ತೇಜಸ್ವಿ ಸೂರ್ಯ ಬಿಜೆಪಿಯಲ್ಲಿ ಗುರುತಿಸಿಕೊಂಡಿರುವ ಯುವ ನಾಯಕ. ದಕ್ಷಿಣ ಲೋಕಸಭಾ ಕ್ಷೇತ್ರದ ಯುವ ಸಂಸದ. ಇದೀಗ ಹೊಸ ಜೀವನಕ್ಕೆ ಕಾಲಿಡುತ್ತಿದ್ದಾರೆ. ಯುವ ಸಂಸದರ ಮದುವೆ ಫಿಕ್ಸ್ ಆಗಿದೆ. ಈ ವಿಚಾರ ಕೇಳಿದೊಡನೆ ಹುಡುಗಿ ಯಾರೆಂಬ ಪ್ರಶ್ನೆ ಎಲ್ಲರನ್ನು ಕಾಡುತ್ತಿದೆ. ಅವರ ಬಗ್ಗೆ ಮಾಹಿತಿ ಇಲ್ಲಿದೆ. ಈಗಾಗಲೇ ಮದುವೆ ದಿನಾಂಕ ಕೂಡ ನಿಶ್ಚಯವಾಗಿದೆ.
ಸದ್ಯ ಯುವ ಸಂಸದ ತೇಜಸ್ವಿ ಸೂರ್ಯ ಮದುವೆಯಾಗುತ್ತಿರುವ ಆ ಹುಡುಗಿ ಒಳ್ಳೆಯ ಹಾಡುಗಾರ್ತಿ. ಚೆನ್ನೈ ಮೂಲದವರು. ಸಿವಶ್ರೀ ಸ್ಕಂದ ಪ್ರಸಾದ್ ಅವರ ಹೆಸರು. ಈಗಾಗಲೇ ಅವರು ಹಾಡಿರುವ ಹಲವು ಹಾಡುಗಳು ಹಿಟ್ ಲೀಸ್ಟ್ ಸೇರಿವೆ. ಸಿವಶ್ರೀ ಸ್ಕಂದ ಪ್ರಸಾದ್ ಉತ್ತಮ ಹಾಡುಗಳನ್ನು ಹಾಡುತ್ತಾರೆ. ಅದರಲ್ಲೂ ಹರಿಕಥೆ, ಭಜನೆಯನ್ನು ಮೈ.ರೆತು ಕೇಳುವಂತೆ ಹಾಡುತ್ತಾರೆ. ಸೈಕ್ಲಿಂಗ್, ವಾಕಾಥಾನ್ ಮೂಲಕವೂ ಗಮನ ಸೆಳೆದಿದ್ದಾರೆ.
ಸಿವಶ್ರೀ ಅವರ ಹಾಡುಗಳನ್ನು ಪ್ರಧಾನಿ ಮೋದಿಯವರು ಕೂಡ ಮೆಚ್ಚಿದ್ದರು. ಹೌದು ಕಳೆದ ವರ್ಷ ಸಿವಶ್ರೀ ಸ್ಕಂದ ಪ್ರಸಾದ್ ಹಾಡಿದ್ದಂತ ರಾಮಾಯಣ ಹಾಡಿಗೆ ಪ್ರಧಾನಿ ಮೋದಿ ಅವರೇ ಶಬ್ಬಾಶ್ ಎಂದಿದ್ದರು. ತಮ್ಮ ಟ್ವಿಟ್ಟರ್ ನಲ್ಲಿ ಪ್ರಶಂಸೆ ವ್ಯಕ್ತಪಡಿಸಿದ್ದರು. ಇದೀಗ ತೇಜಸ್ವಿ ಸೂರ್ಯ ಅವರು ಅದೇ ಹುಡುಗಿಯನ್ನು ವಿವಾಹವಾಗುತ್ತಿದ್ದಾರೆ. ತೇಜಸ್ವಿ ಸೂರ್ಯ ಬಿಜೆಪಿಯ ಯುವ ಸಂಸದ. ರಾಜಕೀಯ ಪ್ರವೇಶಕ್ಕು ಮುನ್ನ ಇವರು ಕಾನೂನು ಪದವಿ ಮುಗಿಸಿ, ವಕೀಲಿ ವೃತ್ತಿಯಲ್ಲಿ ಮುಂದುವರೆದಿದ್ದರು. ಬಳಿಕ ಬಿಜೆಪಿಯ ಸೋಷಿಯಲ್ ಮೀಡಿಯಾ ವಿಭಾಗದಲ್ಲಿ ಕೆಲಸ ಮಾಡಿದ್ದರು. ಹಾಗೇ ಬಿಜೆಪಿಯಲ್ಲಿ ಗುರುಸಿಕೊಂಡು ಸಂಸದರಾಗಿ ಬೆಳೆದಿದ್ದಾರೆ. ಮದುವೆ ನಿಶ್ಚಯವಾಗಿದ್ದು, ಹೊಸ ಬಾಳಿಗೆ ಜೊತೆಯಾಗಲು ಸಿವಶ್ರೀಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. 2025ರ ಮಾರ್ಚ್ 4ರಂದು ಮದುವೆ ನಿಶ್ಚಯವಾಗಿದೆ.