ವಾರದ ಕಥೆ ಕಿಚ್ಚನ ಜೊತೆ ಪಂಚಾಯ್ತಿಯಲ್ಲಿ ತಪ್ಪು ಮಾಡಿದವರಿಗೆ ನೀರಿಳಿಸದೇ ಬಿಡುವುದಿಲ್ಲ. ಹಾಗೆ ನೋಡಿದ್ರೆ ಬಿಗ್ ಬಾಸ್ ಮನೆಯಲ್ಲಿ ಎಲ್ಲಾ ಕಡೆಯಲ್ಲೂ ಕ್ಯಾಮಾರಗಳು ಇದಾವೆ ಎಂಬುದು ಎಲ್ಲರಿಗೂ ಗೊತ್ತು. ಬೆಕ್ಕು ಕಣ್ಣು ಮುಚ್ಚಿ ಹಾಲು ಕುಡಿದ್ರೆ ಪ್ರಪಂಚಕ್ಕೆ ಕಾಣಿಸಲ್ಲ ಎಂಬಂತೆ ಬಿಗ್ ಬಾಸ್ ಮನೆ ಮಂದಿ ಭಾವಿಸಿದ್ದಾರೆ. ಇದೀಗ ಕಿಚ್ಚ ಎಲ್ಲಾ ಕಡೆ ಕ್ಯಾಮಾರಾ ಇದೆ ಎಂಬುದನ್ನು ಮನೆ ಮಂದಿಗೆ ನೆನಪು ಮಾಡಿದ್ದಾರೆ.
ಕಳೆದ ಸೀಸನ್ ನಲ್ಲಿ ವರ್ತೂರು ಸಂತೋಷ್ ಇದೇ ರೀತಿ ಮೋಸದಿಂದ ಗೆದ್ದಿದ್ದರು. ಕ್ಯಾಪ್ಟೆನ್ಸಿ ಟಾಸ್ಕ್ ನಲ್ಲಿ ಕಣ್ಣು ಮುಚ್ಚಿ ತಿರುಗುವ ಚೇರ್ ಮೇಲೆ ಕೂರಬೇಕು. 60 ಸೆಕೆಂಡ್ ಆದ ಕೂಡಲೇ ಗಂಟೆ ಹೊಡೆಯಬೇಕಿತ್ತು. ಆ ಟಾಸ್ಕ್ ನಲ್ಲಿ ವಿನಯ್ ಜೊತೆಗೆ ಒಪ್ಪಂದ ಮಾಡಿಕೊಂಡಿದ್ದರು. ಅದೇ ರೀತಿ ಗೆದ್ದರು ಕೂಡ. ಆಮೇಲೆ ಪಂಚಾಯ್ತಿಯಲ್ಲಿ ಕಿಚ್ಚ ನೀರಿಳಿಸಿದ್ದರು.
ಇದೀಗ ಈ ಸೀಸನ್ ನಲ್ಲಿ ಭವ್ಯ ಕೂಡ ಅಂಥದ್ದೇ ಮೋಸ ಮಾಡಿದ್ದಾರೆ. ಬಾಲ್ ಗಳನ್ನ ಬುಟ್ಟಿಗೆ ಹಾಕುವ ಟಾಸ್ಕ್ ನಲ್ಲಿ ತಮ್ಮದಲ್ಲದ ನಂಬರ್ ನಿಂದ ಬಾಲ್ ಬಿದ್ದಿದ್ದನ್ನು ತೆಗೆದುಕೊಂಡು ಹಾಕಿದ್ದಾರೆ. ಆ ಬಗ್ಗೆ ರಜತ್ ಹೇಳಿದರು ಭವ್ಯ ಕೇಳಿಲ್ಲ. ಈ ಮೋಸವನ್ನ ಇಡೀ ಮನೆ ಮುಂದೆ ಕಿಚ್ಚ ಬಹಿರಂಗ ಪಡಿಸಿದ್ದಾರೆ. ಈ ವಿಚಾರಕ್ಕೆ ರಜತ್ ವಿರುದ್ಧ ಚೈತ್ರಾ ರೊಚ್ಚಿಗೆದ್ದಿದ್ದಾರೆ. ಭವ್ಯಾ ಕಣ್ಣೀರು ಹಾಕಿಕೊಂಡು ಕೂತಿದ್ದಾರೆ. ಒಂದಂತು ಬಿಗ್ ಬಾಸ್ ಮಂದಿಗೆ ಅರ್ಥವಾಗಿದೆ. ಟಾಸ್ಕ್ ವಿಚಾರದಲ್ಲಿ ಕಣ್ಣು ತಪ್ಪಿಸಿ ಮೋಸ ಮಾಡಿದರೂ ಕಿಚ್ಚ ಸುಮ್ಮನೆ ಬಿಡಲ್ಲ ಎಂಬುದು.