ನಾಳೆ 6 ನಕ್ಸಲರ ಶರಣಾಗತಿ : ಕರ್ನಾಟಕ ನಕ್ಸಲ್ ಮುಕ್ತ..!

suddionenews
1 Min Read

ಚಿಕ್ಕಮಗಳೂರು: ಜಿಲ್ಲಾಡಳಿತದ ಮುಂದೆ ನಾಳೆ ಮಕ್ಸಲರು ಶರಣಾಗಲಿದ್ದಾರೆ. ಈ ಮೂಲಕ ಕರ್ನಾಟಕವೂ ನಕ್ಸಲ್ ಮುಕ್ತವಾಗಲಿದೆ ಎಂದು ಹೇಳಲಾಗುತ್ತಿದೆ. ಆರು ನಕಸಲರು ನಾಳೆ ಶರಣಾಗುತ್ತೀವಿ ಎಂದೇ ಹೇಳಿದ್ದಾರೆ. ಹೀಗಾಗಿ ಈಗಾಗಲೇ ಪೊಲೀಸ್ ಭದ್ರತೆಯನ್ನು ಒದಗಿಸಲಾಗಿದೆ. ಪೊಲೀಸರು ಜಿಲ್ಲಾದ್ಯಂತ ಹೈ ಅಲರ್ಟ್ ಘೋಷಣೆ ಮಾಡಿದ್ದಾರೆ.

 

ಶಾಂತಿಗಾಗಿ ನಾಗರಿಕ ವೇದಿಕೆ ಹಾಗೂ ಶರಣಾಗತಿ ಕಮಿಟಿ ಸದಸ್ಯರು ಕಾಡಿಗೆ ತೆರಳಿ ನಕ್ಸಲರ ಮನವೊಲಿಕೆ ಮಾಡಲಾಗಿದೆ. ಆರು ಜನರ ಮನವೊಲಿಕೆ ಮಾಡಿದ್ದು, ಮುಖ್ಯ ವಾಹಿನಿಗೆ ಕರೆ ತರಲು ಯಶಸ್ವಿಯಾಗಿದ್ದಾರೆ. ಆರು ಜನ ನಕ್ಸಲರು ನಾಳೆ ಶರಣಾಗುವುದು ಬಹುತೇಕ ಫಿಕ್ಸ್ ಆಗಿದೆ. ಇವರೆಲ್ಲ ಪಶ್ಚಿಮ ಘಟ್ಟಗಳ ಸಾಲಿನಲ್ಲಿ ಆಕ್ಟೀವ್ ಆಗಿದ್ದಂತ ನಕ್ಸಲರಾಗಿದ್ದಾರೆ. ಇವರನ್ನು ಶಾಂತಿಗಾಗಿ ನಾಗರಿಕ ವೇದಿಕೆ ಹಾಗೂ ಶರಣಾಗತಿ ಕಮಿಟಿ ಕಾಡಿನೊಳಗೆ ಭೇಟಿಯಾಗಿ, ಸಭೆ ನಡೆಸಿ ಮನವೊಲಿಸುವ ಕೆಲಸ ಮಾಡಿದ್ದಾರೆ. ಹಲವು ಬೇಡಿಕೆಗಳನ್ನು ನಕ್ಸಲರು ಇಟ್ಟಿದ್ದಾರೆ ಎನ್ನಲಾಗಿದ್ದು, ಅವರ ಮನವೊಲಿಸಿ, ಶರಣಾಗತಿಗೆ ತಯಾರು ಮಾಡಿದ್ದಾರೆ. ನಾಳೆ ಜಿಲ್ಲಾಡಳಿತದ ಮುಂದೆ ಶರಣಾಗಲಿದ್ದಾರೆ. ನಾಳೆ ಬೆಳಗ್ಗೆ 8 ರಿಂದ 9 ಗಂಟೆಯ ಒಳಗೆ ಚಿಕ್ಕಮಗಳೂರು ಜಿಲ್ಲಾಡಳಿತದ ಮುಂದೆ ಶರಣಾಗಲಿದ್ದಾರೆ. ಕರ್ನಾಟಕ ಸೇರಿದ ಹೊರ ರಾಜ್ಯದ ಮೋಸ್ಟ್ ವಾಂಟೆಡ್ ನಕ್ಸಲರು ನಾಳೆ ಶರಣಾಗುತ್ತಿದ್ದಾರೆ. ಹೀಗಾಗಿ ಈ ಬಗ್ಗೆ ಮಹತ್ವದ ಮಾಹಿತಿ ಕಲೆ ಹಾಕಿರುವ ರಾಷ್ಟ್ರೀಯ ಗುಪ್ಯಚರ ಇಲಾಖೆಯ ಅಧಿಕಾರಿಗಳು ಚಿಕ್ಕಮಗಳೂರಿಗೆ ಆಗಮಿಸಲಿದ್ದಾರೆ ಎನ್ನಲಾಗಿದೆ.

ಶರಣಾಗುತ್ತಿರುವ ನಕ್ಸಲರ ಮಾಹಿತಿ ಇಲ್ಲಿದೆ ನೋಡಿ

* ಮುಂಡುಗಾರು ಲತಾ (ಶೃಂಗೇರಿ) * ವನಜಾಕ್ಷಿ (ಬಾಳೆಹೊಳೆ ಕಳಸ) * ಸುಂದರಿ (ದಕ್ಷಿಣ ಕನ್ನಡ) * ಮಾರಪ್ಪ ಅರೋಳಿ (ಕರ್ನಾಟಕ) * ವಸಂತ ಟಿ (ತಮಿಳುನಾಡು) * ಎನ್.ಜೀಶಾ (ಕೇರಳ)
*

Share This Article
Leave a Comment

Leave a Reply

Your email address will not be published. Required fields are marked *