ಶಿರಡಿ ಸಾಯಿಬಾಬಾಗೆ ದೇಶದಲ್ಲಿ ಅಪಾರ ಪ್ರಮಾಣದಲ್ಲಿ ಭಕ್ತರಿದ್ದಾರೆ. ಬಾಬಾನ ಮುಂದೆ ತಮ್ಮ ಕೋರಿಕೆಗಳನ್ನಿಟ್ಟು, ಬಾಬಾ ಅದನ್ನು ಪೂರೈಸಿದ ಮೇಲೆ ಕಾಣಿಕೆ ರೂಪದಲ್ಲಿ, ತಮ್ಮ ಹತಕೆಯನ್ನು ತೀರಿಸುತ್ತಾರೆ. ಅದು ಹಣದ ರೂಪದ ಕಾಣಿಕೆಯೂ ಆಗಿರುತ್ತದೆ. ಆದರೆ ಈ ರೀತಿ ನೀಡಿದ ಕಾಣಿಕೆಯಲ್ಲಿ ಕೋಟಿ ಕೋಟಿ ಕಾಯಿನ್ ಗಳು ಕಲೆಕ್ಟ್ ಆಗಿದೆ. ಇದನ್ನು ಬ್ಯಾಂಕಿಗೆ ನೀಡಿ, ಬದಲಾವಣೆ ಮಾಡಿಕೊಳ್ಳಲು ಹೋದರೆ, ಅದು ಸಾಧ್ಯವಾಗುತ್ತಿಲ್ಲ.
ಬಾಬಾನಿಗೆ ಬಂದ ಕಾಣಿಕೆಯನ್ನು ಎಣಿಸಿ, ಬ್ಯಾಗ್ ಗಳಿಗೆ ತುಂಬಿಸಿ, ಬ್ಯಾಂಕ್ ಗಳಿಗೆ ಹೋದರೆ ಠೇವಣಿ ಇಡಲು ಸಾಧ್ಯವಿಲ್ಲ ಎಂದಿದ್ದಾರೆ. ನಾಸಿಕ್ ನ ಸುಮಾರು 13ಕ್ಕೂ ಹೆಚ್ಚು ಬ್ಯಾಂಕ್ ಗಳು ಚಿಲ್ಲರೆ ಹಣವನ್ನು ತೆಗೆದುಕೊಳ್ಳಲು ನಿರಾಕರಿಸಿದ್ದಾರೆ. ಯಾಕಂದ್ರೆ ಆ ಬ್ಯಾಂಕ್ ಗಳಲ್ಲೂ ಚಿಲ್ಲರೆ ಹಣ ಹೆಚ್ಚಾಗಿದೆ. ಹೀಗಾಗಿ ಚಿಲ್ಲರೆ ಹಣವನ್ನು ಠೇವಣಿ ಇಟ್ಟುಕೊಳ್ಳಲು ನಿರಾಕರಣೆ ಮಾಡಿದೆ.
ಇನ್ನು ಶಿರಡಿ ಸಾಯಿ ಬಾಬಾ ಮಂಡಳಿಯೇ ಜಾಗ ನೀಡುವುದಾಗಿ ಹೇಳಿದರೂ ಕೂಡ ಠೇವಣಿ ಇಟ್ಟುಕೊಳ್ಳುತ್ತಿಲ್ಲ. ಈಗ ಟ್ರಸ್ಟ್ ಗೆ ಚಿಲ್ಲರೆಯದ್ದೆ ದೊಡ್ಡ ಚಿಂತೆಯಾಗಿದೆ.