ಸುದ್ದಿಒನ್, ಚಿತ್ರದುರ್ಗ, ಜುಲೈ. 19 : ಎಸ್.ಎಸ್.ಎಲ್.ಸಿ. ಹಾಗೂ ದ್ವಿತೀಯ ಪಿ.ಯು.ಸಿ.ಯಲ್ಲಿ 2024-25 ನೇ ಸಾಲಿನಲ್ಲಿ ಅತಿ ಹೆಚ್ಚಿನ ಅಂಕಗಳನ್ನು ಗಳಿಸಿರುವ ನಗರದ ವಿದ್ಯಾ ನಗರದಲ್ಲಿ ವಾಸಿಸುವ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪುರಸ್ಕರಿಸಲು ಅರ್ಜಿ ಆಹ್ವಾನಿಸಲಾಗಿದೆ.
ವಿದ್ಯಾನಗರ ಕ್ಷೇಮಾಭಿವೃದ್ಧಿ ಸಂಘ (ರಿ.) ಇವರ ವತಿಯಿಂದ ಗಣೇಶೋತ್ಸವದ ಸಂದರ್ಭದಲ್ಲಿ 2024-25ನೇ ಶೈಕ್ಷಣಿಕ ವರ್ಷದಲ್ಲಿ ಎಸ್.ಎಸ್.ಎಲ್.ಸಿ. ಹಾಗೂ ದ್ವಿತೀಯ ಪಿ.ಯು.ಸಿ.ಯಲ್ಲಿ ಉನ್ನತ ಶ್ರೇಣಿಯಲ್ಲಿ (ಶೇಕಡ 85ರಷ್ಟು ಅಂಕಗಳು) ಉತ್ತೀರ್ಣದ ವಿದ್ಯಾನಗರದ ಮಕ್ಕಳಿಗೆ ಪ್ರತಿಭಾ ಪುರಸ್ಕಾರವನ್ನು ಹಮ್ಮಿಕೊಳ್ಳಲಾಗಿದೆ. ಯಾವುದೇ ವಿಷಯದಲ್ಲಿ ಶೇಕಡಾ 100 ಅಂಕಗಳಿಸಿದ ವಿದ್ಯಾರ್ಥಿಗಳಿಗೆ ವಿಶೇಷ ಬಹುಮಾನ ನೀಡಲಾಗುವುದು.
ಅರ್ಹ ವಿದ್ಯಾರ್ಥಿಗಳು ತಮ್ಮ ಆಧಾರ್ ಕಾರ್ಡ್ ಜೆರಾಕ್ಸ್ ಪಾಸ್ಫೋರ್ಟ್ ಅಳತೆಯ ಫೋಟೊ, ದೂರವಾಣಿ ಸಂಖ್ಯೆ ಹಾಗೂ ಅಂಕಪಟ್ಟಿಯ ಜೆರಾಕ್ಸ್ ನೊಂದಿಗೆ ದಿನಾಂಕ 10-08-2025ರೊಳಗೆ ಕೆಳಕಂಡವರನ್ನು ಸಂಪರ್ಕಿಸಿ, ವಿವಗಳನ್ನು ತಲುಪಿಸಬೇಕೆಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಂಪರ್ಕಿಸಿ :
ವಿದ್ಯಾನಗರ ಕ್ಷೇಮಾಭಿವೃದ್ಧಿ ಸಂಘ (ರಿ.)
2ನೇ ಮುಖ್ಯರಸ್ತೆ, 5ನೇ ಅಡ್ಡರಸ್ತೆ, ವಿದ್ಯಾನಗರ, ಚಿತ್ರದುರ್ಗ 577 502
ಟಿ.ಸಿ. ಜ್ಞಾನಮೂರ್ತಿ : 94499 74004
ಟಿ. ವೀರೇಶ್ : 98452 64652
ಟಿ. ಮಂಜುನಾಥ್ : 98863 97511
ಶ್ರೀಮತಿ ವೀಣಾ ಜಯರಾಮ್ : 94493 37944


