Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಬೇಸಿಗೆ ಬಂತು : ಕಲ್ಲಂಗಡಿ ತಿನ್ನುವುದರಿಂದ ಏನೆಲ್ಲಾ ಲಾಭಗಳಿವೆ ಗೊತ್ತಾ..?

Facebook
Twitter
Telegram
WhatsApp

ಈ ಬಾರಿಯಂತೂ ಬೇಸಿಗೆ ಅವಧಿಗೂ ಮುನ್ನವೇ ಶುರುವಾಗಿದೆ. ಮಳೆಯ ಅಭಾವದಿಂದ ಬೇಸಿಗೆ ಜೋರಾಗಿದೆ. ಎಲ್ಲೆಡೆ ಮಳೆಯಿಲ್ಲದೆ ನೆಲ ಬಿಸಿಯಾಗಿದೆ. ಕೆರೆ ಕಟ್ಟೆಗಳು ಒಣಗಿ ನಿಂತಿವೆ. ಭೂಮಿಯ ತಾಪ ಜಾಸ್ತಿಯಾಗಿ, ಅವಧಿಗೂ ಮುನ್ನವೆ ಹೆಚ್ಚಿನ ಶಾಕ ಜನರ ಮೈ ತಾಕುತ್ತಿದೆ. ಈ ಬೇಸಿಗೆಯಲ್ಲಿ ಆರೋಗ್ಯವನ್ನು ಚೆನ್ನಾಗಿ ಕಾಪಾಡಿಕೊಳ್ಳುವುದು ಬಹಳ ಮುಖ್ಯ. ಅದರಲ್ಲೂ ದೇಹಕ್ಕೆ ನೀರಿನ ಅಂಶ ಬಹಳಷ್ಟು ಬೇಕಾಗಿರುತ್ತದೆ. ಹೀಗಾಗಿ ಕಲ್ಲಂಗಡಿ ಹಣ್ಣನ್ನು ಹೆಚ್ಚಿನದಾಗಿ ಸೇವಿಸಿ.

ಕಲ್ಲಂಗಡಿ ಹಣ್ಣು ಕೇವಲ ಬೇಸಿಗೆಯ ತಂಪನ್ನು ಮಾತ್ರ ನಿವಾರಿಸುವುದಿಲ್ಲ. ಹಲವು ಆರೋಗ್ಯಕರ ಲಾಭಗಳನ್ನು ಪಡೆಯಬಹುದಾಗಿದೆ. ಕಲ್ಲಂಗಡಿ ಹಣ್ಣು ತಿನ್ನುವುದರಿಂದ ದೇಹಕ್ಕೂ ತಂಪು, ಆಯಾಸವೂ ಕಡಿಮೆ, ಉಷ್ಣತೆಯ‌ ನಿಯಂತ್ರಣವೂ ಕಡಿಮೆಯಾಗುತ್ತೆ, ಚರ್ಮದ ಕಾಂತಿಯೂ ಹೆಚ್ಚುತ್ತದೆ.

 

* ಕಲ್ಲಂಗಡಿ ಹಣ್ಣು ಸೇವನೆಯಿಂದ ಹೃದಯದ ಆರೋಗ್ಯಕ್ಕೂ ಒಳ್ಳೆಯದು. ಇದರಲ್ಲಿ ಸಿಟ್ರುಲಿನ್ ಎಂಬ ಅಮೈನೋ ಆಮ್ಲದಿಂದಾಗಿ ದೇಹದಲ್ಲಿ ಉತ್ತಮ ರಕ್ತ ಸಂಚಾರವಾಗುತ್ತದೆ. ಇದರಿಂದ ಹೃದಯ ಉತ್ತಮವಾಗಿರುತ್ತದೆ.

* ಕಲ್ಲಂಗಡಿ ಹಣ್ಣಿನಿಂದ ಕೀಲುಗಳ ರಕ್ಷಣೆಯನ್ನು ಮಾಡಿಕೊಳ್ಳಬಹುದು. ಬೀಟಾ-ಕ್ರಿಪ್ಟೋಕ್ಸಾಂಥಿಯಾ ಎಂಬ ದ್ರವ್ಯ ಇರುತ್ತೆ. ಆ ದ್ರವ್ಯದಲ್ಲಿ ಕೀಲು ರಕ್ಷಣೆಯಾಗಲಿದೆ. ಕೀಲುಗಳಲ್ಲಿ ಉರಿಯೂರವಿದ್ದರೆ, ಸಂಧಿವಾತವಿದ್ದರೆ ಕಲ್ಲಂಗಡಿ ಹಣ್ಣಿನ ಸೇವನೆಯಿಂದ ಶಮನವಾಗಲಿದೆ.

* ಮುಖ್ಯವಾಗಿ ಕಣ್ಣುಗಳ ರಕ್ಷಣೆಯಾಗಬೇಕೆಂದರು ಕಲ್ಲಂಗಡಿ ಹಣ್ಣು ತಿನ್ನಬಹುದು. ವಿಟಮಿನ್ ಎ ಅಧಿಕಾವಾಗಿರುವ ಕಾರಣ, ಒಂದು ಪೀಸ್ ಕಲ್ಲಂಗಡಿ ಹಣ್ಣು ತಿಂದರು ಸಹ ಶೇಕಡಾ 9-10 ರಷ್ಟು ವಿಟಮಿನ್ ಎ ಸಿಗಲಿದೆ.

* ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ಕಡಿಮೆ ಮಾಡುತ್ತದೆ. ಕಲ್ಲಂಗಡಿಯಲ್ಲಿ ಗ್ಲೈಸೆಮೆಕ್ಸ್ ಇಂಡೆಕ್ಸ್ ಮೌಲ್ಯವನ್ನು ಹೊಂದಿದೆ. ಇದು ರಕ್ತದಲ್ಲಿನ ಸಕ್ಕರೆ‌ಮಟ್ಟವನ್ನು ನಿಯಂತ್ರಣದಲ್ಲಿಡಲು ಅನುಕೂಲವಾಗಿದೆ. ಹೀಗಾಗಿ ಬೇಸಿಗೆಯಲ್ಲಿ ತಂಪಾಗಿರುವುದಕ್ಕಷ್ಟೇ ಅಲ್ಲ, ಆರೋಗ್ಯ ಕಾಪಾಡಿಕೊಳ್ಳುವುದಕ್ಕೂ ಕಲ್ಲಂಗಡಿ ಸೇವಿಸಿ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಏನನ್ನಾದರೂ ಸಾಧಿಸಬೇಕೆಂಬ ಛಲದೊಂದಿಗೆ ಬದುಕಿದರೆ ಬದುಕು ಸಾರ್ಥಕ : ಡಾ.ಬಸವ ಪ್ರಭು ಸ್ವಾಮೀಜಿ

  ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817   ಸುದ್ದಿಒನ್, ಚಿತ್ರದುರ್ಗ. ನ. 23 : ಪ್ರತಿಯೊಬ್ಬ ಮನುಷ್ಯನಲ್ಲಿ ಅಸಾಧಾರಣ ಶಕ್ತಿ ಇದೆ ಅದನ್ನು ಅರಿತು ಈ

ಚಿತ್ರದುರ್ಗದಲ್ಲಿ ಯಾವುದಾದರೂ ವೃತ್ತಕ್ಕೆ ಡಾ.ಪುನೀತ್‍ರಾಜ್‍ಕುಮಾರ್ ಹೆಸರಿಡಿ : ಜಗದೀಶ್ ಆಗ್ರಹ

ಸುದ್ದಿಒನ್, ಚಿತ್ರದುರ್ಗ, ನವೆಂಬರ್. 24 : ಈಡಿಗ ಸಮುದಾಯವು ಸಣ್ಣ ಸಮುದಾಯವಾಗಿದ್ದು, ಶೈಕ್ಷಣಿಕ, ಸಾಮಾಜಿಕ ಮತ್ತು ಸಾಂಸ್ಕøತಿಕ ಕಾರ್ಯಗಳಲ್ಲಿ ನಿರಂತರವಾಗಿ ತೊಡಗಿದ್ದಾರೆ. ಈಡಿಗ ಸಮೂದಾಯದವರೇ ಆದ ಡಾ.ರಾಜ್‍ಕುಮಾರ್, ಡಾ.ಪುನೀತ್ ರಾಜ್‍ಕುಮಾರ್ ಜೊತೆಗೆ ಮಾಜಿ ಮುಖ್ಯಮಂತ್ರಿ

ಉರ್ದು ಒಂದು ಸಮುದಾಯಕ್ಕೆ ಸೇರಿದ ಭಾಷೆಯಲ್ಲ : ಎಂ.ಕೆ.ತಾಜ್‍ಪೀರ್

  ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್, ಮೊ : 78998 64552 ಸುದ್ದಿಒನ್, ಚಿತ್ರದುರ್ಗ, ನವೆಂಬರ್. 24 : ಉರ್ದು ಭಾಷೆ ಬೆಳೆಸಿ ಅಭಿವೃದ್ದಿಪಡಿಸುವುದಕ್ಕಾಗಿ ಉರ್ದು ಅಕಾಡೆಮಿ ವತಿಯಿಂದ ಅನೇಕ ಕಾರ್ಯಕ್ರಮಗಳನ್ನು

error: Content is protected !!