ಸಿಹಿ ಗೆಣಸನ್ನ ಸಂಕ್ರಾಂತಿ ಒಂದಿನ ತಿಂದರೆ ಸಾಲದು : ಮೂಳೆ, ಚರ್ಮ, ನರಗಳ ಬೆಳವಣಿಗೆಗೆ ಸದಾ ಸೇವಿಸಿ

1 Min Read

ಕೆಲವೊಂದು ಆಹಾರಗಳನ್ನ ಕೆಲವೊಂದು ದಿನಕ್ಕಷ್ಟೇ ಸೀಮಿತ ಮಾಡಿಕೊಂಡಿರುತ್ತೇವೆ. ಹಾಗೇ ಸಿಹಿ ಗೆಣಸನ್ನ ಸಾಮಾನ್ಯವಾಗಿ ಸಂಕ್ರಾಂತಿ ಹಬ್ಬದಂದು ಕಡ್ಲೆಕಾಯಿ, ಗೆಣಸು, ಹವರೆಕಾಯಿ ಜೊತೆಗೆ ಬೇಯಿಸಿ, ದೇವರಿಗೆ ನೈವೇದ್ಯ ಮಾಡಿ ತಿನ್ನುತ್ತೇವೆ. ಹಬ್ಬದ ಶಾಸ್ತ್ರಕ್ಕೆಂದು ಕೆಲವರು ಒಂದೇ ಒಂದು ಪೀಸು ತಿಂದು ಸುಮ್ಮನೆ ಆಗುತ್ತಾರೆ. ಆದರೆ ಈ ಗೆಣಸನ್ನು ಆಗಾಗ ತಿನ್ನುವುದರಿಂದ ಏನೆಲ್ಲಾ ಉಪಯೋಗವಿದೆ ಎಂಬುದರ ಮಾಹಿತಿ ನಿಮಗೆ ತಿಳಿದರೆ ಖಂಡಿತ ಶಾಕ್ ಆಗ್ತೀರಾ.

ಈ ಸಿಹಿ ಗೆಣಸಿನಲ್ಲಿ ವಿಟಮಿನ್ ಎ ಮತ್ತು ಸಿ ಅಧಿಕವಾಗಿದೆ. ಇದರಿಂದ ಚರ್ಮದ ಆರೋಗ್ಯ, ಕೂದಲಿನ ಆರೋಗ್ಯವನ್ನು ಸುಧಾರಿಸಬಹುದಾಗಿದೆ. ಅಷ್ಟೇ ಅಲ್ಲ ಪೊಟ್ಯಾಸಿಯಮ್‌, ಕಬ್ಬಿಣ, ಫೈಬರ್ ಅಂಶ ಕೂಡ ಇರುವ ಕಾರಣ, ಜೀರ್ಣಕ್ರಿಯೆ, ಮಲಬದ್ಧತೆಯಂತಹ ಸಮಸ್ಯೆಗಳನ್ನು ದೂರ ಮಾಡುತ್ತದೆ.

ಬಾದಾಮಿಯಲ್ಲಿರುವಂತೆಯೇ ಸಿಹಿ ಗೆಣಸಿನಲ್ಲಿಯೂ ಕಬ್ಬಿಣಾಂಶ ಅಧಿಕವಾಗಿದೆ. ಇದರಿಂದಾಗಿ ಹಲ್ಲುಗಳು, ಮೂಳಡಗಳು, ಚರ್ಮ, ನರಗಳ ಸಮಸ್ಯೆ ದೂರವಾಗುತ್ತದೆ. ರಕ್ತಕಣಗಳು ಸಹ ಸರಿಯಾದ ರೀತಿಯಲ್ಲಿ ಕೆಲಸ ಮಾಡುತ್ತಾ ಇರುತ್ತದೆ. ಕಬ್ಬಿಣಾಂಶದ ಕೊರತೆ ನಿವಾರಿಸಲು ಇದು ಸರಿಯಾದ ಆಹಾರವಾಗಿದೆ.

ಸಿಹಿ ಗೆಣಸು ಕ್ಯಾರೊಟಿನಾಯ್ಡ್ ಎಂಬ ಅಂಶವನ್ನು ಸಹ ಹೊಂದಿರುತ್ತದೆ. ಇದು ರಕ್ತದಲ್ಲಿನ ಸಕ್ಕರೆಯನ್ನು ಸಹ ನಿಯಂತ್ರಣದಲ್ಲಿಡುತ್ತದೆ. ಗೆಣಸು ಪೊಟ್ಯಾಸಿಯಂನ ಮೂಲವಾಗಿದೆ. ಇದು ಮೂತ್ರಪಿಂಡಗಳನ್ನು ಆರೋಗ್ಯವಾಗಿಡಲು ಗಮನಾರ್ಹವಾಗಿ ಕೊಡುಗೆ ನೀಡುತ್ತದೆ. ಉರಿಯೂತವನ್ನು ಕಡಿಮೆ ಮಾಡುತ್ತದೆ. ಕ್ಯಾನ್ಸರ್ ಬರದಂತೆ ಕಾಪಾಡುತ್ತದೆ, ಸಂಧಿವಾತವನ್ನು ಶಮನಗೊಳಿಸುತ್ತದೆ. ಹೀಗಾಗಿ ಸಾಧ್ಯವಾದಷ್ಟು ಗೆಣಸನ್ನು ನಿಮ್ಮ ದೈನಂದಿನ ಆಹಾರದಲ್ಲಿ ಸೇವಿಸುವುದಕ್ಕೆ ಅಭ್ಯಾಸ ಮಾಡಿಕೊಳ್ಳಿ ದೇಹಕ್ಕೆ ಪ್ರಯೋಜವಾಗುವ ಎಲ್ಲಾ ಅಂಶಗಳು ಇದರಲ್ಲಿವೆ.

Share This Article
Leave a Comment

Leave a Reply

Your email address will not be published. Required fields are marked *