ಉಡುಪಿ: ಇತ್ತಿಚಿನ ದಿನಗಳಲ್ಲಿ ಶ್ವಾನ ಪ್ರೇಮಿಗಳು ಹೆಚ್ಚಾಗಿದ್ದಾರೆ. ಮನೆಯಲ್ಲಿ ಶ್ವಾನವೊಂದಿದ್ದರೆ ಅದನ್ನೇ ಮಕ್ಕಳಂತೆ ಸಾಕುತ್ತಾರೆ. ಶ್ವಾನದ ಜೊತೆಗೇನೆ ಬಾಂಧವ್ಯ ಹೆಚ್ಚಾಗಿರುತ್ತದೆ. ನಾಯಿಗಳಿಗೆ ಮೊದಲೇ ನಿಯತ್ತು ಜಾಸ್ತಿ ಇರುತ್ತೆ ಅನ್ನೋ ಮಾತು ಎಲ್ಲರಿಗೂ ಗೊತ್ತಿರುವ ವಿಚಾರ. ಇದೀಗ ಶ್ವಾನವೊಂದು ಕಳೆದು ಹೋದ ಮಗನನ್ನೇ ಹುಡುಕಿಕೊಟ್ಟಿರುವ ಘಟನೆ ಉಡುಪಿಯಲ್ಲಿ ನಡೆದಿದೆ.
ಅಮವಾಸೆ ಬೈಲು ಗ್ರಾಮಪಂಚಾಯತ್ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ ವಿವೇಕಾನಂದ ಎಂಬುವವರು ಇದ್ದಕ್ಕಿದ್ದ ಹಾಗೇ ಕಾಣೆಯಾಗಿದ್ದರು. ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದ ವಿವೇಕಾನಂದ, ಇದ್ದಕ್ಕಿದ್ದ ಹಾಗೆ ನಾಪತ್ತೆಯಾಗಿದ್ದ. ಎಷ್ಟು ಹುಡುಕಿದರು ಸಿಕ್ಕಿಲ್ಲ. ವಾರಗಟ್ಟಲೇ ಕಾಡಿನಲ್ಲಿಯೇ ಅಲೆದಾಡಿದ್ದಾನೆ. ಆಹಾರವಿಲ್ಲದೆ ನೀರು ಕುಡಿದು ಬದುಕಿದ್ದಾನೆ.
ಆಹಾರ ಇಲಾಖೆಯ ಸಿಬ್ಬಂದಿಗಳಿಗೂ ಈತ ಸಿಕ್ಕಿರಲಿಲ್ಲ. ಕಾಡು ಪ್ರಾಣಿಗೆ ಆಹಾರವಾಗಿರಬಹುದು ಎಂದೇ ಎಲ್ಲಾ ಸುಮ್ಮನೆ ಆಗಿದ್ದರು. ಆದರೆ ಸಾಕು ಪ್ರಾಣಿ ಸುಮ್ಮನೆ ಇರಬೇಕಲ್ಲಾ..? ಕಾಡಿಗೆ ಹೋಗಿ ವಿವೇಕಾನಂದನನ್ನು ಹುಡುಕಿ ತಂದಿದೆ. ಸುಮಾರು ಎಂಟು ದಿನಗಳ ಬಳಿಕ ಮನೆಯವರಿಗೆ ಸಿಕ್ಕಿದ್ದಾನೆ. ನಿತ್ರಾಣಗೊಂಡು ಬಿದ್ದಿದ್ದ ವಿವೇಕಾನಂದನನ್ನು ಹುಡುಕಿಕೊಟ್ಟಿದ್ದು, ಸಾಕಿದ ನಾಯಿಯೆ.
ಎಷ್ಟೋ ವಿಡಿಯೋಗಳಲ್ಲಿ ನಾಯಿಯ ಮಾನವೀಯತೆಯನ್ನು ಕಂಡಿದ್ದೇವೆ. ಆ ಮೂಕ ಪ್ರಾಣಿ ಕೇಳುವುದು ಕೇವಲ ಒಂದು ತುತ್ತು ಅನ್ನ, ಒಂದಿಷ್ಟು ಪ್ರೀತಿ. ಸ್ವಲ್ಪೇ ಸ್ವಲ್ಪ ಪ್ರೀತಿ ಕೊಟ್ಟರು ಶ್ವಾನ ಪ್ರಾಣ ಉಳಿಸುವಷ್ಟು ದೊಡ್ಡ ಮಟ್ಟದ ಸಹಾಯವನ್ನೇ ಮಾಡುತ್ತದೆ. ಯಾವಾಗಲೂ ತನ್ನ ಮಾಲೀಕನ ಜೊತೆಗೆ ನಿಲ್ಲುತ್ತದೆ. ಅದಕ್ಕೆ ನಾಯಿಗಿರುವ ನಿಯತ್ತು ಬೇರೆ ಯಾರಿಗೂ ಇರಲ್ಲ ಎಂಬ ಮಾತನ್ನು ಹೇಳುತ್ತಾರೆ.