Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

---Advertisement---

ಟಿಬಿ ಡ್ಯಾಂ ಪರಿಸ್ಥಿತಿ : ಮೊದಲೇ ಗೇಟ್ ಗಳು ದುರಸ್ಥಿ, ಒಳ ಹರಿವು ಹೆಚ್ಚಳ.. ಸುತ್ತಮುತ್ತಲ ಜನರಿಗೆ ಎಚ್ಚರಿಕೆಯ ಸಂದೇಶ

---Advertisement---

 

ರಾಜ್ಯದಲ್ಲಿ ನಿರಂತರ ಮಳೆಯಿಂದಾಗಿ ಹಲವು ಜಲಾಶಯಗಳಿಗೆ ಒಳ ಹರಿವು ಹೆಚ್ಚಳವಾಗಿದೆ. ತುಂಗಾ ಭದ್ರಾ ಡ್ಯಾಂಗೂ ಒಳ ಹರಿವು ಹೆಚ್ಚಳವಾಗಿದೆ. ಆದರೆ ಇದರಿಂದ ಸಮಸ್ಯೆಯೂ ಆಗುವ ಸಾಧ್ಯತೆ ಇದೆ. ವರದಾ ನದಿಯಿಂದ ಹೆಚ್ಚಿನ ನೀರು ಹರಿದು ಬರುತ್ತಿರುವುದರಿಂದ ಮಧ್ಯಾಹ್ನ 12 ಗಂಟೆಯ ನಂತರ 40-70 ಸಾವಿರ ಕ್ಯೂಸೆಕ್ ನೀರು ನದಿಗೆ ಹರಿಸುವ ಕುರಿತು ತುಂಗಭದ್ರ ಮಂಡಳಿ ಅಲರ್ಟ್ ಸಂದೇಶವನ್ನ ನೀಡಿದೆ. ರೈತರ ಜೀವನಾಡಿ ತುಂಗ ಭದ್ರಾ ಜಲಾಶಯಕ್ಕೆ ಕಳೆದ ಕೆಲ ದಿನಗಳಿಂದ ತಗ್ಗಿದ್ದ ಒಳ ಹರಿವು ಮತ್ತೆ ಹೆಚ್ಚಳವಾಗುತ್ತಿದೆ.

ಜಲಾಶಯದ ಗರಿಷ್ಠ ಮಟ್ಟ 1633 ಅಡಿ ಆಗಿದ್ದು, ಇಂದಿನ ಮಟ್ಟ 1626 ಅಡಿಯಾಗಿದೆ. ಇಂದಿನ ನೀರಿನ ಸಂಗ್ರಹ 79.798 ಟಿಎಂಸಿ ಇದೆ. ತುಂಗಭದ್ರಾ ಡ್ಯಾಂನಲ್ಲಿ ಹಲವು ಗೇಟ್ ಗಳು ಸಮಸ್ಯೆಯಾಗಿದ್ದು, ರಿಪೇರಿ ಮಾಡದೆ ಸರ್ಕಾರ ರೈತರನ್ನ ನಿರ್ಲಕ್ಷ್ಯ ಮಾಡುತ್ತಿದೆ ಎಂದು ಆರ್.ಅಶೋಕ್ ಅವರು ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ. ತುಂಗಭದ್ರಾ ಜಲಾಶಯದ 19ನೇ ಗೇಟ್ ಕಿತ್ತೋಗಿ ಒಂದು ವರ್ಷ ಕಳೆದಿದೆ. ಆದರೆ ಡ್ಯಾಂ ಕ್ರಸ್ಟ್ ಗೇಟ್ ನಿರ್ಮಾಣದತ್ತ ಸರ್ಕಾರ ಮನಸ್ಸು ಮಾಡಿಲ್ಲ. ಹಣ ಬಿಡುಗಡೆಯಾಗದ ಕಾರಣ ಟೆಂಡರ್ ಕರೆದು ಕೆಲಸ ಮಾಡುವುದಕ್ಕೂ ಆಗಿಲ್ಲ. ಕ್ರಸ್ಟ ಗೇಟ್ ಅಳವಡಿಸಿರುವುದರಿಂದ ರೈತರ ಜಮೀನುಗಳಿಗೆ ಹರಿಸಬೇಕಾಗಿದ್ದ 188 ಟಿಎಂಸಿ ನೀರು ಆಂಧ್ರಪ್ರದೇಶದ ಪಾಲಾಗುತ್ತಿದೆ ಎಂದು ವಿಪಕ್ಷ ನಾಯಕ ಆರ್ ಅಶೋಕ್ ಅವರು ಕೂಡ ಆಕ್ರೋಶ ಹೊರ ಹಾಕಿದ್ದಾರೆ. ಒಟ್ಟಾರೆ ತುಂಗಭದ್ರಾ ಡ್ಯಾಂನ ಒಳಹರಿವು ಹೆಚ್ಚಳವಾದ ಕಾರಣ, ಸುತ್ತಮುತ್ತಲ ಪ್ರದೇಶದ ಜನರಿಗೆ ಎಚ್ಚರಿಕೆಯನ್ನು ನೀಡಲಾಗಿದೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...