ಒಡಿಶಾ ರೈಲು ಅಪಘಾತಕ್ಕೂ ಮುನ್ನವೇ ರೈಲ್ವೆ ಇಲಾಖೆಯ ನಿರ್ಲಕ್ಷ್ಯಗಳ ವರದಿ‌ ಮಾಡಿದ್ದ CAG ..!

 

 

ಒಡಿಶಾದಲ್ಲಿ ರೈಲು ಅಪಘಾತದಿಂದಾಗಿ ಸುಮಾರು 280ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದಾರೆ. ಸಾವಿರಾರು ಜನ ಗಾಯಗೊಂಡಿದ್ದಾರೆ. ಇನ್ನು ಕೂಡ ಸಾವಿನ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಅದರ ಜೊತೆಗೆ ಇನ್ನೂ ಹಲವರ ಪತ್ತೆಯಾಗಿಲ್ಲ. ಆದರೆ ರೈಲ್ವೆ ಇಲಾಖೆಯ ನ್ಯೂನ್ಯತೆ ಬಗ್ಗೆ ಈಗಾಗಲೇ CAG ವರದಿ ಸಲ್ಲಿಕೆ ಮಾಡಿತ್ತು.

ರೈಲ್ವೆ ಇಲಾಖೆ 2022 ರ ವರದಿಯಲ್ಲಿ ರೈಲ್ವೆ ಇಲಾಖೆಯ ಅನೇಕ ನಿರ್ಲಕ್ಷ್ಯವನ್ನು ವಿವರವಾಗಿ ಸಲ್ಲಿಕೆ‌ ಮಾಡಿತ್ತು. 2017 ರಿಂದ 2022ರವರೆಗೂ ಅನೇಕ ರೈಲು ಅಪಘಾತಗಳು ಸಂಭವಿಸಿತ್ತು. ಈ ವರದಿಯ ಪ್ರಕಾರ ಪ್ರತಿ ವರ್ಷ 282 ರೈಲುಗಳು ಹಳಿ ತಪ್ಪುತ್ತಿವೆ. ಎಂಜಿನಿಯರಿಂಗ್ ನಿರ್ಲಕ್ಷ್ಯದಿಂದ 422 ರೈಲುಗಳು ಹಳಿತಪ್ಪಿವೆ.

ಹಳಿಯ ರ್ವಹಣೆಯ ಕೊರತೆಯಿಂದಾಗಿ ಸುಮಾರು 171 ಕೇಸ್ ಗಳು ದಾಖಲಾಗಿದೆ. ಮೆಕ್ಯಾನಿಕಲ್ ನಿರ್ಲಕ್ಷ್ಯದಿಂದಾಗಿ 182 ಕೇಸ್ ಗಳು ದಾಖಲಾಗಿದೆ. ಲೊಕೊ ಪೈಲಟ್ ನ ಕೆಟ್ಟ ಚಾಲನೆ, ಅತಿ ವೇಗದ ಕಾರಣದಿಂದಾಗಿ 154 ಬಾರಿ ಹಳಿ ತಪ್ಪಿದೆ. ರೈಲ್ವೆ ಕಾರ್ಯಚರಣೆಯ ಸಮಸ್ಯೆಗಳು ಶೇಕಡಾ 19ರಷ್ಟಿದೆ ಎಂದು ವರದಿ ನೀಡಿತ್ತು.

 

 

Share This Article
Leave a Comment

Leave a Reply

Your email address will not be published. Required fields are marked *