Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಮೋದಿಯವರಿಂದ ಪ್ರಶಂಸೆ ಪಡೆದಿದ್ದ ಹುಡುಗಿಯೊಂದಿಗೆ ತೇಜಸ್ವಿ ಸೂರ್ಯ ಮದುವೆ ನಿಶ್ಚಯ..!

---Advertisement---

ತೇಜಸ್ವಿ ಸೂರ್ಯ ಬಿಜೆಪಿಯಲ್ಲಿ ಗುರುತಿಸಿಕೊಂಡಿರುವ ಯುವ ನಾಯಕ. ದಕ್ಷಿಣ ಲೋಕಸಭಾ ಕ್ಷೇತ್ರದ ಯುವ ಸಂಸದ. ಇದೀಗ ಹೊಸ ಜೀವನಕ್ಕೆ ಕಾಲಿಡುತ್ತಿದ್ದಾರೆ. ಯುವ ಸಂಸದರ ಮದುವೆ ಫಿಕ್ಸ್ ಆಗಿದೆ. ಈ ವಿಚಾರ ಕೇಳಿದೊಡನೆ ಹುಡುಗಿ ಯಾರೆಂಬ ಪ್ರಶ್ನೆ ಎಲ್ಲರನ್ನು ಕಾಡುತ್ತಿದೆ. ಅವರ ಬಗ್ಗೆ ಮಾಹಿತಿ ಇಲ್ಲಿದೆ. ಈಗಾಗಲೇ ಮದುವೆ ದಿನಾಂಕ ಕೂಡ ನಿಶ್ಚಯವಾಗಿದೆ.

ಸದ್ಯ ಯುವ ಸಂಸದ ತೇಜಸ್ವಿ ಸೂರ್ಯ ಮದುವೆಯಾಗುತ್ತಿರುವ ಆ ಹುಡುಗಿ ಒಳ್ಳೆಯ ಹಾಡುಗಾರ್ತಿ. ಚೆನ್ನೈ ಮೂಲದವರು. ಸಿವಶ್ರೀ ಸ್ಕಂದ ಪ್ರಸಾದ್ ಅವರ ಹೆಸರು‌. ಈಗಾಗಲೇ ಅವರು ಹಾಡಿರುವ ಹಲವು ಹಾಡುಗಳು ಹಿಟ್ ಲೀಸ್ಟ್ ಸೇರಿವೆ. ಸಿವಶ್ರೀ ಸ್ಕಂದ ಪ್ರಸಾದ್ ಉತ್ತಮ ಹಾಡುಗಳನ್ನು ಹಾಡುತ್ತಾರೆ. ಅದರಲ್ಲೂ ಹರಿಕಥೆ, ಭಜನೆಯನ್ನು ಮೈ.ರೆತು ಕೇಳುವಂತೆ ಹಾಡುತ್ತಾರೆ. ಸೈಕ್ಲಿಂಗ್, ವಾಕಾಥಾನ್ ಮೂಲಕವೂ ಗಮನ ಸೆಳೆದಿದ್ದಾರೆ.

ಸಿವಶ್ರೀ ಅವರ ಹಾಡುಗಳನ್ನು ಪ್ರಧಾನಿ ಮೋದಿಯವರು ಕೂಡ ಮೆಚ್ಚಿದ್ದರು. ಹೌದು ಕಳೆದ ವರ್ಷ ಸಿವಶ್ರೀ ಸ್ಕಂದ ಪ್ರಸಾದ್ ಹಾಡಿದ್ದಂತ ರಾಮಾಯಣ ಹಾಡಿಗೆ ಪ್ರಧಾನಿ ಮೋದಿ ಅವರೇ ಶಬ್ಬಾಶ್ ಎಂದಿದ್ದರು. ತಮ್ಮ ಟ್ವಿಟ್ಟರ್ ನಲ್ಲಿ ಪ್ರಶಂಸೆ ವ್ಯಕ್ತಪಡಿಸಿದ್ದರು. ಇದೀಗ ತೇಜಸ್ವಿ ಸೂರ್ಯ ಅವರು ಅದೇ ಹುಡುಗಿಯನ್ನು ವಿವಾಹವಾಗುತ್ತಿದ್ದಾರೆ. ತೇಜಸ್ವಿ ಸೂರ್ಯ ಬಿಜೆಪಿಯ ಯುವ ಸಂಸದ. ರಾಜಕೀಯ ಪ್ರವೇಶಕ್ಕು ಮುನ್ನ ಇವರು ಕಾನೂನು ಪದವಿ ಮುಗಿಸಿ, ವಕೀಲಿ ವೃತ್ತಿಯಲ್ಲಿ ಮುಂದುವರೆದಿದ್ದರು. ಬಳಿಕ ಬಿಜೆಪಿಯ ಸೋಷಿಯಲ್ ಮೀಡಿಯಾ ವಿಭಾಗದಲ್ಲಿ ಕೆಲಸ ಮಾಡಿದ್ದರು. ಹಾಗೇ ಬಿಜೆಪಿಯಲ್ಲಿ ಗುರುಸಿಕೊಂಡು ಸಂಸದರಾಗಿ ಬೆಳೆದಿದ್ದಾರೆ. ಮದುವೆ ನಿಶ್ಚಯವಾಗಿದ್ದು, ಹೊಸ ಬಾಳಿಗೆ ಜೊತೆಯಾಗಲು ಸಿವಶ್ರೀಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. 2025ರ ಮಾರ್ಚ್ 4ರಂದು ಮದುವೆ ನಿಶ್ಚಯವಾಗಿದೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment