ಚಿತ್ರದುರ್ಗ, (ಜು.12) : ನಗರದ ತ್ಯಾಗರಾಜ ಬೀದಿ ನಿವಾಸಿ ದಿವಂಗತ ಎಚ್ ಎನ್ ನಾಗರಾಜ್ ಮತ್ತು ಎಚ್ ಸುಶೀಲಾ ಬಾಯಿ ದಂಪತಿಯ ಕೊನೆಯ ಪುತ್ರ ಹೆಚ್. ಸುರೇಶ್ (65) ಅವರು ದೀರ್ಘಕಾಲದ ಅನಾರೋಗ್ಯದಿಂದ ಇಂದು ಬೆಳಿಗ್ಗೆ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಅವಿವಾಹಿತರಾಗಿದ್ದ ಇವರು ತಾಯಿ, ನಾಲ್ಕು ಜನ ಸಹೋದರಿಯರು,ಒಬ್ಬ ಸಹೋದರ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಮೃತರು ಸಂತ ಜೋಸೆಫರ ಶಾಲೆಯ ನಿವೃತ್ತ ಶಿಕ್ಷಕಿ ಹೆಚ್. ಚೂಡಾಮಣಿ ಅವರ ಕೊನೆಯ ಸಹೋದರ.
ಅಂತ್ಯಕ್ರಿಯೆ ಜೋಗಿಮಟ್ಟಿ ರಸ್ತೆಯ ಮುಕ್ತಿ ಧಾಮದಲ್ಲಿ ನೆರವೇರಿಸಲಾಯಿತು ಎಂದು ಕುಟುಂಬದ ಮೂಲಗಳು ತಿಳಿಸಿವೆ.