ಚಿತ್ರದುರ್ಗದಲ್ಲಿ ಏಪ್ರಿಲ್‌ 01 ರಿಂದ ಬೇಸಿಗೆ ಶಿಬಿರ : ಇಲ್ಲಿದೆ ಮಾಹಿತಿ… !

3 Min Read

ಸುದ್ದಿಒನ್, ಚಿತ್ರದುರ್ಗ, ಮಾರ್ಚ್. 27 : ಎಲ್ಲೆಡೆ ಪರೀಕ್ಷೆಗಳು ಮುಗಿಯುವ ಹಂತಕ್ಕೆ ಬಂದಿವೆ. ಇನ್ನೇನೂ ಸದ್ಯದಲ್ಲೇ ಶಾಲಾ-ಕಾಲೇಜು ರಜೆ ಘೋಷಣೆ ಆಗಲಿದೆ. ಈ ರಜೆ ಅವಧಿಯಲ್ಲಿ ಮಕ್ಕಳ ತುಂಟಾಟಕ್ಕೆ ಬ್ರೇಕ್ ಹಾಕಿ, ಅವರನ್ನು ಸರಿದಾರಿಗೆ ತರುವುದು ಪಾಲಕರ ಮುಂದಿರುವ ಬಹುದೊಡ್ಡ ಸವಾಲು. ಅದರಲ್ಲೂ ಪೂರ್ವ ಪ್ರಾಥಮಿಕ, ಪ್ರಾಥಮಿಕ, ಪ್ರೌಢಶಾಲೆ ಮಕ್ಕಳು, ಮನೆಯಲ್ಲಿ ಮೊಬೈಲ್ ಟಿವಿ ನೋಡಿ ವಿನಾಕಾರಣ ಕಾಲಹರಣ ಮಾಡುವುದು, ಆಟವೆಂದು ಅಪಾಯದ ಸ್ಥಳಗಳಿಗೆ ಹೋಗುವುದು ಸಾಮಾನ್ಯ. ಮೊದಲೆಲ್ಲಾ ಇಂದಿನ ರೀತಿಯಲ್ಲಿ ಮೊಬೈಲ್ ಟಿವಿ ಗಳಿರಲಿಲ್ಲ. ರಜೆ ಬಂತೆಂದರೆ ಸಾಕು ಮಕ್ಜಳೆಲ್ಲಾ ಒಂದೆಡೆ ಸೇರಿ ಆಟವಾಡುತ್ತಿದ್ದರು. ಮಕ್ಕಳ ಕಲರವ ಪೋಷಕರಿಗೆ ಮುದ ನೀಡುತ್ತಿತ್ತು. ಆದರೆ ಇಂದಿನ ದಿನಗಳಲ್ಲಿ ಮಕ್ಕಳಿಗೆ ಪಾಠದ ಜೊತೆಗೆ ಆಟವಾಡಿಸುವುದೇ ದೊಡ್ಡ ಸವಾಲಾಗಿ ಪರಿಣಮಿಸಿದೆ. ಇದಕ್ಕೆ ಕಡಿವಾಣ ಹಾಕಲು ಬೇಸಿಗೆ ಶಿಬಿರಗಳು ವರದಾನವಾಗಿವೆ.

ಚಿತ್ರದುರ್ಗದಲ್ಲಿ ಈ ಬೇಸಿಗೆಯಲ್ಲಿ ಮಕ್ಕಳಿಗಾಗಿಯೇ ಅನೇಕ ಶಿಬಿರಗಳು ಆಯೋಜನೆಗೊಳ್ಳುತ್ತಿದ್ದು, ಅದರಲ್ಲಿ ಹೆಚ್ಚು ಉಪಯುಕ್ತ, ಮಕ್ಕಳ ಜ್ಞಾನ ವಿಕಾಸದ ಜೊತೆಗೆ ಆವರ ಆಟ, ತುಂಟಾಟಕ್ಕೆ ಧಕ್ಕೆ ಬಾರದ ರೀತಿ ಶಿಬಿರ ಆಯೋಜಿಸುವಲ್ಲಿ ಕೆಲ ಸಂಸ್ಥೆಗಳು ಮುಂಚೂಣಿಯಲ್ಲಿವೆ.

ಪ್ರಕೃತಿ ಆಂಗ್ಲ ಮಾಧ್ಯಮಿಕ ಶಾಲೆ : ನಗರದ ತುರುವನೂರು ರಸ್ತೆಯ ಬಿ. ಎಲ್. ಗೌಡ ಲೇಔಟ್‌ನಲ್ಲಿರುವ ಪ್ರಕೃತಿ ಆಂಗ್ಲ ಮಾಧ್ಯಮಿಕ ಪ್ರಾಥಮಿಕ ಶಾಲೆಯಲ್ಲಿ ಇದೇ ಏಪ್ರಿಲ್ 01 ರಿಂದ ಏಪ್ರಿಲ್ 15 ರವರೆಗೆ 9 ರಿಂದ 16ನೇ ವಯಸ್ಸಿನ ಮಕ್ಕಳಿಗೆ ಶಿಬಿರ ಆಯೋಜಿಸಿದ್ದಾರೆ.

ಇಲ್ಲಿ ಗಿಟಾರ್ ಕಲಿಕೆ, ಗ್ರಾಮೀಣ ಸೊಗಡಿನ ಆಟಗಳು, ಆಕಾಶ ವೀಕ್ಷಣೆ, ಪಕ್ಷಿಗಳ ಕಲರವ ಅನುಭವಿಸುವುದು, ಕರೊಕೆ ಹಾಡು ಕಲಿಕೆ, ಆರ್ಟ್ ಅಂಡ್ ಕ್ರಾಫ್ಟ್, ವಿಜ್ಞಾನ ಪ್ರಯೋಗಗಳು, ಕ್ರೀಕೆಟ್, ಗಾಂಧರಿ ವಿದ್ಯೆ/ಚೆಕ್ಷು ವಿದ್ಯೆ, ಗಾಯನ ಮತ್ತು ನೃತ್ಯ ಸೇರಿದಂತೆ ವಿವಿಧ ಚಟುವಟಿಕೆಗಳಲ್ಲಿ ಮಕ್ಕಳನ್ನು ತೊಡಗಿಸುವ ಕೆಲಸ ಮಾಡಲಿದೆ. ಹೆಚ್ಚಿನ ಮಾಹಿತಿಗೆ ಮೊ.ನಂ: 6363158456, 8867188878 ಇಲ್ಲಿಗೆ ಸಂಪರ್ಕಿಸಬಹುದು.

ಸ್ಟೆಪ್ಟಿಂಗ್ಸ್ ಸ್ಟೊನ್ಸ್ ಶಾಲೆ‌ : ನಗರದ ಬೆಂಗಳೂರು ರಸ್ತೆಯಲ್ಲಿರುವ ಸ್ಟೆಪ್ಪಿಂಗ್ ಸ್ಟೋನ್ಸ್ ಶಾಲೆಯಲ್ಲಿ ಏಪ್ರಿಲ್ 01 ರಿಂದ ಏಪ್ರಿಲ್ 11ರ ವರೆಗೆ ಸನ್ನಿ ಸ್ಮೈಲ್ ಸಮ್ಮರ್ ಕ್ಯಾಂಪ್ ಬೇಸಿಗೆ ಶಿಬಿರ ಆಯೋಜಿಸಲಾಗಿದೆ. ಇಲ್ಲಿ ಮಕ್ಕಳಿಗೆ ರೋಬೋಟಿಕ್ಸ್, ಸಾಹಸ ಚಟುವಟಿಕೆಗಳು, ಹೊರ-ಒಳಾಂಗಣ ಕ್ರೀಡೆಗಳು, ಕ್ಯಾಲಿಗ್ರೇಫಿ ಸೇರಿದಂತೆ ವಿವಿಧ ಚಟುವಟಿಕೆಗಳನ್ನು ಆಯೋಜಿಸಲಾಗುತ್ತದೆ. ಜೊತೆಗೆ ಆರ್ಚರಿ ಟಾರ್ಗೇಟ್ ಶೂಟಿಂಗ್, ಹಗ್ಗ ಹಿಡಿದು ಹತ್ತುವುದು, ಏಣಿ ಹತ್ತುವುದು, ಗೋಡೆ ಹತ್ತುವುದು, ಟ್ರಕ್ಕಿಂಗ್ ಸೇರಿದಂತೆ ವಿವಿಧ ರೀತಿಯ ಆಟಗಳಲ್ಲಿ ಮಕ್ಕಳನ್ನು ತೊಡಗಿಸಲಿದೆ. ಹೆಚ್ಚಿನ ಮಾಹಿತಿಗೆ ಮೊ.ನಂ: 9886791923 ಸಂಪರ್ಕಿಸಬಹುದು.

ಬ್ಯಾಡ್ಮಿಂಟನ್ ಅಕಾಡೆಮಿ : ವಿದ್ಯಾನಗರದಲ್ಲಿರುವ ಚಿತ್ರದುರ್ಗ ಬ್ಯಾಡ್ಮಿಂಟನ್ ಅಕಾಡೆಮಿ ವತಿಯಿಂದ ಬೇಸಿಗೆ ಶಿಬಿರ ಆಯೋಜಿಸಲಾಗಿದ್ದು, ಏಪ್ರಿಲ್ 01ರಿಂದ ಏಪ್ರಿಲ್ 25ರ ವರೆಗೆ ಮೊದಲನೇ ಬ್ಯಾಚ್ ಮತ್ತು ಏಪ್ರಿಲ್ 28ರಿಂದ ಮೇ 23ರ ವರೆಗೆ ಶಿಬಿರ ನಡೆಯಲಿದೆ. ಈ ಅವಧಿಯಲ್ಲಿ ಬ್ಯಾಡ್ಮಿಂಟನ್ ಕ್ರೀಡೆಗೆ ಸಂಬಂಧಿಸದಂತೆ ಶಿಬಿರವನ್ನು ಆಯೋಜಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಮೊ.ನಂ. 81051411080, 8688335160 ಸಂಪರ್ಕಿಸಬಹುದು.

 

ಸ್ಪೋಕನ್ ಇಂಗ್ಲಿಷ್ ಬೇಸಿಗೆ ಶಿಬಿರ

ಯೋಗೀಶ್ ಸಹ್ಯಾದ್ರಿ ಎಜುಕೇಷನ್ ಟ್ರಸ್ಟ್ (ರಿ.), ಚಿತ್ರದುರ್ಗ ಇದರಿಂದ (Spoken English Summer Camp – April 03 to 10 May, 2025) ನಗರದಲ್ಲಿ ಈ ವರ್ಷ ಬೇಸಿಗೆ ರಜೆಯಲ್ಲಿ ಸಹ್ಯಾದ್ರಿ ಇಂಗ್ಲಿಷ್ ಅಕಾಡೆಮಿ ವತಿಯಿಂದ ಎಲ್ಲಾ ತರಗತಿಯ ವಿದ್ಯಾರ್ಥಿಗಳಿಗೆ ಏಪ್ರಿಲ್ 03 ರಿಂದ ಮೇ 10 ರ ವರೆಗೆ *”ಸ್ಪೋಕನ್ ಇಂಗ್ಲಿಷ್ ಬೇಸಿಗೆ ಶಿಬಿರ (Spoken English Summer Camp – 2025)”* ಆಯೋಜಿಸಲಾಗಿದ್ದು, ನಗರದ 3 (ಮೂರು) ವಿವಿಧ ಸ್ಥಳಗಳಲ್ಲಿ ತರಗತಿಗಳನ್ನು ನಡೆಸಲಾಗುತ್ತಿದೆ.

Admissions Started..!

ತರಗತಿಗಳು ನಡೆಯುವ ಸ್ಥಳಗಳು:
1. Rotary School, DC Circle.
2. Jnana Bharathi School, Holalkere Road.
3. Sahyadri’s English Academy, Vidyanagar.

ಆಸಕ್ತರು ಪ್ರವೇಶ ಪಡೆಯಲು ಈ ಮೊಬೈಲ್ ನಂಬರ್ ಗಳಿಗೆ ಸಂಪರ್ಕಿಸಬಹುದು.
Ph : 9972240239, 9964376364.

Share This Article
Leave a Comment

Leave a Reply

Your email address will not be published. Required fields are marked *