ಬೆಂಗಳೂರು: ಮೈಸೂರು ಸ್ಯಾಂಡಲ್ ಸೋಪ್ ನ ಬ್ರ್ಯಾಂಡ್ ಅಂಬಾಸಿಡರ್ ಆಗಿರುವಂತ ತಮನ್ನಾ ಬಾಟಿಯಾಗೆ ಸರ್ಕಾರ ಕೋಟ್ಯಾಂತರ ರೂಪಾಯಿ ನೀಡಿದೆ. ಆದರೆ ರಾಜ್ಯದಲ್ಲಿ ವಿಧವಾ ವೇತನ ಪೆಂಡಿಂಗ್ ಇದೆ. ಈ ಸಂಬಂಧ ಸದನದಲ್ಲಿ ಬಿಜೆಪಿ ನಾಯಕ ಶರಣು ಸಲಗಾರ ವಿಚಾರವನ್ನು ಪ್ರಸ್ತಾಪ ಮಾಡಿರೋದಲ್ಲದೆ, ತಮನ್ನಾ ವಿಚಾರವನ್ನು ತೆಗೆದಿದ್ದಾರೆ. ಅವರಿಗೆ ಐದು ಕೋಟಿ ಕೊಡೋದಕ್ಕೆ ಆಗುತ್ತೆ, ವಿಧವೆಯರಿಗೆ ಕೊಡೋಕೆ ಆಗಲ್ವಾ ಎಂದು ಪ್ರಶ್ನೆ ಮಾಡಿದ್ದಾರೆ.
ತಮನ್ನಾ ಬಾಟಿಯಾಗೆ ಐದು ಕೋಟಿ ಅರ್ಜೆಂಟ್ ಹಾಕ್ತೀರಿ. ಯಾರೂ ವಿಧವೆಯರಾಗಿದ್ದಾರೆ, ರೈತರ ಹೆಂಡ್ರು ಅವರಿಗೆ ಐದು ಮುಂದಿನ ದಿನಗಳಲ್ಲಿ ಹಾಕ್ಬೇಕು ಅಂತ ನಾನ್ ಕೈ ಮನವಿ ಮಾಡ್ತೇನೆ. ಅಧ್ಯಕ್ಷರೇ ಇವತ್ತು ಶಾಲಾ ಶಿಕ್ಷಣ, ನಾನು ಪ್ರೈಮರಿ ಸ್ಕೂಲ್ ಟೀಚರ್ ಇದ್ದೆ. ಆ ಕೆಲಸ ಮಾಡಿದ್ದೀನಿ. ನಾವೂ ಕಲ್ಯಾಣ ಕರ್ನಾಟಕ ಭಾಗದವರು. ನಾವ್ಯಾರು ಹುಟ್ಟುತ್ತಲೇ ದಡ್ಡರಿಲ್ಲ. ಬಹಳ ಶ್ಯಾಣೆ ಇದ್ದೀವಿ ನಾವು ಅಂತೇಳು ಬಹಳ ಹೆಮ್ಮೆ ಇದೆ ನಮಗೆ.
ಯುಪಿಎಸ್ಸಿನಲ್ಲೂ ಯಾದಗಿರಿಯವರು ನಾಲ್ಕು ಜನ ಪಾಸ್ ಆಗಿದ್ದಾರೆ. ಇನ್ನೊಂದು ಭಯಾನಕ ಅನ್ಸಿದ್ದು ಏನಂದ್ರೆ, ನಮ್ಮ ಕಡೆ ಸರ್ಕಾರಿ ಶಾಲೆಯೊಳಗಾ ಏಳು – ಎಂಟನೇ ತರಗತಿ ಮಕ್ಕಳಿಗೆ ಗುಣಕಾರ, ಭಾಗಕಾರ ಬರೂದಿಲ್ಲ ಅಂತ ಹೇಳಿ ವರದಿ ಮಾಡಿದ್ದಾರೆ. ಅವರು 75% ಅಂದಾರ, ನಾನೇಳ್ತೀನಿ ಬರೀ 45% ಅಂತ. ನೋಡಿ ಎಂಥಾ ಶಿಕ್ಷಣ. ನಮ್ಮಲ್ಲೂ ಆ ಸಾಮರ್ಥ್ಯ ಇದೆ. ಆದರೆ ಸೌಲಭ್ಯಗಳಿಲ್ಲ. ನಮ್ಮಲ್ಲಿ ಒಳ್ಳೊಳ್ಳೆ ಶಾಲೆಗಳಿಲ್ಲ. ನಮ್ಮ ಮಕ್ಕಳು ಏನು ಮಾಡ್ಬೇಕು ಅಧ್ಯಕ್ಷರೆ ಅವರಿಗೆ ಭಾಗ್ಯವಿಲ್ಲ ಎಂದು ಬೇಸರ ಹೊರ ಹಾಕಿದ್ದಾರೆ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.



















