Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ವಿದ್ಯಾರ್ಥಿಗಳು ಓದಿನ ಜೊತೆಗೆ ಪಠ್ಯೇತರ ಶಿಕ್ಷಣ ಪಡೆಯಬೇಕು : ಬಸವಪ್ರಭು ಸ್ವಾಮೀಜಿ

---Advertisement---

 

ಸುದ್ದಿಒನ್, ಚಿತ್ರದುರ್ಗ. ನ.24 :  ವಿದ್ಯಾರ್ಥಿಗಳು ಓದಿನ ಜತೆಗೆ ಪಠ್ಯೇತರ ಅಂದರೆ ಕಲೆ,ಕ್ರೀಡೆ, ನೈತಿಕ ಶಿಕ್ಷಣ ಪಡೆಯುವ ಮೂಲಕ ಬೌದ್ಧಿಕ ಮತ್ತು ಭೌತಿಕ ಸಮತೋಲನ ಕಾಯ್ದುಕೊಳ್ಳುವತ್ತ ಗಮನ ಹರಿಸಿದರೆ ಜೀವನದಲ್ಲಿ ಯಶಸ್ಸು  ಕಾಣಬಹುದು ಎಂದು ದಾವಣಗೆರೆ ವಿರಕ್ತಮಠದ ,ಹಾಗೂ ಚಿತ್ರದುರ್ಗ ಮುರುಘಾಮಠದ ಉಸ್ತುವಾರಿ ಬಸವಪ್ರಭು ಸ್ವಾಮೀಜಿ ಅವರು ಸಲಹೆ ನೀಡಿದರು.

ನಗರದ ಎಸ್ ಜೆ ಎಂ ಪಾಲಿಟೆಕ್ನಿಕ್ (ಅನುದಾನಿತ) ನಲ್ಲಿ 2023-24 ನೇ ಸಾಲಿನ ಕ್ರೀಡಾ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಇಲ್ಲಿನ ಎಸ್ ಜೆ

ಎಂಐಟಿ  ಕ್ರೀಡಾಂಗಣದಲ್ಲಿ   ಚಾಲನೆ ನೀಡಿ ಮಾತಾನಾಡಿದ ಶ್ರೀಗಳು ಪಠ್ಯ ಮತ್ತು ಪಠ್ಯೇತರ ಚಟುವಟಿಕೆ ಎರಡರಲ್ಲೂ ನೀವು ಯಶಸ್ಸು ಪಡೆಯಬೇಕು. ಓದು ವೇದನೆಯೂ ಆಗಬಾರದು ಪಠ್ಯೇತರ ಶೋಕಿಯೂ ಆಗಬಾರದೆಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.

ಕಾಲೇಜಿನ ಪ್ರಾಚಾರ್ಯರಾದ ಎಸ್. ವಿ.ರವಿಶಂಕರ್, ವಿಭಾಗಗಳ ಮುಖ್ಯಸ್ಥರುಗಳಾದ ಮಮ್ತಾಜ್ ಬೇಗಂ,ಚನ್ನಕೇಶವ, ರಘು, ನಳಿನಾಕ್ಷಿ,ಮೋಹನ್ ಸೇರಿದಂತೆ ಹಿರಿಯ ಉಪನ್ಯಾಸಕರಾದ ಅನಂತನಾರಾಯಣ,ಗೋವಿಂದರಾಜು, ಪ್ರಶಾಂತ್,ಪ್ರತಿಮಾ, ಧರ್ಮೇಂದ್ರ ಅವರುಗಳು  ಭಾಗವಹಿಸಿದ್ದರು.

ಅಂಪೈರ್ ಅರುಣ್, ದೈಹಿಕ ನಿರ್ದೇಶಕ ಕುಮಾರಸ್ವಾಮಿ ಕಾಲೇಜಿನ ಬೋಧಕರು ಬೋಧಕೇತರ ಸಿಬ್ಬಂದಿ ಹಾಗೂ , ವಿದ್ಯಾರ್ಥಿಗಳು ಹಾಜರಿದ್ದರು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...