ವರದಿ : ಶ್ರೀಧರ ಡಿ. ರಾಮಚಂದ್ರಪ್ಪ, ತುರುವನೂರು
ಮೊ : 7899789545
ಇಷ್ಟೊತ್ತಿಗೆ ಈಗಾಗಲೇ ಮುಂಗಾರು ಜೋರಾಗಿಯೇ ಆರಂಭವಾಗಬೇಕಿತ್ತು. ಆದರೆ ಈಗ ಆರಂಭದಲ್ಲಿ ಹಾಗೊಮ್ಮೆ ಹೀಗೊಮ್ಮೆ ಅಂತ ಬಂದ ಮಳೆ, ರೈತರು ಇನ್ನೇನು ಜಮಿನು ಉಳುಮೆ ಮಾಡಬೇಕು ಎನ್ನುವಷ್ಟರಲ್ಲಿ ಮಳೆಯೇ ಕೈಕೊಟ್ಟಿದೆ. ಇದು ರೈತರಿಗೆ ಬೇಸರ ಮೂಡಿಸಿದೆ.
ಮುಂಗಾರು ಮಳೆ ಮೇ ತಿಂಗಳ ಅಂತ್ಯದಲ್ಲಿ ಅಥವಾ ಜೂನ್ ತಿಂಗಳ ಮೊದಲನೇ ದಿನದಂದೇ ಮಳೆ ಬರಬಹುದು ಎಂಬ ನಿರೀಕ್ಷೆ ಇತ್ತು. ಕೇರಳದಲ್ಲಿ ಈಗಾಗಲೇ ಮುಂಗಾರು ಪ್ರವೇಶ ಮಾಡಿದೆ. ಆದರೆ ಜೂನ್ ಎರಡನೇ ವಾರಕ್ಕೆ ಕಾಲಿಟ್ಟಿದ್ದರೂ, ಮುಂಗಾರು ಮಾತ್ರ ಇನ್ನೂ ಪ್ರವೇಶಿಸದಿರುವುದು ರೈತನಲ್ಲಿ ಆತಂಕದ ಕಾರ್ಮೋಡ ದಟ್ಟವಾಗಿ ಆವರಿಸಿದೆ.
ಈ ಬಾರಿಯ ಮುಂಗಾರು ಹಂಗಾಮಿನ ಜೊತೆ ಚಂಡಮಾರುತ ‘ಬಿಫರ್ ಚಾಯ್’ ಕೂಡಿಕೊಂಡಿರುವುದೂ ಮುಂಗಾರಿಗೆ ಹಿನ್ನಡೆಯಾಗುತ್ತದೆ. ಇದರಿಂದಾಗಿ ರಾಜ್ಯದಲ್ಲಿ ಕೃಷಿ ಚಟುವಟಿಕೆಗಳಿಗೂ ತೀವ್ರ ಹಿನ್ನಡೆಯಾಗಿದೆ. ಸುಮಾರು ವಾರ-ಹದಿನೈದು ದಿನಗಳ ಸಮಯ ಹಿಡಿಯುತ್ತದೆ.