Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಟಿಬೆಟ್ ಪ್ರವಾಸಿ ಭಿಕ್ಷು ಧರ್ಮಸ್ವಾಮಿ ಚರಿತ್ರೆ ಸಾರುವ ‘ಗುರುವಾಗ್ವಿಮಲಾವಳಿ’ ಪುಸ್ತಕ ಲೋಕಾರ್ಪಣೆ

---Advertisement---

ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552

ಸುದ್ದಿಒನ್, ಚಿತ್ರದುರ್ಗ, ಜೂನ್‌. 19 : ಹದಿಮೂರನೆ ಶತಮಾನದಲ್ಲಿ ಟಿಬೆಟ್‍ನಿಂದ ನೇಪಾಳಕ್ಕೆ ಬಂದು ಅಲ್ಲಿಂದ ಭಾರತದ ಬಿಹಾರ ಪ್ರಾಂತ್ಯದಲ್ಲಿ ಓಡಾಡಿ ಅಧ್ಯಯನ ನಡೆಸಿದ ಟಿಬೆಟ್ ಪ್ರವಾಸಿ ಭಿಕ್ಷು ಧರ್ಮಸ್ವಾಮಿರವರ ಜೀವನ ಚರಿತ್ರೆ ಕುರಿತು ಹಿರಿಯೂರು ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎಂ.ತಿಪ್ಪೇಸ್ವಾಮಿರವರ ಅನುವಾದಿತ ಕೃತಿ ಗುರುವಾಗ್ವಿಮಲಾವಳಿ ನಾಮದಲ್ಲಿ ಓದಲು ಎಲ್ಲಾ ಸಾಮಾಗ್ರಿಗಳಿವೆ. ಚೊಕ್ಕವಾದ ಪುಸ್ತಕ ಇದು ಎಂದು ಸಂಸ್ಕøತ ವಿಶ್ವವಿದ್ಯಾನಿಲಯ ಬೆಂಗಳೂರಿನ ವಿಶ್ರಾಂತ ಕುಲಪತಿ ಮಲ್ಲೇಪುರಂ ಜಿ.ವೆಂಕಟೇಶ್ ಮೆಚ್ಚುಗೆ ವ್ಯಕ್ತಪಡಿಸಿದರು.

 

ಡಯಟ್‍ನಲ್ಲಿ ಶುಕ್ರವಾರ ಗುರುವಾಗ್ವಿಮಲಾವಳಿ ನಾಮ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದರು.
ಮುಸ್ಲಿಂ ಆಳ್ವಿಕೆಯಿಂದ ಭಾರತ ಜರ್ಜರಿತವಾಗಿದ್ದ ಕಾಲದಲ್ಲಿ ಧರ್ಮಸ್ವಾಮಿ ಇಲ್ಲಿಗೆ ಬಂದು ಅಧ್ಯಯನ ನಡೆಸಿ ಸಂಸ್ಕøತದಲ್ಲಿಯೇ ಅನೇಕ ಪುಸ್ತಕಗಳನ್ನು ಬರೆದಿದ್ದಾರೆ. ಟಿಬೆಟ್‍ನ ನೆಲಮಾಳಿಗೆಯಲ್ಲಿ ಮಹಾಯಾನಕ್ಕೆ ಸೇರಿದ ಅನೇಕ ಕೃತಿಗಳಿವೆ. ಅಪರೂಪವಾದ ಅನೇಕ ಸಂಸ್ಕøತ ಗ್ರಂಥಗಳನ್ನು ಟಿಬೆಟ್‍ಗೆ ಅನುವಾದ ಮಾಡಿದ್ದಾರೆ. ಟಿಬೆಟ್‍ನಲ್ಲಿ ಗುರು-ಶಿಷ್ಯರ ಸಂಪ್ರದಾಯವಿದೆ ಎಂದು ಹೇಳಿದರು.

 

ಅನುವಾದ ಮಾಡುವಾಗ ಸಹನೆ, ತಾಳ್ಮೆ ಬೇಕು. ಸಿ.ಎಂ.ತಿಪ್ಪೇಸ್ವಾಮಿರವರು ಮಾಡಿರುವ ಅನುವಾದದಲ್ಲಿ ಧರ್ಮಸ್ವಾಮಿಯ ಚರಿತ್ರೆ ಒಟ್ಟುಗೂಡಿದೆ. ಪ್ರವಾಸ ಕಥನವುಳ್ಳ ಅಪರೂಪದ ಗ್ರಂಥ ಇದು. ಕೃತಿಯಲ್ಲಿ ಧರ್ಮಸ್ವಾಮಿಗಳ ಎಳೆಯನ್ನು ಚಿತ್ರಿಸಿದ್ದಾರೆ. ಕಡಲ್ಗಳ್ಳರು, ಭಾರದಲ್ಲಿ ಮುಸ್ಲಿಂರ ದಾಳಿಯಿದ್ದ ಸಮಯದಲ್ಲಿ ಪ್ರವಾಸ ಮಾಡಿ ಧರ್ಮಸ್ವಾಮಿ ಅಧ್ಯಯನ ಮಾಡಿರುವುದು ದೊಡ್ಡ ಸಾಧನೆ. ಇಲ್ಲಿನ ಅನುಭವವನ್ನು ಪಡೆದು ಟಿಬೆಟ್‍ಗೆ ಹೋಗಿ ಅಲ್ಲಿನ ಜನರಿಗೆ ತಿಳಿಸಿರುವುದು ಅವರು ಭಾರತದ ಮೇಲಿಟ್ಟಿರುವ ಪ್ರೀತಿ ಅಭಿಮಾನ ತೋರಿಸುತ್ತದೆ ಎಂದರು.

 

ಡಯಟ್‍ನ ಉಪ ನಿರ್ದೇಶಕ ನಾಸಿರುದ್ದೀನ್ ಮಾತನಾಡಿ ಕೆಲಸದ ಒತ್ತಡದ ನಡುವೆ ಗುರುವಾಗ್ವಿಮಲಾವಳಿಯನ್ನು ಕನ್ನಡಕ್ಕೆ ತರ್ಜುಮೆ ಮಾಡಿರುವುದು ಸಿ.ಎಂ.ತಿಪ್ಪೇಸ್ವಾಮಿರವರಲ್ಲಿ ಎಷ್ಟು ಸಾಮಥ್ರ್ಯವಿದೆ ಎನ್ನುವುದನ್ನು ತೋರಿಸುತ್ತದೆ. ಕಚೇರಿ ಕೆಲಸದ ನಡುವೆಯೂ ಬಿಡುವು ಮಾಡಿಕೊಂಡು ಹೊರತಂದಿರುವ ಪುಸ್ತಕವನ್ನು ಎಲ್ಲರೂ ಓದಿ ಎಂದು ವಿನಂತಿಸಿದರು.

 

ಪುಸ್ತಕ ಬಿಡುಗಡೆ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಇತಿಹಾಸ ಸಂಶೋಧಕ ಡಾ.ಬಿ.ರಾಜಶೇಖರಪ್ಪ ಮಾತನಾಡುತ್ತ ಧರ್ಮ ಸಂಘರ್ಷ, ಕ್ರೂರಿಗಳು, ಕಾಡು ಪ್ರಾಣಿಗಳ ಕಾಟ, ದರೋಡೆಕೋರರ ಭಯ ಇಂತಹ ಪರಿಸ್ಥಿತಿಯಲ್ಲಿ ಧರ್ಮಸ್ವಾಮಿ ಭಾರತದಲ್ಲಿ ಬೌದ್ದ ಭಿಕ್ಷುವಾಗಿ ಓಡಾಡಿದರು. ಯಾವ್ಯಾವ ನಾಡು, ಊರು ಸುತ್ತಿ ಅಧ್ಯಯನ ನಡೆಸಿದ್ದಾರೆನ್ನುವುದನ್ನು ಸಿ.ಎಂ.ತಿಪ್ಪೇಸ್ವಾಮಿ ಗುರುವಾಗ್ವಿಮಲಾವಳಿ ಪುಸ್ತಕದಲ್ಲಿ ಬರೆದಿದ್ದಾರೆ. ಇವರ ರಕ್ಕಸದಂಗಡಿ ಕಥನ ಕೂಡ ಅತಿ ಮುಖ್ಯವಾದುದು. ಶಾಸನಗಳನ್ನು ಸರಿಯಾಗಿ ಓದಿದರೆ ಇತಿಹಾಸ ಅನಾವರಣಗೊಳ್ಳುತ್ತದೆಂದು ಹೇಳಿದರು.

 

ಕನ್ನಡಕ್ಕೆ ಈ ತರಹದ ಕೃತಿಗಳು ತುಂಬಾ ಕಡಿಮೆ. ನಾಡೆಗೌಡರು ಪ್ರವಾಸಿ ಕಂಡ ಇಂಡಿಯಾ ಕೃತಿಯನ್ನು ಅನುವಾದ ಮಾಡಿದ್ದಾರೆ. ವಿದೇಶಿಯರು ಭಾರತಕ್ಕೆ ಬಂದಿದ್ದಾರೆನ್ನುವುದು ಈ ಕೃತಿ ಓದಿನಿಂದ ತಿಳಿಯುತ್ತದೆ. 67 ನೇ ವಯಸ್ಸಿನವರೆಗೂ ಧರ್ಮಸ್ವಾಮಿ ಭಾರತದಲ್ಲಿದ್ದರು. ಅವರು ನಿಧನರಾದ ಘಟನೆ ಕೂಡ ಪವಾಡ ರೀತಿಯಲ್ಲಿತ್ತು. ಧಾರ್ಮಿಕ ಗ್ರಂಥ, ಹಸ್ತ ಪ್ರತಿಗಳನ್ನು ಸಂಗ್ರಹಿಸಿ ಟಿಬೆಟ್ ಭಾಷೆಗೆ ಅನುವಾದ ಮಾಡುತ್ತಿದ್ದ ಶ್ರೇಷ್ಟ ಭಿಕ್ಷು ಧರ್ಮಸ್ವಾಮಿ ಎನ್ನುವುದನ್ನು ಈ ಕೃತಿಯಲ್ಲಿ ನೋಡಬಹುದು ಎಂದರು.
ಕೃತಿಕಾರ ಸಿ.ಎಂ.ತಿಪ್ಪೇಸ್ವಾಮಿ ಮಾತನಾಡಿ ಸಂಶೋಧನೆ ಮಾಡುವಾಗ ಕವಲುಗಳು ಹೊಡೆದುಕೊಂಡು ಹೆಚ್ಚು ಆಸಕ್ತಿ ಹುಟ್ಟಿಸುತ್ತದೆ. ದೈತ್ಯ ಅನುವಾದಕ ಧರ್ಮಸ್ವಾಮಿ ಭಾರತದಲ್ಲಿ ಸುತ್ತಾಡಿ ಅಧ್ಯಯನ ನಡೆಸಿರುವುದನ್ನು ಬರೆಯಲು ಮೂರು ವರ್ಷಗಳ ಸಮಯ ಹಿಡಿಯಿತು. ಈ ಪುಸ್ತಕ ಬರೆಯುವಾಗ ಇತಿಹಾಸ ಸಂಶೋಧಕ
ಡಾ.ಬಿ.ರಾಜೇಶರಪ್ಪನವರ ಸಲಹೆ ಪಡೆದುಕೊಂಡಿದ್ದೇನೆ. ಕೃತಿಯ ಮಧ್ಯದಲ್ಲಿ ಪದ್ಯಗಳು ಬಂದಿವೆ. ತರ್ಜುಮೆ ಮಾಡುವಾಗ ಕಷ್ಟವೆನಿಸಿತೆಂದು ತಮ್ಮ ಅನುಭವ ಹಂಚಿಕೊಂಡರು.

 

ಶಿಕ್ಷಣಾಧಿಕಾರಿ ಎನ್.ಆರ್.ತಿಪ್ಪೇಸ್ವಾಮಿ ಮಾತನಾಡುತ್ತ ಶೈಕ್ಷಣಿಕ ಕಾರ್ಯದ ಒತ್ತಡದ ನಡುವೆ ಸಿ.ಎಂ.ತಿಪ್ಪೇಸ್ವಾಮಿ ಸಂಶೋಧನೆಯಲ್ಲಿ ತೊಡಗಿರುವುದು ಕಷ್ಟದ ಕೆಲಸ.
ವಿಶಿಷ್ಟತೆಯಿಂದ ಕಾರ್ಯ ಸಿದ್ದಿಯಾಗಿದೆ. ಗುರುವಾಗ್ವಿ ಮಲಾವಳಿ ನಾಮ ಅನುವಾದದಲ್ಲಿ ಸಾಹಿತ್ಯದ ಎಲ್ಲಾ ಲಕ್ಷಣಗಳಿವೆ ಎಂದು ಪ್ರಶಂಶಿಸಿದರು.
ಡಿವೈಪಿಸಿ. ವೆಂಕಟೇಶ್ ಮಾತನಾಡುತ್ತ ಇಲಾಖೆಯ ಒತ್ತಡದ ಕೆಲಸದ ಮಧ್ಯೆ ಸಿ.ಎಂ.ತಿಪ್ಪೇಸ್ವಾಮಿರವರು ಅನುವಾದಿತ ಕೃತಿ ವಿಶಿಷ್ಟವಾದ ಗ್ರಂಥ ಹೊರ ತಂದಿದ್ದಾರೆ.

 

ಯಾತ್ರಿಕರು ಬಂದು ಭಾರತದಲ್ಲಿ ಪ್ರವಾಸ ಮಾಡಿ ಕಂಡುಕೊಂಡ ಅನುಭವವನ್ನು ಕೃತಿಯಲ್ಲಿ ತೋರಿಸಿರುವುದು ಅವರ ಮೇರು ಪ್ರತಿಭೆ. ಇತಿಹಾಸದ ಮೇಲೆ ಬೆಳಕು ಚೆಲ್ಲುವ ಕೃತಿ ಇದು ಎಂದು ಶ್ಲಾಘಿಸಿದರು.
ಸಿ.ಎಂ.ತಿಪ್ಪೇಸ್ವಾಮಿರವರ ಅಪಾರ ಅಭಿಮಾನಿಗಳು, ಶಿಕ್ಷಕರು, ವಿದ್ಯಾರ್ಥಿಗಳು, ಹಾಗೂ ಗೆಳೆಯರ ಬಳಗದವರು ಕೃತಿ ಬಿಡುಗೆಯಲ್ಲಿ ಭಾಗವಹಿಸಿದ್ದರು.
ಮಲ್ಲೇಪುರಂ ಜಿ.ವೆಂಕಟೇಶ್ ಪಾಲಿ ಕನ್ನಡ ನಿಘಂಟನ್ನು ಸಿ.ಎಂ.ತಿಪ್ಪೇಸ್ವಾಮಿರವರಿಗೆ ನೀಡಿ ಶುಭ ಹರಸಿದರು.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now