Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ आध्यात्मिक अन्य

---Advertisement---

ಸಮೀಕ್ಷೆ ನಿರಾಕರಿಸಿದ ಸುಧಾಮೂರ್ತಿ : ಸಿಎಂ ಫಸ್ಟ್ ರಿಯಾಕ್ಷನ್

---Advertisement---

ಬೆಂಗಳೂರು: ರಾಜ್ಯದಲ್ಲಿ ನಡೆಯುತ್ತಿರುವ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಗೆ ಸಂಬಂಧಿಸಿದಂತೆ ಇನ್ಫೋಸಿಸ್ ಸಂಸ್ಥಾಪಕರಾದ ಸುಧಾಮೂರ್ತಿ ದಂಪತಿ ನಿರಾಕರಸಿದ್ದಾರೆ. ಈ ಸಂಬಂಧ ಸಿಎಂ ಸಿದ್ದರಾಮಯ್ಯ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಇದು ಹಿಂದುಳಿದವರ ಸಮೀಕ್ಷೆ ಅಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ಸುಧಾಮೂರ್ತಿ ದಂಪತಿ ತಪ್ಪು ತಿಳಿದುಕೊಂಡಿದ್ದಾರೆ. ಹಿಂದುಳಿದವರ ಸಮೀಕ್ಷೆ ಎಂದುಕೊಂಡಿದ್ದಾರೆ ಅದೇ ತಪ್ಪು. ಅವರಿಗೆ ಅರ್ಥವಾಗದೆ ಇದ್ದರೆ ನಾವೇನು ಮಾಡೋದು. ಇದು ಹಿಂದುಳಿದವರ ಸಮೀಕ್ಷೆ ಅಲ್ಲ, ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ. ಹಾಗಾದ್ರೆ ನಾವೂ ಶಕ್ರಿ ಯೋಜನೆಯನ್ನ ಮಾಡಿದ್ದೀವಿ ಮೇಲ್ಜಾತಿ ಅವರು ಹೋಗಲ್ವಾ, ಗೃಹಲಕ್ಷ್ಮೀ ಯೋಜನೆ ಮಾಡಿದ್ದೀವಿ. ಹಾಗಾದ್ರೆ ಮೇಲ್ಜಾತಿ ಅವರು ತೆಗೆದುಕೊಳ್ಳಲ್ವಾ. ತಪ್ಪು ಮಾಹಿತಿ ಹೋಗಿದೆ ಅನ್ಸುತ್ತೆ. ಪದೇ ಪದೇ ನಾನು ಹೇಳ್ತಾ ಇರೋದು ಇದೇ ಕಾರಣಕ್ಕೆ. ನಾರಾಯಣ ಮೂರ್ತಿ ಅಂಥವರಿಗೆ, ಸುಧಾಮೂರ್ತಿ ಅಂಥವರಿಗೆ ಇದು ಹಿಂದುಳಿದ ಸಮೀಕ್ಷೆ ಅನ್ನಿಸಿರುವುದೇ ಆಶ್ಚರ್ಯ. ಕೇಂದ್ರ ಸರ್ಕಾರ ಜಾತಿಗಣತಿ ಮಾಡುತ್ತೆ ಆಗ ಏನು ಹೇಳ್ತಾರಪ್ಪ ಎಂದು ಪ್ರಶ್ನೆ ಮಾಡಿದ್ದಾರೆ.

ಈ ಸಂಬಂಧ ಬಿಕೆ ಹರಿಪ್ರಸಾದ್ ಕೂಡ ಪ್ರತಿಕ್ರಿಯೆ ನೀಡಿದ್ದು, ಸಮೀಕ್ಷೆಯಲ್ಲಿ ಭಾಗವಹಿಸದವರು ದೇಶದ್ರೋಹಿಗಳು, ಸಂವಿಧಾನ ದ್ರೋಹಿಗಳು. ಮೇಲ್ಜಾತಿಯವರಿಗೆ ಹಿಂದುಳಿದವರ ಸಮೀಕ್ಚೆ ಬೇಕಾಗಿಲ್ಲ. ಏನೋ ಸಿಎಂ ಸಿದ್ದರಾಮಯ್ಯ ಅವರು ರಿಸ್ಕ್ ತೆಗೆದುಕೊಂಡು ಈ ಕೆಲಸ ಮಾಡ್ತಾ ಇದ್ದಾರೆ. ಅವರೆಲ್ಲ ತಂತ್ರಜ್ಞಾನದ ದಿಗ್ಗಜರು ಎನಿಸಿಕೊಂಡವರು, ಸರ್ಕಾರದಿಂದ ಒಂದು ರೂಪಾಯಿಗೆ ಭೂಮಿ ಪಡೆದುಕೊಂಡವರು, 35 ಸಾವಿರ ಕೋಟಿ ತೆರಿಗೆ ಕಟ್ಟುವವರು, ಸಿಂಪಲ್ ಸುಧಾಮೂರ್ತಿ ಅಂತ ಹೆಸರು ಪಡೆದುಕಿಂಡವರು,‌ ಮಾಹಿತಿ ತಂತ್ರಜ್ಞಾನದಲ್ಲಿ ಹೆಸರು ಮಾಡಿ ಮಾಹಿತಿಯನ್ನೇ ತಿಳಿದುಕೊಳ್ಳುವುದಿಲ್ಲ ಅಂದ್ರೆ ಹಾಸ್ಯಾಸ್ಪದ ಎಂದಿದ್ದಾರೆ.

Join WhatsApp

Join Now

Join Telegram

Join Now