ಬೆಂಗಳೂರು; ಭಾರತ ಮತ್ತು ಪಾಕ್ ನಡುವೆ ನಡೆದ ಸಂಘರ್ಷದಿಂದ ಕೆಲವು ಪರೀಕ್ಷೆಗಳನ್ನು ಮುಂದೂಡಲಾಗಿತ್ತು. ಅದರಲ್ಲಿ CA ಪರೀಕ್ಷೆ ಕೂಡ ಒಂದು. ಇದೀಗ ವಾತಾವರಣ ತಣ್ಣಗಾದ ಬೆನ್ನಲ್ಲೇ ಸಿಎ ಪರೀಕ್ಷೆಯನ್ನ ಮತ್ತೆ ಆರಂಭಿಸಲಾಗಿದೆ. ಹೊಸ ದಿನಾಂಕವನ್ನು ಬಿಡುಗಡೆ ಮಾಡಲಾಗಿದೆ. ಹೊಸ ದಿನಾಂಕದ ಪ್ರಕಾರ ಮೇ 16 ರಿಂದ ಮೇ 24ರವರೆಗೆ ನಡೆಯಲಿದೆ.
ಈ ಬಗ್ಗೆ ICAI ಮಾಹಿತಿ ನೀಡಿದ್ದು, ಮರು ನಿಗದಿ ಪಡಿಸಿದ್ದ ಪರೀಕ್ಷೆಗಳನ್ನು ಅದೇ ಪರೀಕ್ಷಾ ಕೇಂದ್ರಗಳಲ್ಲಿ ಮತ್ತು ಈ ಹಿಂದರ ನಿಗದಿಪಡಿಸಿದ ಅದೇ ಸಮಯದಲ್ಲು ನಡೆಸಲಾಗುವುದು ಎಂದು ಐಸಿಎಐ ತಿಳಿಸಿದೆ. ಅಂದ್ರೆ ಪರೀಕ್ಷೆಗಳು ಮಧ್ಯಾಹ್ನ 2ರಿಂದ ಸಂಜೆ 5ರವರೆಗೆ ಅಥವಾ ಸಂಜೆ 6 ಗಂಟೆಯವರೆಗೆ ನಡೆಯಲಿವೆ. ಈಗಾಗಲೇ ನೀಎಲಾದ ಪ್ರವೇಶ ಪತ್ರಗಳು ಮರು ನಿಗದಿಪಡಿಸಿದ ದಿನಾಂಕಗಳಿಗೆ ಮಾನ್ಯವಾಗಿರುತ್ತವೆ ಎಂಬ ಮಾಹಿತಿಯನ್ನು ನೀಡಿದ್ದಾರೆ. ಕೇಂದ್ರ ಸರ್ಕಾರ ಅಥವಾ ಯಾವುದೇ ರಾಜ್ಯ ಸರ್ಕಾರ / ಸ್ಥಳೀಯ ರಜಾ ದಿನಗಳು ಪರೀಕ್ಷಾ ದಿನವನ್ನು ಸಾರ್ವಜನಿಕ ರಜಾ ದಿನವೆಂದು ಘೋಚಿಸಿದರೆ ಪರೀಕ್ಷಾ ವೇಳಾ ಪಟ್ಟಿಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಅಭ್ಯರ್ಥಿಗಳು ಮೇಲಿನ ಅಂಶವನ್ನು ಗಮನಿಸಬೇಕು ಮತ್ತು ಇತ್ತೀಚಿನ ನವೀಕರಣಗಳಿಗಾಗಿ ಸಂಸ್ಥೆಯ ವೆಬ್ಸೈಟ್ www.icai.org ಗೆ ಭೇಟಿ ನೀಡಿ ಮಾಹಿತಿಯನ್ನು ಪಡೆಯಬಹುದಾಗಿದೆ.
ಸಿಎ ಪರೀಕ್ಷೆಗಳನ್ನು ದೇಶ ಎಲ್ಲಾ ರಾಜ್ಯಗಳಲ್ಲಿ ನಡೆಸಲಾಗುತ್ತದೆ. ಇದಲ್ಲದೆ ಈ ಪರೀಕ್ಷೆಯನ್ನು ಭಾರತದ ಹೊರಗೆ ಅಂದರೆ ವಿದೇಶಗಳಲ್ಲಿಯೂ ನಡೆಸಲಾಗುತ್ತದೆ. ಈ ಬಾರಿಯ ಸಿಎ ಪರೀಕ್ಷೆಗಳು ನೇಪಾಳದ ಕಠ್ಮಂಡುವಿನಿಂದ ದುಬೈ, ಅಬುದಾಬಿ, ರಿಯಾದ್, ದೋಹಾ, ಥಿಂಪು, ಕುವೈತ್, ಮಸ್ಕತ್, ಬಹ್ರೇನ್ ನಲ್ಲಿಯೂ ನಡೆಯಲಿದೆ.















