Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಕುವೆಂಪು ವಿವಿಯಲ್ಲಿ ವಿದ್ಯಾರ್ಥಿಗಳ ಆಕ್ರೋಶ : ರೊಚ್ಚಿಗೆದ್ದ ವಿದ್ಯಾರ್ಥಿಗಳು ಏನ್ ಮಾಡಿದ್ರು..?

---Advertisement---

ಶಿವಮೊಗ್ಗ: ವಿದ್ಯಾರ್ಥಿ ವೇತನ ಸರಿಯಾಗಿ ಕೊಡ್ತಾ ಇಲ್ಲ. ಹಾಸ್ಟೆಲ್ ವ್ಯವಸ್ಥೆ ಸರಿಯಾಗಿಲ್ಲ ಎಂಬ ಕಾರಣದಿಂದ ಕುವೆಂಪು ವಿವಿ ವಿದ್ಯಾರ್ಥಿಗಳು ರೊಚ್ಚಿಗೆದ್ದಿದ್ದಾರೆ. NSUI ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಸಮಸ್ಯೆಯನ್ನ ಎಷ್ಟೇ ಬಾರಿ ಹೇಳಿದರು ಅದನ್ನು ಬಗೆಹರಿಸದ ವಿಸಿಗೆ ದಿಕ್ಕಾರವನ್ನ ಕೂಗಿದ್ದಾರೆ. ಅಷ್ಟೇ ಅಲ್ಲ ವಿಸಿ ಕಚೇರಿ ಬೋರ್ಡ್ ಗೆ ವಿದ್ಯಾರ್ಥಿಗಳು ಮಸಿ ಬಳಿದಿದ್ದಾರೆ. ಅಲ್ಲಿರುವಂತ ಪಾಟ್ ಗಳು, ಚೇರ್ ಗಳನ್ನು ಹೊಡೆದು‌ ಹಾಕುವ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಭದ್ರಾವತಿಯ ಶಂಕರಘಟ್ಟದಲ್ಲಿ ಇರುವಂತದ್ದು ಕುವೆಂಪು ಯೂನಿವರ್ಸಿಟಿ. ಇಲ್ಲಿ ಸಾಕಷ್ಟು ಸಮಸ್ಯೆಗಳನ್ನು ವಿದ್ಯಾರ್ಥಿಗಳು ಅನುಭವಿಸ್ತಾ ಇದ್ದಾರೆ. ಕಳೆದ ಐದು ತಿಂಗಳ ಹಿಂದೆಯೇ ಪರೀಕ್ಷೆ ಮುಗಿದಿದೆ. ಆ ಫಲಿತಾಂಶವೂ ವಿಳಂಬವಾಗಿದೆ. ಅದರ ಜೊತೆಗೆ ಹಾಸ್ಟೆಲ್ ಸೌಲಭ್ಯವೂ ಸರಿ ಇಲ್ಲ. ಅದರ ಬಗ್ಗೆಯೂ‌ಗಮನ ಹರಿಸುತ್ತಿಲ್ಲ. ಹಾಗೇ ಸ್ಕಾಲರ್ ಶಿಪ್ ಬರಬೇಕಿದೆ ಅದರ ಬಗ್ಗೆಯೂ ಗಮನ ಹರಿಸುತ್ತಿಲ್ಲ. ಟೆಂಡರ್ ಗಳಲ್ಲೂ ಅವ್ಯವಹಾರ ನಡೆದಿದೆ ಎಂದು ವಿದ್ಯಾರ್ಥಿಗಳು ಆಕ್ರೋಶ ಹೊರ ಹಾಕಿದ್ದಾರೆ.

ಅಲ್ಲಿನ ಕುಲಪತಿಗಳು ಕೂಡ ಯಾವುದೇ ಸಮಸ್ಯೆಗೂ ಬಗೆಹರಿಸುತ್ತಿಲ್ಲ ಎಂಬ ಕೋಪದಿಂದ ವಿಸಿ ಗಳ ಕಚೇರಿಗೆ ಹೋಗಿ ಚೇರ್ ಗಳು, ನೇಮ್ ಪ್ಲೇಟ್ ಗಳನ್ನು ಕಿತ್ತು ಬಿಸಾಕಿದ್ದಾರೆ. ನಮ್ಮ ಸಮಸ್ಯೆಗಳಿಗೆ ಸಂಬಂಧಪಟ್ಟ ಅಧಿಕಾರಿಗಳು ಆದಷ್ಟು ಬೇಗ ಸರಿಪಡಿಸಬೇಕು ಎಂಬ ಒತ್ತಾಯ ಕೇಳಿ ಬರುತ್ತಿದೆ.. ಈ ಘಟನೆಯ ಬಳಿಕ ಕುಲಪತಿಗಳ ನೇತೃತ್ವದಲ್ಲಿ ಸಭೆ ಕೂಡ ನಡೆದಿದೆ. ಸಭೆಯ ಬಳಿಕ ವಿದ್ಯಾರ್ಥಿಗಳ ವಿಚಾರಕ್ಕೆ ಯಾವ ನಿರ್ಧಾರವನ್ನು ವಿವಿ ತೆಗೆದುಕೊಳ್ಳುತ್ತದೆ ಎಂಬುದನ್ನು ನೋಡಬೇಕಿದೆ. ಸೌಲಭ್ಯವೇ ಇಲ್ಲದೆ ಇರುವ ವಿದ್ಯಾರ್ಥಿಗಳ ತಾಳ್ಮೆಯ ಕಟ್ಟೆ ಹೊಡೆದ ಪರಿಣಾಮ ಇಂದು ಪ್ರತಿಭಟನೆ ನಡೆದಿದೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now
🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...