Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಕನ್ನಡ ಸಾಹಿತ್ಯದಲ್ಲಿ ಮೋಡಿ ಮಾಡಿದ ತರಾಸು : ಶಾ.ಮಂ.ಕೃಷ್ಣರಾಯ

Facebook
Twitter
Telegram
WhatsApp

ಚಿತ್ರದುರ್ಗ.(ಮೇ.30) : ಕನ್ನಡ ಸಾಹಿತ್ಯದಲ್ಲಿ ಮೋಡಿ ಮಾಡಿದ ಸಾಹಿತಿ ತರಾಸು ಎಂದು ಹಿರಿಯ ಸಾಹಿತಿ ಶಾ.ಮಂ.ಕೃಷ್ಣರಾಯ ಹೇಳಿದರು.

ನಗರದ ತರಾಸು ರಂಗಮಂದಿರದಲ್ಲಿ ಸೋಮವಾರ ಕರ್ನಾಟಕ ಸಾಹಿತ್ಯ ಅಕಾಡೆಮಿ ವತಿಯಿಂದ ತರಾಸು ಅವರ ಜನ್ಮಶತಮಾನೋತ್ಸವದ ಅಂಗವಾಗಿ ತ.ರಾ.ಸು ವ್ಯಕ್ತಿತ್ವ ಮತ್ತು ಸಾಹಿತ್ಯ ಎರಡು ದಿನಗಳ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.

ಇಂಗ್ಲಿಷ್ ಸಾಹಿತ್ಯಕ್ಕೆ ಜೋತು ಬಿದ್ದ ಸಂದರ್ಭದಲ್ಲಿ ಅನಕೃ, ತರಾಸು, ಚದುರಂಗ, ನರಸಿಂಹ ಶಾಸ್ತ್ರಿಗಳು, ಬಸವರಾಜ ಕಟ್ಟಿಮನಿ ಸೇರಿದಂತೆ ಅನೇಕರು ಸಾಹಿತ್ಯ ರಂಗಕ್ಕೆ ಬಂದು ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದರು ಎಂದು ಹೇಳಿದರು.
ತರಾಸು ಎಂಬ ಲೇಖಕ ನಮ್ಮ ನಿಮ್ಮ ಹಾಗೆ ಚಿತ್ರದುರ್ಗ ಬೀದಿಯಲ್ಲಿ ನಡೆದಾಡಿದ್ದಾರೆ.

ಅವರು ತುಂಟರ ಗುಂಪಿನ ಅಧ್ಯಕ್ಷರಾಗಿದ್ದವರು. ಆ ಕಾಲದಲ್ಲಿ ಅವರನ್ನೂ ಯಾರು ಮಾತನಾಡಿಸುತ್ತಿರಲಿಲ್ಲ. ಚಿತ್ರದುರ್ಗ ಕೋಟೆಯಲ್ಲಿ ಕುಳಿತು ಪುಸ್ತಕ ಓದುತ್ತಿದ್ದರು. ಹುಲ್ಲೂರು ಶ್ರೀನಿವಾಸ ಜೋಯಿಸರು ಅವರನ್ನು ಕರೆದುಕೊಂಡು ಹೋಗುತ್ತಿದ್ದರು. ಹೀಗೆ ತರಾಸು ಬೆಳೆದು ಅವರನ್ನೂ ಇಂದು ಆರಾಧನೆ ಮಾಡುತ್ತಿದ್ದೇವೆ. ತರಾಸು ಸಾಹಿತ್ಯವನ್ನೂ ಎಲ್ಲರೂ ಓದಬೇಕು. ಕನ್ನಡ ಭಾಷೆ ಸುಮಧುರವಾಗಿದ್ದು, ಕನ್ನಡ ಸಾಹಿತ್ಯದಲ್ಲಿ ತರಾಸು ಅದ್ಭುತವಾದ ಶೈಲಿ ನಿರ್ಮಾಣ ಮಾಡಿದ್ದಾರೆ. ಕನ್ನಡ ಭಾಷೆಯನ್ನು ಮಿತವಾಗಿ ಸೊಗಸಾಗಿ ಹಾಗೂ ಕನ್ನಡ ಗದ್ಯವನ್ನು ಸುಲಲಿತವಾಗಿ ಬಳಕೆ ಮಾಡಿದ್ದಾರೆ ಎಂದರು.

ತರಾಸು ಸಾಹಿತ್ಯದಲ್ಲಿ ಸ್ಥಾಯಿಭಾವ, ಮನುಷ್ಯನ ಬದುಕಿನ ಚಿತ್ರಣ, ಬದುಕಿನ ಸಮಗ್ರತೆ ಇರುವುದನ್ನು ಕಾಣಬಹುದು. ವಿದ್ಯಾರ್ಥಿಗಳು ಯಾವುದೇ ಕಾರಣಕ್ಕೂ ಓದುವುದನ್ನು ಬಿಡಬಾರದು. ಪುಸ್ತಕವು ಮನಸ್ಸಿಗೆ, ಆತ್ಮಕ್ಕೆ ಸಂತೋಷ ಹಾಗೂ ಜ್ಞಾನವನ್ನು ವಿಕಾಸಗೊಳಿಸಲಿದೆ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಮರೆಯಲಾಗದ ಹೆಸರು ತರಾಸು. ತರಾಸು. ಸಾಹಿತ್ಯ ಅಕಾಡೆಮಿ ವತಿಯಿಂದ ತರಾಸು ಅವರು ಜನ್ಮ ಶತಮಾನೋತ್ಸವದ ಅಂಗವಾಗಿ ವಿಚಾರ ಸಂಕಿರಣ ಹಮ್ಮಿಕೊಂಡಿರುವುದು ಸಂತಸದ ಸಂಗತಿ. ಅನಕೃ, ವೆಂಕಣ್ಣಯ್ಯ, ದೇವನೂರು ನರಸಿಂಹಶಾಸ್ತ್ರಿ ಹಾಗೂ ತರಾಸು ಅವರು ನಮ್ಮ ನಡುಗೆ ಇಲ್ಲದೇ ಇದ್ದರೂ ಅವರ ಸಾಹಿತ್ಯದ ಮೂಲಕ ಬದುಕಿದ್ದು, ಅವರ ಸ್ಮರಣಿ ಸ್ಮಾಗತಾರ್ಹ ಎಂದರು.

ಶಕ್ತಿಯುತವಾದ ಸಾಹಿತಿ ತರಾಸು ಅಂತಹವರು ಚಿತ್ರದುರ್ಗದಂತಹ ವೀರಭೂಮಿ, ಪುಣ್ಯಭೂಮಿಯಲ್ಲಿ ಬದುಕಿದವರು ಎಂಬುದು ಹೆಮ್ಮೆಯ ಸಂಗತಿ. ತರಾಸು ಅವರು ಬೃಹತ್ ಕಾದಂಬರಿಯಾದ ದುರ್ಗಾಸ್ತಮಾನ ಕೇವಲ 130 ದಿನಗಳಲ್ಲಿ ಬರೆದರು.  ಈ ಕಾದಂಬರಿಯಲ್ಲಿ ಬಳಸಿರುವ ಯುದ್ಧ ತಂತ್ರಗಳನ್ನು ಓದಿದಾಗ ಅಚ್ಚರಿ ಮೂಡಲಿದೆ ಎಂದರು.

ತರಾಸು ಹೆಸರಿನಲ್ಲಿ ಪ್ರತಿಷ್ಠಾನ, ಅಧ್ಯಯನ ಪೀಠ ಹಾಗೂ ಸ್ಮಾರಕವನ್ನೂ ಇದುವರೆಗೂ ಸ್ಥಾಪನೆ ಮಾಡಲಿಕ್ಕೆ ಆಗಿಲ್ಲ ಎಂಬ ಬೇಸರ ವ್ಯಕ್ತಪಡಿಸಿದ ಅವರು, ತರಾಸು ಅವರು ರಾಜ್ಯದಲ್ಲಿ ಮುದ್ರಣವಾಗುವ ಎಲ್ಲ ಪುಸ್ತಕಗಳು ಒಂದೇಸೂರಿನಡಿ ಲಭ್ಯವಾಗಬೇಕು. ಸಾಹಿತ್ಯ ಅಧ್ಯಯನಕ್ಕೆ ಒಂದು ಪ್ರಶಾಂತವಾದ ಸ್ಥಳಬೇಕು ಎಂಬ ಕನಸು ಹೊಂದಿದರು. ತರಾಸು ಅವರ ಈ ಕನಸನ್ನು ರಾಜ್ಯ ಸರ್ಕಾರ ನನಸು ಮಾಡಿದರೆ ತರಾಸು ಅವರಿಗೆ ಮರುಜೀವ ನೀಡಿದಂತೆ ಎಂದು ಅಭಿಪ್ರಾಯಪಟ್ಟರು.

ತರಾಸು ಅವರ ಸುಪುತ್ರಿ ಪೂರ್ಣಿಮಾ ಸುಂದರ್ ಮಾತನಾಡಿ, ತರಾಸು ಅವರ ಸಾಹಿತ್ಯ ವಿದ್ಯಾರ್ಥಿಗಳಿಗೆ ಹಾಗೂ ಸಾಮಾನ್ಯ ಜನರಿಗೆ ತಿಳಿಯಬೇಕು. ಈ ನಿಟ್ಟಿನಲ್ಲಿ ತರಾಸು ಅವರ ಹೆಸರಿನಲ್ಲಿ ಪ್ರತಿಷ್ಠಾನ ಸ್ಥಾಪನೆಯಾಗಬೇಕು ಎಂದು ಆಶಯ ವ್ಯಕ್ತಪಡಿಸಿದರು.

ಹಿರಿಯ ಸಂಶೋಧಕ ಡಾ.ಬಿ.ರಾಜಶೇಖರಪ್ಪ ಮಾತನಾಡಿ, ತರಾಸು ಅವರು ಕೇವಲ ಚಿತ್ರದುರ್ಗಕ್ಕೆ ಮಾತ್ರವಲ್ಲದೇ ಇಡೀ ರಾಜ್ಯಕ್ಕೆ ಸೇರಿದವರು. ತರಾಸು ಕಾದಂಬರಿ ಮಾತ್ರವಲ್ಲದೇ ಸಣ್ಣಕಥೆ, ನಾಟಕ, ಚಲನಚಿತ್ರಗೀತೆ, ಪ್ರಬಂಧ ರಚನೆ ಮಾಡಿದ್ದಾರೆ. ಕನ್ನಡದ ಹಿತಕ್ಕೆ ಧಕ್ಕೆ ಬಂದಾಗ ಮುಂಚೂಣಿಯಲ್ಲಿ ಕೆಲಸ ಮಾಡಿದ್ದಾರೆ.

ತರಾಸು ಅವರದು ಬಹುಮುಖ ಆಸಕ್ತಿ ಹಾಗೂ ಅಪರೂಪದ ಸದಾ ಪ್ರಾತಃಸ್ಮರಣಿಯ ವ್ಯಕ್ತಿತ್ವ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ತರಾಸು ಅವರು ಈಜಿಪ್ಟ್‍ನ ಪಿರಮಿಡ್, ದಕ್ಷಿಣ ಅಮೇರಿಕಾದ ಅಂಡಿಸ್ ಪರ್ವತದ ಪ್ರದೇಶದ ಚಿತ್ರಗಳು, ಹೊಯ್ಸಳರ ನೆಲೆಗಳು, ಸಿಂಧೂ ನಾಗರಿಕತೆ ಸೇರಿದಂತೆ ಜಗತ್ತಿನ ಎಲ್ಲ ವಿಚಾರಗಳ ಬಗ್ಗೆಯೂ ಮಾತನಾಡುತ್ತಿದ್ದರು.

ತರಾಸು ಅವರ ಸಾಹಿತ್ಯವೂ ಮೃದು ಭಾಷೆ ಹಾಗೂ ಅತ್ಯಂತ ಕಠಿಣ, ಕಠೋರ ಭಾಷೆಯನ್ನೂ ಬಳಸುತ್ತಿದ್ದರು. ಇದು ತರಾಸು ಅವರ ಹಾಗೂ ಕನ್ನಡ ಭಾಷೆಯ ಶೈಲಿಯೂ  ಹೌದು ಎಂದರು.

ತರಾಸು ಅವರ ದುರ್ಗಾಸ್ತಮಾನ ಕಾದಂಬರಿಯಯ ಹೆಸರೇ ರೋಮಾಂಚನಕಾರಿ. ರಕ್ತರಾತ್ರಿ ಸೇರಿದಂತೆ ಅವರ ಕಾದಂಬರಿಗಳಲ್ಲಿ ಕನ್ನಡ ಬೆಳೆಸುವ ದೃಷ್ಠಿಯಿಂದ ಮೆಚ್ಚುವ ಅಂಶಗಳಿವೆ. ಅವರ ಕಾದಂಬರಿಗು ಜನಸಾಮಾನ್ಯರ ಮೇಲೆ ಪ್ರಭಾವ ಬೀರಿದ್ದು, ಜನರ ಮನಸ್ಸು ಮುಟ್ಟಿವೆ. ಇದರ ಜೊತೆಗೆ ವ್ಯಾಪಕವಾದ ವಿಶೇಷ ಪರಿಣಾಮವನ್ನೂ ಬೀರಿವೆ ಎಂದು ಹೇಳಿದರು.

ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ.ಬಿ.ವಿ.ವಸಂತಕುಮಾರ್ ಮಾತನಾಡಿ, ಸಾಹಿತಿ ಮತ್ತು ಸಾಹಿತ್ಯ ಜಾತಿ-ಜಾತಿಗಳ ನಡುವೆ, ಮತ-ಮತಗಳ ನಡುವೆ, ಪ್ರಾಂತ-ಪ್ರಾಂತಗಳ ನಡುವೆ, ದೇಶ-ದೇಶಗಳ ನಡುವೆ ಹಾಗೂ ಭೂತ-ಭವಿಷ್ಯಗಳ ನಡುವೆ ಸೇತುವೆಯಾಗಬೇಕು. ಯಾವುದೇ ಕಾರಣಕ್ಕೂ ಕಂದಕವಾಗಬಾರದು. ಈ ನಿಟ್ಟಿನಲ್ಲಿ ತರಾಸು ಸೇತುವೆಯಾಗಿದ್ದಾರೆ. ತರಾಸು ಸಾಹಿತ್ಯ ಮತ್ತು ವ್ಯಕ್ತಿತ್ವನ್ನು ನಮ್ಮ ಒಳಗೆ ತುಂಬಿಕೊಳ್ಳಬೇಕಾಗಿರುವುದು ಇಂದಿನ ವರ್ತಮಾನದ ಅಗತ್ಯವಾಗಿದೆ ಎಂದು ಅಭಿಪ್ರಾಯಪಟ್ಟರು.

ತರಾಸು ಎಂಬ ಲೇಖಕರನ್ನು ಜಾತಿ, ಮತದಿಂದಾಗಲಿ, ಪ್ರಾಂತ್ಯದಿಂದಾಗಲಿ ಗುರುತಿಸಲು ಸಾಧ್ಯವಿಲ್ಲ. ತರಾಸು ಅವರ ಜೀವ ಜಾನುಕಲ್ಲಿನ ನಾಗವ್ವ ಓಬತಿ, ಮದಕರಿ ನಾಯಕ, ಟಿಪ್ಪು, ಹೈದರಾಲಿ ಜೊತೆಗೂಈ ಕನೆಕ್ಟ್ ಆಗಿದೆ. ಒಳ್ಳೆಯದನ್ನು ಉಳಿಸುವುದಕ್ಕೆ ಹಾಗೂ ಕೆಟ್ಟದನ್ನು ಅಳಿಸುವುದಕ್ಕೆ ಕಾರಣವಾಗಿದೆ ಎಂದರು.

ತರಾಸು ಅವರ ಸಮಗ್ರ ಸಂಪುಟ ಹೊರತರಲು ರಾಜ್ಯ ಸರ್ಕಾರ ರೂ.18 ಲಕ್ಷ ಅನುದಾನವನ್ನು ಬಿಡುಗಡೆ ಮಾಡಿದೆ. ರಾಜ್ಯ ಸರ್ಕಾರವು ಸಾಂಸ್ಕøತಿಕ ಜವಾಬ್ದಾರಿಯನ್ನು ಹೊತ್ತಿದೆ ಎಂದು ಹೇಳಿದರು.

ದಾವಣಗೆರೆ ವಿಶ್ವವಿದ್ಯಾನಿಲಯ ಚಿತ್ರದುರ್ಗ ಸ್ನಾತಕೋತ್ತರ ಅಧ್ಯಯನ ಕೇಂದ್ರದ ನಿರ್ದೇಶಕ ಡಾ.ಹೆಚ್.ವಿಶ್ವನಾಥ್, ವೆಂಕಟೇಶ್ವರ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಇ.ರುದ್ರಮುನಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ರಿಜಿಸ್ಟ್ರಾರ್ ಎನ್.ಕರಿಯಪ್ಪ, ಸಂಘಟಕರಾದ ಡಾ.ಜೆ.ಕರಿಯಪ್ಪ ಮಾಳಿಗೆ, ಪ್ರೊ.ಕೆ.ರಾಜೀವಲೋಚನ, ಡಾ.ಹೆಚ್.ಜಿ.ವಿಜಯಕುಮಾರ್ ಸೇರಿದಂತೆ ಮತ್ತಿತರರು ಇದ್ದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ರಾತ್ರಿ ಮಲಗಿದ ನಂತರ ಈ ಲಕ್ಷಣಗಳು ಕಾಣಿಸಿಕೊಂಡರೆ ಮಧುಮೇಹ ಇದ್ದಂತೆ..!

ಸುದ್ದಿಒನ್ : ಆರೋಗ್ಯ ಸಮಸ್ಯೆಗಳಲ್ಲಿ ಮಧುಮೇಹವೂ ಒಂದು. ಈ ಸಮಸ್ಯೆ ಬಂದರೆ ಸಾಕು ಇನ್ನುಳಿದ ಸಮಸ್ಯೆಗಳು ಒಂದರ ಹಿಂದೆ ಒಂದರಂತೆ ಬರುತ್ತಲೇ ಇರುತ್ತವೆ. ರಕ್ತದಲ್ಲಿನ ಸಕ್ಕರೆ ಅಂಶ ಹೆಚ್ಚಾದರೆ ಮಧುಮೇಹ ಇರುವವರಿಗೆ ಆರೋಗ್ಯದ ಸಮಸ್ಯೆ

ಈ ರಾಶಿಯವರು ಪರಸ್ಪರ ಇಷ್ಟಪಟ್ಟವರ ಜೊತೆ ವಿರೋಧದ ನಡೆವೆನು ಮದುವೆ ಸಂಭವ

ಈ ರಾಶಿಯವರು ಪರಸ್ಪರ ಇಷ್ಟಪಟ್ಟವರ ಜೊತೆ ವಿರೋಧದ ನಡೆವೆನು ಮದುವೆ ಸಂಭವ. ಈ ರಾಶಿಗಳಿಗೆ ಆಕಸ್ಮಿಕ ಧನ ಆಗಮನದಿಂದ ತುಂಬಾ ಖುಷಿ.   ಶನಿವಾರ ರಾಶಿ ಭವಿಷ್ಯ -ಮೇ-11,2024 ಸೂರ್ಯೋದಯ: 05:49, ಸೂರ್ಯಾಸ್ತ :

ಚಿತ್ರದುರ್ಗದಲ್ಲಿ ಸುರಿಯುತ್ತಿರುವ ಮಳೆ : ತಂಪಾದ ಇಳೆ

  ಸುದ್ದಿಒನ್, ಚಿತ್ರದುರ್ಗ, ಮೇ.10 : ಮಳೆಗಾಗಿ ಕಾದಿದ್ದ ಕೋಟೆ ನಾಡಿನ ಜನತೆಗೆ ಮಳೆರಾಯ ಕೃಪೆ ತೋರಿದ್ದಾನೆ. ಬುಧವಾರ ಸ್ವಲ್ಪ ಮಳೆ ಬಂದಿತ್ತು. ಆದರೆ ಇಂದು (ಶುಕ್ರವಾರ) ರಾತ್ರಿ 10 ಗಂಟೆ ಸುಮಾರಿಗೆ ಮಳೆ

error: Content is protected !!