ಬೆಂಗಳೂರು: ಮತದಾನವನ್ನು ಹೆಚ್ಚಿಸಲು, ಯುವ ಜನತೆಯನ್ನು ಉತ್ತೇಜಿಸಲು ಹೊಟೇಲ್ ಗಳು ಕೂಡ ಮುಂದಾಗಿದ್ದವು. ಅದೆಷ್ಟೋ ಜನ ಮತದಾನದ ದಿನ ರಜೆ ಇದ್ದರು ಕೂಡ ಮತದಾನ ಮಾಡುವುದಕ್ಕೇ ಆಸಕ್ತಿ ತೋರುವುದಿಲ್ಲ. ಹೀಗಾಗಿ ಕೆಲವೊಂದು ಹೊಟೇಲ್ ಗಳು ಉಚಿತ ಊಟದ ಆಫರ್ ನೀಡಿದ್ದವು. ಆ ರೀತಿಯ ಹೊಟೇಲ್ ಗಳಿಗೆ ಚುನಾವಣಾ ಆಯೋಗ ಎಚ್ಚರಿಕೆ ನೀಡಿದೆ. ಕ್ರಮ ತೆಗೆದುಕೊಳ್ಳುವುದಾಗಿ ಹೇಳಿದೆ.
ಚುನಾವಣಾ ದಿನಾಂಕ ಅನೌನ್ಸ್ ಆದಾಗಿನಿಂದ ಅಂದ್ರೆ ಮಾರ್ಚ್ 29ರಿಂದ ನೀತಿ ಸಂಹಿತೆ ಜಾರಿಯಲ್ಲಿದೆ. ನಾಳೆ ಮತದಾನ ಮಾಡಿ ಬಂದವರಿಗೆ ಊಟ, ಪಾನೀಯ ಉಚಿತ ಎಂದು ಹಲವು ಹೊಟೇಲ್ ಗಳು ಬೋರ್ಡ್ ಹಾಕಿದ್ದು, ಇದು ನೀತಿ ಸಂಹಿತೆ ಉಲ್ಲಂಘನೆಯಾಗಲಿದೆ ಎನ್ನಲಾಗಿದೆ.
ಕೆಪವೊಂದು ಹೊಟೇಲ್, ರೆಸ್ಟೋರೆಂಟ್ ಗಳು ಕೂಡ ಮತದಾನ ಬಂದವರಿಗೆ ಆಫರ್ ನೀಡಲು ಮುಂದಾಗಿದ್ದರಿಂದ ಚುನಾವಣಾ ಆಯೋಗದ ಕೆಂಗಣ್ಣಿಗೆ ಗುರಿಯಾಗಿದೆ. ಇದು ನೀತಿ ಸಂಹಿತೆ ಉಲ್ಲಂಘನೆಯಾಗಿದ್ದು ಕಾನೂನು ಕ್ರಮಕ್ಕೆ ಮುಂದಾಗಿದೆ. ಕ್ರಮ ತೆಗೆದುಕೊಳ್ಳುವುದಾಗಿ ಎಚ್ಚರಿಕೆಯನ್ನು ನೀಡಿದೆ.