ಇದ್ದೀವಿ ಅಷ್ಟೆ
ಇನ್ನು ಯತ್ನಾಳ್ ಮನೆಗೆ ಹೋಗಿ ಸ್ವಾಮಿಗಳು ಕೂರ್ತಾರೆ ಎಂಬ ವಿಚಾರಕ್ಕೆ ಮಾತನಾಡಿ, ಯತ್ನಾಳ್ ಯಾವ ಜಗದ್ಗುರುಗಳ ಕಡೆಯಿಂದಾನೂ ಏನು ತಗೊಂಡಿಲ್ಲ. ಯಾವ ಸ್ವಾಮಿಗಳಿಗೂ ನಾನು ಕಾಲು ಮುಗಿದು ಮಂತ್ರಿ ಮಾಡಿ ಅಂತ ಹೇಳಿಲ್ಲ. ಕೆಲವೊಬ್ಬರು ಸ್ವಾಮಿಗಳು ನಮಗೆ ಯೋಗ್ಯ ಎನಿಸುತ್ತದೆ. ಸಿದ್ದಲಿಂಗ ಸ್ವಾಮಿಗಳು ಇನ್ನು ಹಲವರು. ಅವರಿಗಷ್ಟೇ ಕಾಲಿಗೆ ಬೀಳ್ತೀನಿ ಎಂದಿದ್ದಾರೆ.
ಮಾಧ್ಯಮದವರು ಆತನನ್ನ ಯಾಕೆ ಹೈಲೇಟ್ ಮಾಡಕ್ಕತ್ತೀರಾ ಅನ್ನೋದು ತಿಳಿತಿಲ್ಲ. ತೈಲವರ್ಣದ ವಿಭೂತಿಯನ್ನು ಹಣೆಗೆ ಬಳಿದುಕೊಳ್ಳುವ ಅವನೆಂಥಾ ಲಿಂಗಾಯತ..? ತಾನೂ ಕೂಡ ತನ್ನದೇ ಗೋ ಶಾಲೆಯಲ್ಲಿ ತಯಾರಾಗುವ ವಿಭೂತಿಯನ್ನ ಹಚ್ಚಿಕೊಳ್ಳುತ್ತೇನೆ. ಹಚ್ಚಿಕೊಂಡಿರುವ ವಿಭೂತಿ ಯಾರಿಗೂ ಕಾಣಬಾರದು ಎಂದು ತಿರುಗೇಟು ಕೊಟ್ಟಿದ್ದಾರೆ.

