ಜಂಗಮ ಸಮಾಜದ ಮೂಲ ಮಂತ್ರ ಶಿಕ್ಷಣ ಹಾಗೂ ಸಂಸ್ಕಾರ : ಕೆ.ಎಸ್. ನವೀನ್

5 Min Read

 

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

ಸುದ್ದಿಒನ್, ಚಿತ್ರದುರ್ಗ, ಜೂ. 22 : ಜಂಗಮ ಸಮಾಜದ ಮೂಲ ಮಂತ್ರ ಶಿಕ್ಷಣ ಹಾಗೂ ಸಂಸ್ಕಾರವಾಗಿದೆ. ಇದನ್ನು ಲಿಂಗಾಯತ ಸಮುದಾಯದ ಎಲ್ಲಾ ಜನರಿಗೂ ಕಲಿಸುವುದರ ಮೂಲಕ ಎಲ್ಲರನ್ನು ಅಕ್ಷರವಂತರಾಗಿ ಮಾಡಿದ್ದಾರೆ ಎಂದು ವಿಧಾನಪರಿಷತ್ ಸದಸ್ಯರಾದ ಕೆ.ಎಸ್. ನವೀನ್ ತಿಳಿಸಿದರು.

ಜಿಲ್ಲಾ ಬೇಡಜಂಗಮ ಸಮಾಜ ಸಂಸ್ಥೆ (ರಿ.), ಚಿತ್ರದುರ್ಗ ಮತ್ತು ತಾಲ್ಲೂಕು ಬೇಡಜಂಗಮ ಸಮಾಜಗಳು, ಚಿತ್ರದುರ್ಗ ಜಿಲ್ಲೆ ಇವುಗಳ ಸಂಯುಕ್ತಾಶ್ರಯದಲ್ಲಿ ನಗರದ ಶ್ರೀ ಜಗದ್ಗುರು ಪಂಚಾಚಾರ್ಯ ಕಲ್ಯಾಣ ಮಂಟಪದಲ್ಲಿ ಭಾನುವಾರ ಹಮ್ಮಿಕೊಂಡಿದ್ದ 2024-25ನೇ ಸಾಲಿನ ಜಿಲ್ಲಾ ಪ್ರತಿಭಾ ಪುರಸ್ಕಾರ ಮತ್ತು ಶಿಷ್ಯವೇತನ ವಿತರಣಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಪ್ರತಿಭೆ ಯಾರ ಸೋತ್ತು ಅಲ್ಲ ಅದು ಸಾಧನೆ ಮಾಡಿದವರ ಬಳಿ ಇರುತ್ತದೆ ಯಾರು ಸತತವಾಗಿ ಶ್ರಮವನ್ನು ಹಾಕುವುದರ ಮೂಲಕ ವಿದ್ಯೆಯನ್ನು ಒಲಿಸಿಕೊಳ್ಳುತ್ತಾರೆ ಅಂತಹರ ಬಳಿ ಪ್ರತಿಭೆ ಇರುತ್ತದೆ.ಇಂತಹರನ್ನು ಗುರುತಿಸಿ ಅವರ ಪ್ರತಿಭೆಗೆ ಸನ್ಮಾನ ಮಾಡುವುದರ ಉತ್ತಮವಾದ ಕೆಲಸವಾಗಿದೆ ಎಂದರು.

ಜಂಗಮ ಸಮಾಜದಿಂದ ಇತರೆ ಸಮಾಜ ಸಮಾಜಗಳಿಗೆ ಶಿಕ್ಷಣ ಹಾಗೂ ಸಂಸ್ಕಾರವನ್ನು ನೀಡಿದೆ. ವಾರಾಣಸಿಯಲ್ಲಿ 6ನೇ ಶತಮಾನದಿಂದಲೂ ಶಿಕ್ಷಣವನ್ನು ಕಲಿಸುತ್ತಿದ್ದಾರೆ ಎಂ.ಪಿ.ಚುನಾವಣೆಯ ವೇಳೆಯಲ್ಲಿ ನಾನು ಅಲ್ಲಿಗೆ ಹೋಗುವ ಅವಕಾಶ ಸಿಕ್ಕಿತ್ತು ಆಗ ಅಲ್ಲಿನ ಜಂಗಮ ಮಠಕ್ಕೆ ಭೇಟಿ ನೀಡಿದೆ ಅಲ್ಲಿ ಪ್ರಪಂಚದ ವಿವಿಧ ಮೂಲೆಗಳಿಂದ ಕಲಿಯಲು ಬರುತ್ತಾರೆ ಅವರಿಗೆ ಸಂಸ್ಕøತದಲ್ಲಿ ಪಾಠವನ್ನು ಈಗಲೂ ಸಹಾ ಹೇಳಿಕೊಡಲಾಗುತ್ತದೆ. ಇತ್ತಿಚಿನ ದಿನದಲ್ಲಿ ವೀರಶೈವ ಲಿಂಗಾಯತ ಪಂಗಡದವರು ಒಟ್ಟಾಗಿ ನಿಲ್ಲುವಂತ ಕಾರ್ಯವನ್ನು ಮಾಡಬೇಕಿದೆ. ಎಂದು ನವೀನ್ ತಿಳಿಸಿದರು.

ರಾಜಕಾರಣದಲ್ಲಿ ಮಾರ್ಗದರ್ಶನ ನೀಡುವವರಿ ಸರಿಯಾಗಿ ಇರಬೇಕಿದೆ ಏಕೆಂದರೆ ಅಧಿಕಾರ ಸಿಕ್ಕಾಗ ಮದ ಏರುವುದು ಸಾಮಾನ್ಯ ಅದರ ಬಗ್ಗೆ ತಿಳಿಸುವಂತ ಕಾರ್ಯವನ್ನು ಜಂಗಮ ಸಮಾಜ ಮಾಡಬೇಕಿದೆ. ಮಾನವ ಯಶಸ್ಸು ಕಾಣಲು ಹಿಂದೆ ಗುರು ಇರಬೇಕು ಮುಂದೆ ಗುರಿ ಇರಬೇಕು ಆಗ ಮಾತ್ರ ಜೀವನದಲ್ಲಿ ಮುಂದೆ ಬರಲು ಸಾಧ್ಯವಿದೆ ಎಂದು ಹೇಳಿದರು.

ಮಾಜಿ ಶಾಸಕರಾದ ಎಸ್.ಕೆ. ಬಸವರಾಜನ್ ಮಾತನಾಡಿ, ಜಂಗಮ ಸಮಾಜ ತನ್ನ ಅಸ್ಥಿತ್ವವನ್ನು ಉಳಿಸಿಕೊಳ್ಳಬೇಕಿದೆ, ಜನ ಸಂಖ್ಯೆಯಲ್ಲಿ ಕಡಿಮೆ ಇದ್ದರೂ ಸಹಾ ಸಂಘಟನೆಯನ್ನು ಬಲಗೊಳಿಸಬೇಕಿದೆ. ಸಮಾಜ ಸಮಾಜ ಮುಖಿಯಾಗಿ ವಿವಿಧ ರೀತಿಯ ಕೆಲಸಗಳನ್ನು ಮಾಡುತ್ತಾ ಸಮಾಜವನ್ನು ಮುನ್ನೆಡೆಸುವ ಕಾರ್ಯವನ್ನು ಮಾಡುತ್ತಿದೆ. ಜಂಗಮರು ಹುಟ್ಟು-ಸಾವಿನಲ್ಲಿ ವಿಶೇಷವಾದ ಪಾತ್ರವನ್ನು ವಹಿಸುತ್ತಾರೆ. ಇವರಿಗೆ ವೀರಶೈವ ಲಿಂಗಾಯತ ಸಮಾಜದಲ್ಲಿ ವಿಶೇಷವಾದ ಸ್ಥಾನ ಇದೆ.ಇವರಿಲ್ಲದೆ ಯಾವ ಕಾರ್ಯಗಳು ಸಹಾ ನಡೆಯುವುದಿಲ್ಲ ನಿಮ್ಮದೇ ಆದ ಸಹಕಾರ ಸಂಘವನ್ನು ಸ್ಥಾಪನೆ ಮಾಡಲಾಗಿದೆ ಇದರಲ್ಲಿ ಅರ್ಥಿಕವಾಗಿ ಹಿಂದುಳಿದವರಿಗೆ ಸಾಲವನ್ನು ನೀಡುವುದರ ಮೂಲಕ ಅವರು ಸಹಾ ಆರ್ಥಿಕವಾಗಿ ಪ್ರಗತಿಯನ್ನು ಕಾಣುವಂತೆ ಮಾಡಿ ಅದೇ ರೀತಿ ಪಡೆದ ಸಾಲವನ್ನು ಸಕಾಲದಲ್ಲಿ ಮರು ಪಾವತಿಯನ್ನು ಮಾಡುವುದರ ಮುಲಕ ಬೇರೆಯವರಿಗೆ ಸಹಾಯವಾಗಬೇಕಿದೆ ಎಂದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ದಾವಣಗೆರೆ ವಿರಕ್ತಮಠದ ಡಾ. ಬಸವಪ್ರಭು ಮಹಾಸ್ವಾಮಿಗಳು ತಮ್ಮ ಭಾಷಣದಲ್ಲಿ ಜಂಗಮ ಸಮಾಜದಲ್ಲಿನ ಮಕ್ಕಳು ಪೂಜೆ ಪುನಸ್ಕಾರ ಕಾರ್ಯವನ್ನು ಮಾಡುವುದರ ಮೂಲಕ ಶಿಕ್ಷಣವನ್ನು ಕಡೆಗಣಿಸಿದ್ದಾರೆ. ಪೂಜೆ ಪುನಸ್ಕಾರಕ್ಕೆ ನೀಡಿದ ಮಹತ್ವವನ್ನು ಶಿಕ್ಷಣಕ್ಕೂ ಸಹಾ ನೀಡಬೇಕಿದೆ ಇಂದಿನ ದಿನಮಾನದಲ್ಲಿ ಶಿಕ್ಷಣಕ್ಕೆ ತನ್ನದೆ ಆದ ಶಕ್ತಿ ಇದೆ, ಅದನ್ನು ತಿಳಿದು ಮನೆಯಲ್ಲಿ ಪೋಷಕರು ತಮ್ಮ ಮಕ್ಕಳಿಗೆ ಸಾಕಷ್ಟು ಶಿಕ್ಷಣವನ್ನು ಕೂಡಿಸುವ ಕಾರ್ಯಕ್ಕೆ ಮುಂದಾಗಬೇಕಿದೆ. ಇದರಿಂದ ಮುಂದಿನ ದಿನದಲ್ಲಿ ಉನ್ನತವಾದ ಹುದ್ದೆಗಳನ್ನು ಪಡೆಯಬಹುದಾಗಿದೆ. ಜಂಗಮ ಸಮಾಜದಲ್ಲಿ ಒಂದು ವಿಶೇಷತೆ ಇದೆ ಅದು ಎಂದರೆ ತಿರುಕು ಬಮದು ಕರೆದುಕೊಂಡು ಉಣ್ಣು ಎಂದು ಜಂಗಮರು ಊರುಗಳಲ್ಲಿ ಭೀಕ್ಷೆಯನ್ನು ಭೇಡಿ ತನ್ನಲ್ಲಿರುವವರಿಗೆ ಊಟವನ್ನು ನೀಡುವಂತ ಗುಣವನ್ನು ಹೊಂದಿರುತ್ತಾರೆ. ಎಲ್ಲರೊಂದಿಗೆ ಹಂಚಿಕೊಂಡು ಉಣ್ಣುವಂತ ಗುಣವನ್ನು ಜಂಗಮ ಸಮಾಜ ಹೊಂದಿದೆÉ ಎಂದರು.

ಮೀಸಲಾತಿ ವಿಚಾರದಲ್ಲಿ ಲಿಂಗಾಯತ ಸಮಾಜದಲ್ಲಿ 101 ಪಂಗಡಗಳು ಇವೆ. ಲಿಂಗಾಯತ ಸ್ವತಂತ್ರವಾದ ಧರ್ಮ ಇದೆ. ಇದಕ್ಕೆ ತನ್ನದೆ ಇತಿಹಾಸವನ್ನು ಹೊಂದಿದೆ. ಬಸವಣ್ಣ ಗುರುಗಳಾಗಿದ್ದಾರೆ. ಅವರು ನೀಡಿರುವ ಪರಂಪರೆ ನಮ್ಮ ಲಿಂಗಾಯತ ಸಮಾಜಕ್ಕೆ ಇದೆ. ಈಗ ಲಿಂಗಾಯತ ಧರ್ಮವನ್ನು ಬಿಟ್ಟು ಮೀಸಲಾತಿಗಾಗಿ ಬೇರೆ ಸಮಾಜದ ಕುಂಬಾರ, ಗಾಣಿಗ, ಹಡಪದ ಎಂದು ಹೆಸರನ್ನು ಬರೆಸುತ್ತಿದ್ದಾರೆ. ಇದರಿಂದ ಲಿಂಗಾಯತ ಸಮಾಜದ ಒಳ ಪಂಗಡಗಳು ಕಡಿಮೆಯಾಗುತ್ತಿವೆ. ಇಂದಿನ ದಿನದಲ್ಲಿ ನಮ್ಮ ಧರ್ಮವನ್ನು ಉಳಿಸುವಂತ ಕಾರ್ಯವನ್ನು ಮಾಡಬೇಕಿದೆ. ಕೇವಲ ಮೀಸಲಾತಿಯಿಂದ ಜೀವನ ಉದ್ದಾರವಾಗುತ್ತದೆ ಎಂಬ ತಪ್ಪು ಕಲ್ಪನೆಯಿಂದ ಹೂರ ಬರಬೇಕಿದೆ. ಬಸವಣ್ಣರವರು ಕಾಯಕವನ್ನು ಮಾಡುವುದರ ಮೂಲಕ ಬದುಕನ್ನು ಕಟ್ಟಿಕೊಳ್ಳಬೇಕೆಂದು ತಿಳಿಸಿದ್ದಾರೆ ಅದರಂತೆ ನಡೆಯಬೇಕಿದೆ. ಬೇಡ ಜಂಗಮ ಎಂದು ಸರ್ಕಾರದಿಂದ ಪ್ರಮಾಣ ಪತ್ರ ಸಿಕ್ಕಲ್ಲಿ ಉಪಯೋಗ ಮಾಡಿಕೊಳ್ಳಿ ಇಲ್ಲವಾದಲ್ಲಿ ಜಂಗಮ ಎಂದು ಪ್ರಮಾಣ ಪತ್ರವನ್ನು ಪಡೆದು ನಿಮ್ಮ ಬದುಕನ್ನು ಉತ್ತಮ ಪಡಿಸಿಕೊಳ್ಳಿ, ಶಿಕ್ಷಣದ ಮೂಲಕ ನಮ್ಮ ಬದುಕನ್ನು ಕಟ್ಟಿಕೊಳ್ಳಬೇಕಿದೆ. ಜಂಗಮ ಸಮಾಜದವರು ಕಾಯಕ ಜೀವಿಗಳಾಗಿದ್ದಾರೆ ಪೂಜೆಯನ್ನು ಸಲ್ಲಿಸುವಾಗ ಹಣಕ್ಕೆ ಡಿಮ್ಯಾಂಡೆ ಮಾಡಬೇಡಿ ಅವರು ನೀಡಿದಷ್ಟು ಪಡೆಯಿರಿ ಎಂದು ಕಿವಿ ಮಾತು ಹೇಳಿದರು.

ದಿವ್ಯ ಸಾನ್ನಿಧ್ಯ ವಹಿಸಿದ್ದ ಹೆಬ್ಬಾಳ್‍ನ ಶ್ರೀ ವಿರಕ್ತಮಠದ ಮ.ನಿ.ಪ್ರ. ರುದ್ರೇಶ್ವರ ಮಹಾಸ್ವಾಮಿಗಳು ತಮ್ಮ ಆರ್ಶೀವಚನದಲ್ಲಿ ಬಸವಣ್ಣರವರು ಅನುಭವ ಮಂಟಪದಲ್ಲಿ ಶೂನ್ಯಪೀಠವನ್ನು ನಿರ್ಮಾಣ ಮಾಡಿ ಜಂಗಮನ ಬರುವಿಗಾಗಿ ಕಾಯುತ್ತಾ ಕುಳಿತ್ತಿದ್ದರು, ಅವರು ಬಂದ ಮೇಲೆ ಅ ಸ್ಥಾನಕ್ಕೆ ಅವರನ್ನು ಕುಳ್ಳರಿಸಿ ಅನುಭವ ಮಂಟಪವನ್ನು ನಡೆಸಿದರು. ಇದರಿಂದ ಜಂಗಮರಿಗೆ ಬಸವಣ್ಣರವರ ಕಾಲದಿಂದಲೇ ಮಾನ್ಯತೆಯನ್ನು ನೀಡಲಾಗಿದೆ. ಜಂಗಮ ತತ್ವಕ್ಕೆ ಅಮೂಲ್ಯವಾದ ಬೆಲೆ ಇದೆ. ಚಿತ್ರದುರ್ಗ ಜಿಲ್ಲೆಯ ಜಂಗಮ ಸಮಾಜ ಉತ್ತಮವಾದ ಕಾರ್ಯವನ್ನು ಮಾಡುತ್ತಿದೆ ಮಕ್ಕಳಿಗೆ ಪ್ರತಿಭಾ ಪುರಸ್ಕಾರ, ಸಹಕಾರ ಸಂಘವನ್ನು ನಿರ್ಮಾಣ ಮಾಡಿದೆ ಮುಂದಿನ ದಿನದಲ್ಲಿ ಜಂಗಮ ಭವನವನ್ನು ನಿರ್ಮಾಣ ಮಾಡಲು ಮುಂದಾಗಿದೆ ಇದು ಉತ್ತಮವಾದ ಬೆಳವಣಿಗೆಯಾಗಿದೆ. ಚಿತ್ರದುರ್ಗದಲ್ಲಿ ಜಂಗಮ ಸಮಾಜ ಉತ್ತಮವಾಗಿ ನಡೆಯುತ್ತಿದೆ. ಸಹಕಾರ ಸಂಸ್ಥೆಯಲ್ಲಿ ಅಧಿಕಾರಕ್ಕಾಗಿ ಬರದೇ ಸೇವಾ ಮನೋಭಾವದಿಂದ ಬಂದಾಗ ಮಾತ್ರ ಅದು ಉತ್ತಮವಾಗಿ ನಡೆಯಲು ಸಾಧ್ಯವಿದೆ ಎಂದರು.

ವಾಣಿಜ್ಯೋದ್ಯಮಿಗಳು ಹಾಗೂ ಜಿಲ್ಲಾ ಬೇಡ ಜಂಗಮ ಸಮಾಜ ಸಂಸ್ಥೆಯ ಅಧ್ಯಕ್ಷರಾದ ಸೋಮಶೇಖರ್ ಮಂಡಿಮಠ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು.

ಕಾರ್ಯಕ್ರಮದಲ್ಲಿ ವೀರಶೈವ ಅರ್ಬನ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಅಧ್ಯಕ್ಷರಾದ ಪಟೇಲ್ ಶಿವಕುಮಾರ, ಜಿಲ್ಲಾ ಬೇಡ ಜಂಗಮ ಸಮಾಜ ಸಂಸ್ಥಾನ, ಕಾರ್ಯಾಧ್ಯಕ್ಷರಾದ ಎಂ.ಟಿ. ಮಲ್ಲಿಕಾರ್ಜುನಸ್ವಾಮಿ, ರಾಜ್ಯ ಬೇಡ ಸಮಾಜ ಸಂಸ್ಥೆಯ ಕಾರ್ಯಾಧ್ಯಕ್ಷರು, ಬಾಪೂಜಿ ಸಮೂಹ ಸಂಸ್ಥೆಗಳು ಕಾರ್ಯದಶಿಗಳಾದಕೆ.ಎಂ. ವೀರೇಶ್, ಜಿಲ್ಲಾ ಬೇಡ ಜಂಗಮ ಸಮಾಜ ಸಂಸ್ಥೆಯ ಖಜಾಂಚಿ ಕೆ.ಎಸ್. ಶಿವನಗೌಡ್ರು, ವೀರಶೈವ-ಲಿಂಗಾಯತ ಪಂಚಮಸಾಲಿ ಸಮಾಜದ ಅಧ್ಯಕ್ಷರಾದ ಜೆ. ಶಿವಪ್ರಕಾಶ, ಜಿಲ್ಲಾ ವೀರಶೈವ-ಲಿಂಗಾಯತ ಹೇಮರೆಡ್ಡಿ ಮಲ್ಲಮ್ಮ ಸಮಾಜದ ಅಧ್ಯಕ್ಷರಾದ ಜಿ. ಚಿದಾನಂದಪ್ಪ, ವೀರಶೈವ-ಲಿಂಗಾಯತ, ಜಿಲ್ಲಾ ಶಿವಶಿಂಪಿ ಸಮಾಜದ ಅಧ್ಯಕ್ಷರಾದ ಈ.ಎಸ್. ಜಯದೇವಮೂರ್ತಿ, ಬೇಡ ಜಂಗಮ ಸಮಾಜದ ಚಿತ್ರದುರ್ಗ ತಾಲೂಕು ಅಧ್ಯಕ್ಷ ಜಿ.ಎಸ್. ಕಲ್ಲೇಶಯ್ಯ, ಹೊಸದುರ್ಗ ತಾಲ್ಲೂಕು ಜಂಗಮ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾದ ಕೆ.ಎಸ್. ಕಲ್ಕರ, ಹೊಳಲ್ಕೆರೆ ತಾಲ್ಲೂಕು ಬೇಡ ಜಂಗಮ ಸಮಾಜದ ಅಧ್ಯಕ್ಷರಾದ ಕೆ.ಎಚ್. ಪ್ರಭುಲಿಂಗಯ್ಯ, ಚಳ್ಳಕೆರೆ ತಾಲೂಕು ಬೇಡ ಜಂಗಮ ಸಮಾಜದ ಅಧ್ಯಕ್ಷ ಎಂ.ಸಿ. ತಿಪ್ಪೇಸ್ವಾಮಿ, ಹಿರಿಯೂರು ತಾಲ್ಲೂಕು ಬೇಡ ಜಂಗಮ ಸಮಾಜದ ಅಧ್ಯಕ್ಷ ಸಿ.ಎಂ. ಸ್ವಾಮಿ, ಮೊಳಕಾಲ್ಕೂರು ತಾಲ್ಲೂಕು ಬೇಡ ಜಂಗಮ ಸಮಾಜದ ಅಧ್ಯಕ್ಷ ಬಿ. ಶಿವಣ್ಣ, ವಿದ್ಯಾವಿಕಾಸ ವಿದ್ಯಾಸಂಸ್ಥೆಯ ಕಾರ್ಯದರ್ಶಿ  ಬಿ ವಿಜಯಕುಮಾರ್,  ನಿವೃತ್ತ ಪ್ರಾಧ್ಯಾಪಕ ಡಾ. ಎಂ.ಕೆ. ಪ್ರಭುದೇವ್ ಭಾಗವಹಿಸಿದ್ದರು

ಜಿಲ್ಲಾ ಬೇಡ ಜಂಗಮ ಸಮಾಜ ಸಂಸ್ಥೆಯ  ಪ್ರಧಾನ ಕಾರ್ಯದರ್ಶಿ ಎಸ್. ಷಡಾಕ್ಷರಯ್ಯ ಪ್ರಾಸ್ತಾವಿಕ ನುಡಿದರು. ಬಸವರಾಜಯ್ಯ ಶಾಸ್ತ್ರಿ ವೇದ ಘೋಷ ವಾಚಿಸಿದರೆ ಲೀಲಾವತಿ ಪ್ರಾರ್ಥಿಸಿದರು. ವಿರೇಶ್ ಸ್ವಾಗತಿಸಿದರು. ಇದೇ ಸಂದರ್ಭದಲ್ಲಿ ಎಸ್,ಎಸ್.ಎಲ್.ಸಿ. ಪಿಯುಸಿ ಪದವಿ ಹಾಗೂ ಪಿಎಚ್.ಡಿ. ಪಡೆದವರನ್ನು ಸನ್ಮಾನಿಸಲಾಯಿತು.

Share This Article
Leave a Comment

Leave a Reply

Your email address will not be published. Required fields are marked *

Enable Notifications OK No thanks